ಕಲಘಟಗಿ:- ವಕೀಲನಿಂದ ಕಕ್ಷಿದಾರ ಹಾಗೂ ತಾಯಿ ಮೇಲೆ ನಡೆದ ಹಲ್ಲೆ ಕೇಸ್ ಗೆ ಸಂಬಂಧಿಸಿದಂತೆ ಪೊಲೀಸರಿಂದ ತನಿಖೆ ಮುಂದುವರಿದಿದೆ. ನ್ಯಾಯಾಲಯದಲ್ಲಿನ ಉಚಿತ ತಾಲೂಕ ಕಾನೂನು ಸಮೀತಿ ಹಾಗೂ ವಕೀಲರ ಸಂಘದ ಕಚೇರಿಯಲ್ಲಿ ಆರೋಪಿತನಾದ ಕಲ್ಲಪ್ಪ ಗುಡಿಹಾಳ, ವಕೀಲರು ಜೆ.ಎಮ್.ಎಫ್.ಸಿ ನ್ಯಾಯಾಲಯ ಕಲಘಟಗಿ ಇವರು
ಕಕ್ಷಿದಾರರಿಗೆ ಗೌರವಾನ್ವಿತ ನ್ಯಾಯಾಧೀಶರು ನಿಮ್ಮ ವಕೀಲರಿಗೆ ಕರೆದುಕೊಂಡು ಬರುವಂತೆ ಹೇಳಿರುತ್ತಾರೆ ಅಂತಾ ಕರೆಯಲು ಹೋದಾಗ ಕೆಟ್ಟ ಬೈಗುಳ ದಿಂದ ಬೈದಾಡಿ ನೆಲಕ್ಕೆ ಕೆಡವಿ ಹೊಡೆ ಬಡೆ ಮಾಡಿದ್ದಲ್ಲದೇ ನಿನಗೆ ಹೊಡೆದ ವಿಷಯವನ್ನು ನ್ಯಾಯಾಧೀಶರ ಮುಂದೆ ಹೇಳುತ್ತಿಯಾ ಮಗನೇ ಅಂತಾ ಅಂದು ಕಕ್ಷಿದಾರನ ಅಂಗಿಯ ಕೊರಳ ಪಟ್ಟಿ ಹಿಡಿದು ಎಳೆದುಕೊಂಡು ವಕೀಲರ ಸಂಘದ ಕಚೇರಿ ಒಳಗೆ ಕರೆದುಕೊಂಡು ಹೋಗಿ ಕಕ್ಷಿದಾರನಿಗೆ ಜಾತಿ ಎತ್ತಿ ಕೆಟ್ಟ ಬೈಗುಳ ದಿಂದ ಬೈಯಾಡಿ,
ಒದ್ದು ನೆಲಕ್ಕೆ ಕೆಳಗೆ ಕೆಡವಿ ಬಿಡಿಸಲು ಹೋದ ಕಕ್ಷೀದಾರನ ತಾಯಿಗೆ ಸಾರ್ವಜನೀಕವಾಗಿ ತಲೆ ಕೂದಲು ಹಿಡಿದು ಒದ್ದು ಜಗ್ಗಿ ನೆಲಕ್ಕೆ ಕೆಡವಿ ಹೊಡಿ ಬಡಿ ಮಾಡಿ ಜೀವಧ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿ. ತನಿಖೆಯನ್ನು ತನಿಖಾಧಿಕಾರಿಗಳು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಧಾರವಾಡ ತನಿಖೆಯನ್ನು ಮುಂದುವರೆಸಿದ್ದಾರೆ.