ಬಾಲಿವುಡ್ ಸೆಲಬ್ರಿಟಿಗಳು ಪೈಪೋಟಿಗೆ ಬಿದ್ದಂತೆ ಮಾರುಕಟ್ಟೆಯಲ್ಲಿರುವ ಲಭ್ಯವಿರುವ ಅತ್ಯಂತ ಐಷಾರಾಮಿ ಕಾರುಗಳನ್ನು ಖರೀದಿಸುತ್ತಾರೆ.
ಸಿನಿಮಾ ರಂಗದ ನಟರಿಗೆ ಮಾತ್ರವಲ್ಲದೇ ನಟಿಯರಿಗೂ ಕೂಡ ಐಷಾರಾಮಿ ಕಾರುಗಳ ಬಗ್ಗೆ ಕ್ರೇಜ್ ಹೆಚ್ಚು ಇರುತ್ತದೆ.
ಹೆಚ್ಚಾಗಿ ಐಷಾರಾಮಿ ಕಾರುಗಳಲ್ಲಿ ಓಡಾಡಲು ಇಷ್ಟ ಪಡುತ್ತಾರೆ. ಇದರಿಂದ ಮಾರುಕಟ್ಟೆಗೆ ಲಗ್ಗೆ ಇಡುವ ಹೊಸ ಐಷಾರಾಮಿ ಕಾರುಗಳನ್ನು ಖರೀದಿಸುವುದು ಸೆಲಬ್ರಿಟಿಗಳ ನಡುವೆ ಒಂದು ಟ್ರೆಂಡ್ ಆಗಿದೆ. ಅದರಲ್ಲಿಯೂ ಬಾಲಿವುಡ್ ನಟಿಯರು ಆಗ್ಗಾಗ ಐಷಾರಾಮಿ ಕಾರುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ವರ್ಷ ಬಾಲಿವುಡ್ ನಟಿಯರು ಖರೀದಿಸಿದ ಕಾರುಗಳ ಬಗ್ಗೆ ಮಾಹಿತಿ ಇಲ್ಲಿದೆ.
ಶ್ರದ್ಧಾ ಕಪೂರ್: ಇತ್ತೀಚೆಗೆ ಬಾಲಿವುಡ್ ಖ್ಯಾತ ನಟಿ ಶ್ರದ್ಧಾ ಕಪೂರ್ ಭಾರತದಲ್ಲಿ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಹೊಚ್ಚಹೊಸ ಲ್ಯಾಂಬೋರ್ಗಿನಿ ಹುರಾಕನ್ ಖರೀದಿಸಿದ್ದಾರೆ. ಶ್ರದ್ಧಾ ಕಪೂರ್ ಅವರು 4.5 ಕೋಟಿ ಮೌಲ್ಯದ ಲ್ಯಾಂಬೋರ್ಗಿನಿ ಹುರಾಕನ್ ಟೆಕ್ನಿ ಮಾದರಿಯನ್ನು ಖರೀದಿಸಿದ್ದಾರೆ.
ಪೂಜಾ ಹೆಗ್ಡೆ: ಬಾಲಿವುಡ್, ಟಾಲಿವುಡ್ ಹಾಗೂ ಕಾಲಿವುಡ್ ಸಿನಿರಂಗದಲ್ಲಿ ಜನಪ್ರಿಯತೆ ಗಳಿಸಿರುವ ನಟಿ ಪೂಜಾ ಹೆಗ್ಡೆ (Pooja Hegde), ರೂ.4 ಕೋಟಿ ಮೌಲ್ಯದ ಹೊಚ್ಚ ಹೊಸ ಐಷಾರಾಮಿ ರೇಂಜ್ ರೋವರ್ ಎಸ್ಯುವಿಯನ್ನು ತಿಂಗಳ ಹಿಂದೆ ಖರೀದಿಸಿದ್ದಾರೆ.
ರಾಕುಲ್ ಪ್ರೀತ್ ಸಿಂಗ್: ಬಾಲಿವುಡ್ ನಟಿ ರಾಕುಲ್ ಪ್ರೀತ್ ಸಿಂಗ್ ಅವರು ಮರ್ಸಿಡಿಸ್ ಮರ್ಸಿಡಿಸ್ GLS600 ಎಸ್ಯುವಿಯನ್ನು ಈ ವರ್ಷ ಖರೀದಿಸಿದ್ದಾರೆ. ಇದೇ ಬಹುಕೊಟಿ ಬೆಲೆಯ ಕಾರು ದೀಪಿಕಾ ಪಡುಕೋಣೆ, ಕೃತಿ ಸನನ್, ಮತ್ತು ಅಜಯ್ ದೇವಗನ್ ಮತ್ತು ಅರ್ಜುನ್ ಕಪೂರ್ನಂತಹ ಹಲವಾರು ಸ್ಟಾರ್ ನಟ, ನಟಿಯರು ಹೊಂದಿದ್ದಾರೆ.
ಜಾಕ್ವೆಲಿನ್ ಫೆರ್ನಾಂಡಿಸ್: ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಅವರು ಇತ್ತೀಚೆಗೆ 2.03 ಕೋಟಿ ರೂ.ಗಳ ಬೆಲೆಯ BMW i7 ಐಷಾರಾಮಿ ಎಲೆಕ್ಟ್ರಿಕ್ ಸೆಡಾನ್ ಅನ್ನು ಹೊಂದಿದ್ದಾರೆ
ಆಲಿಯಾ ಭಟ್: ಈ ವರ್ಷ ದೇಶಾದ್ಯಂತ ಗಮನ ಸೆಳೆದ ನಟಿ ಆಲಿಯಾ ಭಟ್ ಎಂದು ಹೇಳಬಹುದು. ಈ ವರ್ಷ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಆಲಿಯಾ ಭಟ್, ಹೊಚ್ಚ ಹೊಸ ರೇಂಜ್ ರೋವರ್ ಆಟೋಬಯೋಗ್ರಫಿ ಲಾಂಗ್-ವೀಲ್-ಬೇಸ್ ಐಷಾರಾಮಿ ಎಸ್ಯುವಿ ಖರೀದಿಸಿದ್ದರು. ಅವರು ಖರೀದಿಸಿದ ಬೂದು ಬಣ್ಣದ ರೇಂಜ್ ರೋವರ್ ಕಾರು ರೂ.3 ಕೋಟಿಗೂ ಹೆಚ್ಚು ಮೌಲ್ಯದ್ದಾಗಿದೆ.