ಬೆಂಗಳೂರು:- ಮಗಳಿಂದಲೇ ತಾಯಿ ಕೊಲೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗ್ನೇಯ ವಿಭಾಗ ಡಿಸಿಪಿ ಸಾರಾ ಫಾತೀಮ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಒಂದು ಕೊಲೆ ಪ್ರಕರಣ ದಾಖಲಿಸ್ತೀವಿ. ಕೊಲೆಯಾಗಿರೋ ಮಹಿಳೆ 46 ವರ್ಷದ ಮಹಿಳೆ ಜಯಲಕ್ಷ್ಮೀ.
ಒಬ್ಬ ಮಹಿಳೆ ಮತ್ತು ಪುರುಷನನ್ನು ಬಂಧನ ಮಾಡಿದ್ದೀವಿ. ಆರಂಭದಲ್ಲಿ ಕೊಲೆಯಾಗಿರೋ ಶಂಕೆಯಿತ್ತು. ನಂತರ ಪೋಸ್ಟ್ ಮಾರ್ಟಮ್ ಮೂಲಕ ಕೊಲೆ ಆಗಿರೋದು ಕನ್ಫರ್ಮ್ ಆಗಿದೆ. ಆರಂಭದಲ್ಲಿ ಮಗಳು ಅನುಮಾನಾಸ್ಪದ ಹೇಳಿಕೆ ನೀಡಿದ್ದರು.
ತಾಯಿಕೆ ಆರೋಗ್ಯ ಸರಿ ಇರಲಿಲ್ಲ ಅನಂತರ ಬಿದ್ದು ಸಾವಾಗಿದ್ದಾರೆ ಎಂದಿದ್ದರು. ಸದ್ಯ ಕೊಲೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದೇವೆ ಎಂದು ಹೇಳಿಕೆ ಕೊಟ್ಟಿದ್ದಾರೆ.