ಎರಡು ದಿನಗಳ ಹಿಂದೆಯಷ್ಟೇ ಅನಾರೋಗ್ಯದ ಕಾರಣದಿಂದಾಗಿ ಖಾಸಗಿ ಆಸ್ಪತ್ರೆಗೆ (Hospital) ದಾಖಲಾಗಿದ್ದ ನಟ, ರಾಜಕಾರಣಿ ವಿಜಯಕಾಂತ್ ಅವರ ಆರೋಗ್ಯದಲ್ಲಿ ಅಲ್ಪ ಚೇತರಿಕೆ ಕಂಡಿದೆ ಎಂದು ಮಾಧ್ಯಮಗಳ ವರದಿ ಮಾಡುವೆ. ಜೊತೆಗೆ ಅವರಿಗೆ ಚಿಕಿತ್ಸೆಯನ್ನು ವೈದ್ಯರು ಐಸಿಯುವಿನಲ್ಲೇ ಮುಂದುವರೆಸಿದ್ದಾರೆ.
ತಮಿಳು ನಾಡಿನ ಡಿಎಂಡಿಕೆ (DMDK) ಮುಖ್ಯಸ್ಥರೂ ಆಗಿರುವ ಕ್ಯಾಪ್ಟನ್ ವಿಜಯಕಾಂತ್ ಕಳೆದೆರಡು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ಎರಡು ದಿನಗಳ ಹಿಂದೆ ವರದಿ ಮಾಡಿವೆ.
ಕ್ಯಾಪ್ಟನ್ ವಿಜಯಕಾಂತ್ (Vijayakanth) ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದೆ ಎಂದು ಮಾಧ್ಯಮಗಳು ವರದಿ ಮಾಡಿದರೆ, ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ ಪಕ್ಷ ಅದನ್ನು ನಿರಾಕರಿಸಿತ್ತು. ಮಾಧ್ಯಮಗಳು ಪ್ರಸಾರ ಮಾಡುವಂತೆ ಕ್ಯಾಪ್ಟನ್ ಅವರ ಆರೋಗ್ಯ ತೀರಾ ಹದಗೆಟ್ಟಿಲ್ಲ. ಜ್ವರ ಮತ್ತು ಶೀತದಿಂದ ಅವರು ಬಳಲುತ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ಅವರು ಮನೆಗೆ ಬರಲಿದ್ದಾರೆ ಎಂದು ಹೇಳಿದ್ದರು