ಬೆಂಗಳೂರು:- ಜೈದ್ ಖಾನ್ ನಿರ್ಮಾಣದ ಕಲ್ಟ್ ಸಿನಿಮಾ ಚಿತ್ರೀಕರಣ ವೇಳೆ ಡ್ರೋಣ್ ಗೆ ಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಜಮೀರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಡ್ರೋಣ್ ವಿಚಾರ ನನ್ನ ಗಮನಕ್ಕೆ ಬಂದಿದೆ. ಚಿತ್ರೀಕರಣ ವೇಳೆ ಡ್ರೋಣ್ ಕ್ಯಾಮೆರಾಗೆ ಡ್ಯಾಮೆಜ್ ಆಗಿದೆ. ಡ್ರೋನ್ ಹಾರಿಸೋದು ಅವರ ಜವಾಬ್ದಾರಿ. ಜಾಸ್ತಿ ಹೈಟ್ ಹಾರಿಸಿ ಡ್ಯಾಮೆಜ್ ಆಗಿದೆ. ಅದಕ್ಕೆ ಯಾರು ಹೊಣೆಯಾಗ್ತಾರೆ? ಆದರು ನಷ್ಟ ಕೊಡೋದಾಗಿ ನನ್ನ ಮಗ ಒಪ್ಪಿಕೊಂಡಿದ್ದಾನೆ.
ತಪ್ಪು ಡ್ರೋಣ್ ಆಪರೇಟರ್ ದೇ. ಅವನು ಬಡವ ಇದ್ದಾನೆ,ಅದಕ್ಕಾಗಿ ಸಹಾಯ ಮಾಡಬೇಕು.ನನ್ನ ಮಗನೆ ಸಹಾಯ ಮಾಡೋದಾಗ ಹೇಳಿದ್ದಾನೆ ಎಂದರು.