ನವದೆಹಲಿ:- ಜಾತಿ ಗಣತಿ ನಕಲಿ ಎಂದ ರಾಗಾ ವಿರುದ್ಧ ಮುಗಿಬಿದ್ದ ಎನ್ಡಿಎ ಬಿಹಾರದಲ್ಲಿ ನಿತೀಶ್ ಕುಮಾರ್ ಸರ್ಕಾರ ನಡೆಸಿದ್ದ ಜಾತಿ ಗಣತಿಯನ್ನು ನಕಲಿ ಎಂದ ರಾಹುಲ್ ಗಾಂಧಿ ವಿರುದ್ಧ ಎನ್ಡಿಎ ಮುಗಿಬಿದ್ದಿದೆ. ಮೊನ್ನೆವರೆಗೂ ಬಿಹಾರ ಜಾತಿಗಣತಿಯನ್ನು ಮೆಚ್ಚಿದ್ದ ರಾಹುಲ್ ಗಾಂಧಿ ಈಗ ಅದನ್ನು ನಕಲಿ ಎನ್ನುತ್ತಿರುವುದು ಅಚ್ಚರಿ ಮೂಡಿಸಿದೆ ಎಂದಿದೆ.
ನಿತೀಶ್ ಈ ಹಿಂದೆ ಇಂಡಿ ಕೂಟದಲ್ಲಿ ಜಾತಿಗಣತಿ ಬಗ್ಗೆ ಪ್ರಸ್ತಾಪಿಸ್ತಿದೆ ರಾಹುಲ್ ಮೌನ ವಹಿಸ್ತಿದ್ರು ಎಂದು ಜೆಡಿಯು ಆರೋಪಿಸಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಏಕೆ ಜಾತಿ ಗಣತಿ ವರದಿಯನ್ನು ಬಹಿರಂಗ ಮಾಡ್ತಿಲ್ಲ. ಈ ಬಗ್ಗೆ ರಾಹುಲ್ ಏಕೆ ಮಾತಾಡಲ್ಲ. ಇದು ಅವರ ದ್ವಂದ್ವ ನಿಲುವಲ್ಲವೇ ಎಂದು ಕೇಳಿದೆ. ಇನ್ನು, ಬಿಹಾರದಲ್ಲಿ ಜಾತಿಗಣತಿಗೆ ಕಾಂಗ್ರೆಸ್ ಬೆಂಬಲ ನೀಡಿತ್ತು ಎಂಬುದನ್ನು ಸಚಿವ ವಿಜಯ್ ಕುಮಾರ್ ಚೌಧರಿ ನೆನಪಿಸಿದ್ದಾರೆ. ಸಮೀಕ್ಷೆಯ ಲೋಪಗಳನ್ನು ಸ್ಪಷ್ಟವಾದ ಆಧಾರಗಳೊಂದಿಗೆ ತೋರಿಸಿದ್ರೆ ಅದನ್ನು ಸರಿಪಡಿಸಿಕೊಳ್ಳಲು ಸಿದ್ಧ ಎಂದಿದ್ದಾರೆ.