ಬೆಂಗಳೂರು:– ಬೆಕ್ಕು ಅಪಹರಣ ಕೇಸ್ ಗೆ ಸಂಬಧಪಟ್ಟಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ಕೊಟ್ಟಿದೆ.
ನೆರೆ ಮನೆಯ ಬೆಕ್ಕನ್ನು ಅಪಹರಿಸಿ ತನ್ನ ಮನೆಯಲ್ಲಿ ಕೂಡಿ ಹಾಕಿದ ಆರೋಪ ಎದುರಿಸುತ್ತಿದ್ದ ವ್ಯಕ್ತಿ ವಿರುದ್ಧದ ವಿಚಾರಣೆಗೆ ಕೋರ್ಟ್ ತಡೆಯಾಜ್ಞೆ ನೀಡಿದೆ.
Skin Care: ಮಳೆಗಾಲದಲ್ಲಿ ಕಾಡುವ ಚರ್ಮದ ಸಮಸ್ಯೆಗಳ ನಿವಾರಣೆಗೆ ಇಲ್ಲಿದೆ ಸರಳ ಪರಿಹಾರ!
ಆರೋಪದಲ್ಲಿ ತಾಹಾ ಹುಸೇನ್ ಎಂಬಾತನಿಗೆ ಹೈಕೋರ್ಟ್ ಮಧ್ಯಂತರ ರಿಲೀಫ್ ಕೊಟ್ಟಿದ್ದು, ಆತನ ವಿರುದ್ಧ ಎಲ್ಲಾ ಮೊಕದ್ದಮೆಗೆ ತಡೆಯಾಜ್ಞೆ ತಂದಿದೆ.
ನಾಗಪ್ರಸನ್ನ ಇದ್ದ ನ್ಯಾಯಪೀಠ ಮಧ್ಯಂತರ ಜಾಮೀನು ನೀಡಿದೆ. ಹುಸೇನ್ ಅವರ ನೆರೆಹೊರೆಯವರು ಡೈಸಿ ಕಾಣೆಯಾದ ಮೇಲೆ ಅವರ ವಿರುದ್ಧ ಪೊಲೀಸ್ ದೂರು ದಾಖಲಿಸಿದರು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 504, 506 ಮತ್ತು 509 ರ ಅಡಿಯಲ್ಲಿ ಪೊಲೀಸರು ಆತನ ಮೇಲೆ ಕ್ರಿಮಿನಲ್ ಬೆದರಿಕೆ, ಶಾಂತಿ ಭಂಗ ಮತ್ತು ಮಹಿಳೆಯ ನಮ್ರತೆಗೆ ಅವಮಾನ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಆಪಾದನೆಯ ತಿರುಳು ಏನೆಂದರೆ, ಪ್ರತಿವಾದಿ ನಂ.2 ರ ಒಡೆತನದ ಡೈಸಿ ಎಂಬ ಹೆಸರಿನ ಬೆಕ್ಕು ಪಕ್ಕದ ಮನೆಗಳ ಗೋಡೆಯಿಂದ ಗೋಡೆಗೆ ಜಿಗಿದು ಕಾಣೆಯಾಗಿತ್ತು. ಆದ್ದರಿಂದ, ಬೆಕ್ಕನ್ನು ಹಿಡಿದಿದ್ದಕ್ಕಾಗಿ ಈ ಅರ್ಜಿದಾರರ ವಿರುದ್ಧ ಮೇಲ್ಕಂಡ ಅಪರಾಧಗಳಿಗೆ ದೂರು ನೀಡಲಾಗಿದೆ. ಅರ್ಜಿದಾರರ ಮನೆಯಲ್ಲಿ ಬೆಕ್ಕು ಇರುವುದು ಸಿಸಿಟಿವಿ ದೃಶ್ಯಾವಳಿಗಳಿಂದ ತಿಳಿದುಬರುತ್ತದೆ ಎಂದು ಆರೋಪಿಸಲಾಗಿದೆ, ಎಂದು ನ್ಯಾಯಾಲಯವು ಹುಸೇನ್ ವಿರುದ್ಧದ ಕ್ರಿಮಿನಲ್ ವಿಚಾರಣೆಗೆ ತಡೆಯಾಜ್ಞೆ ನೀಡಿದೆ.