ಯಾದಗಿರಿ:- ಯಾದಗಿರಿ ಜಿಲ್ಲೆಯಲ್ಲಿ ಅಂತರ್ಜಾತಿ ವಿವಾಹಕ್ಕೆ ಪೋಷಕರ ವಿರೋಧ ಹಿನ್ನಲೆ ಪ್ರೇಮಿಗಳಿಬ್ಬರು ಪೊಲೀಸರ ಮೊರೆ ಹೋದ ಘಟನೆ ಜರುಗಿದೆ.
ಮೇಲ್ಜಾತಿಯ ಯುವತಿ ಜೊತೆ ಕೆಳ ಜಾತಿಯ ಯುವಕ ಮದುವೆಯಾಗಲು ಹೊರಟಿದ್ದಾನೆ ಎಂಬ ಕಾರಣಕ್ಕೆ ಕುಟುಂಬಸ್ಥರ ವಿರೋಧ ವ್ಯಕ್ತವಾಗಿದೆ.
ಬಾಡೂಟಕ್ಕೆ ಹೋದ ಎಚ್ಡಿಕೆ ‘ಕಾವೇರಿ ನೀರು ಕುರಿತ ಸರ್ವಪಕ್ಷ ಸಭೆಗೆ ಬಂದಿಲ್ಲ: ಸಚಿವ ಚಲುವರಾಯಸ್ವಾಮಿ ವ್ಯಂಗ್ಯ!
ಜಿಲ್ಲೆಯ ಶಹಾಪುರ ತಾಲೂಕಿನ ಹುಲಕಲ್ ಗ್ರಾಮದ ರವಿಕಿರಣ್ ಎಂಬಾತ್ ಧಾರವಾಡ ಮೂಲದ ಸುಪ್ರೀತಾ ಎಂಬಾಕೆಯನ್ನ ಪ್ರೀತಿಸುತ್ತಿದ್ದಾನೆ. ಪರಸ್ಪರ ಪ್ರೀತಿ ಮಾಡಿದ ಜೋಡಿ ಈಗ ಮದುವೆಗೆ ಮುಂದಾಗಿದೆ. ಆದ್ರೆ, ಯುವಕ ದಲಿತ ಸಮುದಾಯಕ್ಕೆ ಸೇರಿದ್ರೆ, ಯುವತಿ ಜಂಗಮ ಸಮುದಾಯಕ್ಕೆ ಸೇರಿದ್ದಾಳೆ. ಇದೆ ಕಾರಣಕ್ಕೆ ಯುವತಿ ಕುಟುಂಬಸ್ಥರು ಮದುವೆಗೆ ಒಪ್ಪುತ್ತಿಲ್ಲ. ಮೇಲ್ನೋಟಕ್ಕೆ ಮದುವೆ ಮಾಡಿಸುತ್ತೆವೆ ಎಂದು ಹೇಳುತ್ತಿದ್ದಾರೆ. ಆದರೆ ಮದುವೆ ಹೆಸರಲ್ಲಿ ಏನಾದರೂ ಮಾಡುತ್ತಾರೆ ಎಂದು ಪ್ರೇಮಿಗಳಿಗೆ ಭಯ ಶುರುವಾಗಿದೆ
ರವಿಕಿರಣ್ ಸಹೋದರ ಧಾರವಾಡದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಅದೇ ಕಾಲೇಜಿನಲ್ಲಿ ಸುಪ್ರೀತಾ ಕೂಡ ಪದವಿ ಓದುತ್ತಿದ್ದಾಳೆ. ಸಹೋದರನನ್ನ ನೋಡಿಕೊಂಡು ಮಾತಾಡಿಸಲು ಹೋದಾಗ ರವಿಕಿರಣ್ಗೆ ಸುಪ್ರೀತಾ ಪರಿಚಯವಾಗಿದ್ದಾಳೆ. ಇದೆ ವೇಳೆ ಪರಿಚಯ ಸ್ನೇಹಕ್ಕೆ ತಿರುಗಿದೆ. ಕೆಲ ತಿಂಗಳುಗಳ ಬಳಿಕ ಸ್ನೇಹ ಪ್ರೀತಿಯಾಗಿ ಬದಲಾಗಿದೆ. ಹೀಗಾಗಿ ಪರಸ್ಪರ ಫೋನ್ನಲ್ಲಿ ಕಳೆದ ಒಂದು ವರ್ಷದಿಂದ ಮಾತಾಡುತ್ತಾ ಬಂದಿದ್ದಾರೆ. ಕೊನೆಗೆ ಇಬ್ಬರು ಮದುವೆಯಾಗಲು ಸಹ ಸಿದ್ದರಾಗಿದ್ದರು. ಈ ವಿಚಾರ ಸುಪ್ರೀತಾ ಪೋಷಕರ ಮುಂದೆ ಹೇಳಿದ್ದಾಳೆ. ಆದ್ರೆ, ಪೋಷಕರು ಯುವಕ ಕೆಳ ಜಾತಿಗೆ ಸೇರಿದ್ದರಿಂದ ಮದುವೆಗೆ ವಿರೋಧ ವ್ಯಕ್ತ ಪಡಿಸಿದ್ದಾರೆ.