IPL 2025ರ ಆಟಗಾರರ ರಿಟೇನ್ ಲಿಸ್ಟ್ ಬಿಡುಗಡೆಗೆ ಇಂದೇ ಡೆಡ್ ಲೈನ್ ಆಗಿದ್ದು, ಎಲ್ಲಾ ಪ್ರಾಂಚೈಸಿಗಳು ತಾವು ಉಳಿಸಿಕೊಳ್ಳುವ ಪ್ರಮುಖ ಆಟಗಾರರನ್ನು ರಿಲೀಸ್ ಮಾಡಲಿದೆ.
ಟ್ರಾಫಿಕ್ ರೂಲ್ಸ್ ಬ್ರೇಕ್: ಬೆಂಗಳೂರಿನಲ್ಲಿ ಒಂದೇ ದಿನ ದಾಖಲಾದ ಕೇಸ್ ಗಳೆಷ್ಟು ಗೊತ್ತಾ!?
ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಐಪಿಎಲ್ ಮೆಗಾ ಹರಾಜಿಗೂ ಮುನ್ನ ನಾಲ್ವರನ್ನು ರಿಟೈನ್ ಮಾಡಿಕೊಳ್ಳುವುದು ಖಚಿತವಾಗಿದೆ. ಈ ನಾಲ್ವರಲ್ಲಿ ಪ್ರಸ್ತುತ ತಂಡದ ನಾಯಕ ಶ್ರೇಯಸ್ ಅಯ್ಯರ್ ಇಲ್ಲ. ಹಾಗೆಯೇ ಆ್ಯಂಡ್ರೆ ರಸೆಲ್ ಹಾಗೂ ಮಿಚೆಲ್ ಸ್ಟಾರ್ಕ್ ಅವರನ್ನು ಸಹ ಕೆಕೆಆರ್ ಬಿಡುಗಡೆ ಮಾಡಿದೆ ಎಂದು ತಿಳಿದು ಬಂದಿದೆ.
ಇನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ರಿಟೈನ್ ಮಾಡಿಕೊಂಡಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ…
* ಸುನಿಲ್ ನರೈನ್
* ರಿಂಕು ಸಿಂಗ್
* ವರುಣ್ ಚಕ್ರವರ್ತಿ
* ಹರ್ಷಿತ್ ರಾಣಾ
ಇನ್ನು ಕೆಕೆಆರ್ ತಂಡವು ನಾಲ್ವರನ್ನು ಉಳಿಸಿಕೊಂಡಿರುವ ಕಾರಣ ಇಬ್ಬರ ಮೇಲೆ ಆರ್ಟಿಎಂ ಆಯ್ಕೆಯನ್ನು ಬಳಸಿಕೊಳ್ಳಬಹುದು.