ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಮುಕ ಪ್ರಾಣಿಗಳ ಮೇಲಿನ ಕ್ರೌರ್ಯ ಜಾಸ್ತಿ ಆಗುತ್ತಿವೆ. ಮನುಷ್ಯತ್ವವೇ ಇಲ್ಲ ಎಂಬಂತೆ ಮನುಷ್ಯರು ವರ್ತನೆ ಮಾಡುತ್ತಿದ್ದಾರೆ.
ತನ್ನ ಪಾಡಿಗೆ ಇದ್ದ ಬೀದಿ ನಾಯಿಗಳ ಮೇಲೆ ಕಾರು ಚಾಲಕರು ವಿಕೃತಿ ಮೆರೆಯುತ್ತಿದ್ದಾರೆ. ಜೆಪಿ ನಗರ ಬೆನ್ನಲ್ಲೇ…ಈಗ ಸಹಕಾರ ನಗರದಲ್ಲೂ ಮತ್ತೊಂದು ಪ್ರಕರಣ ಬಯಲಿಗೆ ಬಂದಿದೆ. ಸಹಕಾರ ನಗರದಲ್ಲಿ ಬೀದಿ ನಾಯಿ ಮೇಲೆ ಹರಿದ ರೆಡ್ ಕಲರ್ ಥಾರ್ ನಡೆಸಿದೆ.
ಅಪ್ಪ-ಚಿಕ್ಕಪ್ಪನ ಜೊತೆ ವಿನೀಶ್ ಸಂಭ್ರಮ: ದಾಸನ ಮನೆಯಲ್ಲಿ ಸಂಕ್ರಾಂತಿ ಜೋರೋ ಜೋರು!
ಸಹಕಾರ ನಗರದ ಎಫ್ ಬ್ಲಾಕ್ ನ 14ನೇ ಮುಖ್ಯರಸ್ತೆಯ ಫೋಸ್ಟ್ ಆಫೀಸ್ ಬಳಿ ಘಟನೆ ಜರುಗಿದೆ. ರೆಡ್ ಕಲರ್ ಥರ್ ಚಾಲಕನ ವಿಕೃತಿ ಸಿಸಿಟಿವಿ ಕ್ಯಾಮೆರದಲ್ಲಿ ಸೆರೆಯಾಗಿದೆ. ಜನವರಿ 4ರಂದು ನಡೆದ ಘಟನೆಗೆ ಸ್ಥಳೀಯ ನಿವಾಸಿಗಳು, ಪ್ರಾಣಿ ಪ್ರಿಯರ ಆಕ್ರೋಶ ಹೊರ ಹಾಕುತ್ತಿದ್ದಾರೆ. ಅಕ್ಕ-ಪಕ್ಕದ ನಿವಾಸಿಗಳಿಗೆ ನಾಯಿ ಹಾಗೂ ಮರಿ ಬಹಳ ಹತ್ತಿರವಾಗಿದ್ದರು. ಏರಿಯಾದ ನಿವಾಸಿಗಳು ನಿತ್ಯ ತಾಯಿ ಹಾಗೂ ಮರಿಗಳಿಗೆ ಊಟ ನೀಡ್ತಿದ್ದರು.
ಡಿಸೆಂಬರ್ 4ರ ನಡುರಾತ್ರಿ ರಸ್ತೆಯಲ್ಲಿ ತಮ್ಮ ಪಾಡಿಗೆ ಆಟ ಆಡ್ತಿದ್ದವು. ಆಗ ವೇಗವಾಗಿ ಬಂದ ಥಾರ್ ಚಾಲಕ ಏಕಾಏಕಿ ನಾಯಿಗಳ ಮೇಲೆ ಕಾರು ಹರಿಸಿದ್ದಾನೆ. ಒಂದು ನಾಯಿ ಮರಿ ಕಾರಿನ ಚಕ್ರಕ್ಕೆ ಸಿಕ್ಕು ಸ್ಥಳದಲ್ಲಿ ಒದ್ದಾಡಿದೆ. ನೋವು ತಾಳಲಾರದೆ ನರಳಿ-ನರಳಿ ನಾಯಿ ಮರಿ ಪ್ರಾಣ ಬಿಟ್ಟಿದೆ. ನಾಯಿ ಮರಿ ಕಳೆದುಕೊಂಡ ಸ್ಥಳೀಯರು ಕಂಬನಿ ಮಿಡಿದಿದ್ದಾರೆ.
ಮನುಷ್ಯತ್ವ ಮರೆತ ಕ್ರೂರಿಯ ವಿರುದ್ಧ ಸ್ಥಳೀಯ ನಿವಾಸಿಗಳು ಆಕ್ರೋಶ ಹೊರ ಹಾಕಿದ್ದಾರೆ. ಆರೋಪಿ ವಿರುದ್ಧ ಕ್ರಮಕ್ಕೆ ಸ್ಥಳೀಯ ನಿವಾಸಿಗಳು ಪೊಲೀಸರಿಗೆ ದೂರು ಕೊಟ್ಟಿದ್ದಾರೆ.
ದೂರಿನ ಅನ್ವಯ ಹೆಬ್ಬಾಳ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.