ಬೆಳಗಾವಿ : ಕನ್ನಡ ಮಾತಾಡು ಎಂದಿದ್ದಕ್ಕೆ ಬಸ್ ಕಂಡಕ್ಟರ್ ಮೇಲಿನ ಹಲ್ಲೆ ಪ್ರಕರಣವನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಖಂಡಿಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಇಂತಹ ಘಟನೆಗಳನ್ನ ಖಂಡಿಸುತ್ತೇನೆ. ಘಟನೆ ನಡೆದು ಐದೇ ನಿಮಿಷಕ್ಕೆ ಕಮಿಷನರ್ ಅವರಿಗೆ ಮಾತಾಡಿದೆ. ಯಾರು ತಪ್ಪಿತಸ್ಥರಿದ್ದಾರೆ ಅವರನ್ನ ತಕ್ಷಣ ಅರೆಸ್ಟ್ ಮಾಡುವಂತೆ ಹೇಳಿದ್ದೆ. ನಾವೆಲ್ಲರೂ ಮೊದಲು ಭಾರತೀಯರು, ಕನ್ನಡಿಗರು ಎಂದರು.
ಸ್ವರಾಜ್ಯದ ಬಗ್ಗೆ ಮಾತಾಡಿದಾಗ ನಾಲ್ಕೈದು ಜನ ಪುಂಡರು ಬಂದು. ಭಾಷಾ ವಿವಾದ ಎಳೆದು ರಾಜಕೀಯ ಬೆಳೆ ಬೇಯಿಸಿಕೊಳ್ಳುತ್ತಿದ್ದಾರೆ ಇದನ್ನ ಖಂಡಿಸುತ್ತೇನೆ. ನನ್ನ ಕ್ಷೇತ್ರದಲ್ಲಿ ಭಾಷಾ ವಿವಾದ ಕಿತ್ತು ಹಾಕಿದ್ದೇವೆ. ಸರ್ಕಾರಿ ನೌಕರ ಮೇಲೆ ಕೈ ಮಾಡಿದ್ದು ಅಕ್ಷಮ್ಯ ಅಪರಾಧ. ತಪ್ಪಿತಸ್ಥರಿಗೆ ಶಿಕ್ಷೆಯಾಗುವ ರೀತಿ ನಾವೆಲ್ಲಾ ಮಾಡುತ್ತೀವಿ ಎಂದರು. ಇನ್ನು, ಕರ್ನಾಟಕ ರಾಜ್ಯ ಬೇರೆ ಅಲ್ಲಾ ಇನ್ನೊಂದು ರಾಜ್ಯ ಬೇರೆಯಲ್ಲ. ಆ ರಾಜ್ಯದ ಜನರು ನಮ್ಮ ಬಸ್ ಡ್ರೈವರ್ ಗಳಿಗೆ ಧಮಕಿ ಕೊಡುವುದು ನಿಲ್ಲಬೇಕು. ಇದನ್ನ ಇಲ್ಲಿಗೆ ಮುಗಿಸಬೇಕು ಎಂದು ಹೆಬ್ಬಾಳ್ಕರ್ ಮನವಿ ಮಾಡಿದರು.
ಇನ್ನು ಕಂಡ್ಕರ್ ಮೇಲಿನ ಪೋಕ್ಸೋ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿ, ಸ್ಥಳೀಯ ಸಿಪಿಐ ಕರ್ತವ್ಯ ನಿಭಾಯಿಸುವುದರಲ್ಲಿ ವಿಫಲರಾಗಿದ್ದಾರೆ ಅನ್ನೋದನ್ನ ನಾನು ಕೇಳಿದ್ದೇನೆ. ಸುಮಧುರವಾದ ವಾತಾವರಣ ಇದನ್ನ ಕೆಡಸಬೇಡಿ. ಇದರಲ್ಲಿ ಸ್ಥಳೀಯ ಸಿಪಿಐ ಅವರು ಗಮನಕ್ಕೆ ತರದೇ ಪೋಕ್ಸೋ ಕೇಸ್ ಮಾಡಿದ್ದಾರೆ. ನಾವು ಹೇಳಿದ ಮೇಲೆಯೂ ರಾತ್ರಿ 12 ಗಂಟೆಗೆ ಕೇಸ್ ಮಾಡಿದ್ದಾರೆ. ಇದರ ಬಗ್ಗೆ ಗೃಹಸಚಿವರಿಗೆ ಮತ್ತು ಡಿಜಿ ಅವರಿಗೆ ಮಾತಾಡಿದ್ದೇನೆ ಎಂದರು.