ಐದು ವರ್ಷದ ಮಗುವನ್ನು ಕೊಲೆ ಮಾಡಿ ಬಳಿಕ ಮಗುವಿನ ದೇಹವನ್ನು ಸೂಟ್ ಕೇಸ್ ನಲ್ಲಿ ತುಂಬಿಸಿ ಸಾಗಿಸಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಅಮೆರಿಕಾದ ಲಾಸ್ ಏಂಜಲೀಸ್ ನಲ್ಲಿ ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ.
ಘಟನೆ ನಡೆದು ಎರಡು ವರ್ಷಗಳಾಗಿದ್ದು ಆದರೆ ತಾಯಿಯನ್ನು ಈಗ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂಡಿಯಾನದ ಡೆಜಾನೆ ಲೂಡಿ ಆಂಡರ್ಸನ್(38) ಎಂಬಾಕೆಯ ಐದು ವರ್ಷದ ಪುತ್ರ ಕೈರೋ ಅಮ್ಮರ್ ಜೋರ್ಡಾನ್ ಎಂಬಾತ ಎರಡು ವರ್ಷದ ಹಿಂದೆ ಮೃತಪಟ್ಟಿದ್ದ. ಆತನಿಗೆ ಹೊಟ್ಟೆ ನೋವಿಗೆ ಸಂಬಂಧಿಸಿ ನೀಡಿದ್ದ ಎಲೆಕ್ಟ್ರೋಲೈಟ್ ಅನ್ನು ನೀಡಲಾಗಿತ್ತು. ಇದು ಅಡ್ಡಪರಿಣಾಮ ಬೀರಿ ಕೈರೋ ಮೃತಪಟ್ಟಿದ್ದ.
ಇದು ಬಹಿರಂಗವಾದರೆ ತೊಂದರೆಯಾಗುತ್ತದೆ ಎನ್ನುವ ಕಾರಣ ನೀಡಿ ಆಕೆ ವಿಶೇಷವಾದ ಸೂಟ್ಕೇಸ್ನಲ್ಲಿ ದೇಹವನ್ನು ತುಂಬಿ ವಾಷಿಂಗ್ಟನ್ ಗ್ರಾಮೀಣ ಪ್ರದೇಶದಲ್ಲಿ ಎಸೆದಿದ್ದಳು. ವ್ಯಕ್ತಿಯೊಬ್ಬ ಸಮೀಪದಲ್ಲಿಯೇ ಅಣಬೆ ಹುಡುಕಲು ಬಂದಾಗ ಸೂಟ್ಕೇಸ್ ಕಂಡು ಬಂದಿತ್ತು. ಇದರಲ್ಲಿ ಮಗುವಿನ ಶವ ಪತ್ತೆಯಾಗಿತ್ತು.
ಆನಂತರ ದೇಹವನ್ನು ವಶಕ್ಕೆ ಪಡೆದಿದ್ದ ಪೊಲೀಸರು ಮಗುವಿನ ಪೋಷಕರ ಪತ್ತೆ ಹಾಗೂ ಸಾವಿಗೆ ನಿಖರ ಕಾರಣ ಪತ್ತೆಗೆ ಮುಂದಾಗಿದ್ದರು. ಎಲೆಕ್ಟ್ರೋಲೈಟ್ ಬಳಕೆಯಲ್ಲಿ ವ್ಯತ್ಯಾಸವಾಗಿ ವಾಂತಿ ಹಾಗೂ ಬೇಧಿಯಿಂದ ಬಾಲಕ ಮೃತಪಟ್ಟಿದ್ದಾನೆ ಎನ್ನುವುದು ತಿಳಿದಿತ್ತು. ಆನಂತರ ಮಗುವಿನ ತಾಯಿಯನ್ನು ಪತ್ತೆ ಮಾಡಿದ್ದರು.
ಆಗಲೇ ಇಂಡಿಯಾನ ರಾಜ್ಯ ಪೊಲೀಸರು ಆಗಲೇ ಆಂಡರ್ಸನ್ ವಿರುದ್ದ ನಿರ್ಲಕ್ಷ್ಯ, ಕೊಲೆ ಪ್ರಕರಣವನ್ನು ದಾಖಲಿಸಿದ್ದರು. ಆದರೆ ಆಕೆ ನಾನಾ ಕಾರಣ ನೀಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಳು.
ಈ ಕುರಿತು ನ್ಯಾಯಾಲಯದಲ್ಲಿ ಹೋರಾಟ ಮಾಡುವುದಾಗಿ ಹೇಳಿದ್ದಳು. ಪೊಲೀಸರು ಆಕೆಯನ್ನು ಬಂಧಿಸಲು ಪ್ರಯತ್ನಿಸಿದರೂ ಆಗಿರಲಿಲ್ಲ. ಮೂರು ದಿನದ ಹಿಂದೆ ಲಾಸ್ಏಂಜಲೀಸ್ ನಲ್ಲಿ ರೈಲು ಹತ್ತಲು ಹೊರಟಿದ್ದ ಆಕೆಯನ್ನು ಪೊಲೀಸರು ಕೊನೆಗೂ ಬಂಧಿಸಿದ್ದರು.