ಟೀಂ ಇಂಡಿಯಾ ಪಾಲಿಗೆ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ತಲೆನೋವಾಗಿದ್ದಾರೆ. ಹೌದು ಮರ್ರೆ ವಿಶ್ವಕಪ್ ಗೆದ್ದ ಬಳಿಕ ನಮ್ಮ ಕ್ಯಾಪ್ಟನ್ ಫಾರ್ಮ್ ಕಳೆದು ಕೊಂಡಿದ್ದಾರೆ. ಇದು ತಂಡಕ್ಕೆ ತುಂಬಾ ಹೊಡೆತ ಕೊಡುತ್ತಿದೆ.
ಹುಬ್ಬಳ್ಳಿ ಸಿಲಿಂಡರ್ ಬ್ಲಾಸ್ಟ್: ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವು, ಮುಗಿಲು ಮುಟ್ಟಿದ ಆಕ್ರಂದನ!
ಬಾರ್ಡರ್ ಗವಾಸ್ಕರ್ ಟ್ರೋಫಿಯ 4ನೇ ಟೆಸ್ಟ್ ಪಂದ್ಯ ಮೆಲ್ಬೋರ್ನ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಮೊದಲ ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ತಂಡ ಬೃಹತ್ ಮೊತ್ತದ ರನ್ಗಳನ್ನು ಗಳಿಸಿದೆ. ಈ ಪಂದ್ಯವನ್ನು ಭಾರತ ಗೆಲ್ಲಲೇಬೇಕಾದ ಅನಿರ್ವಾಯತೆ ಇದೆ. ಆದರೆ ಟೀಮ್ ಇಂಡಿಯಾ ಪರ ಓಪನರ್ ಆಗಿ ಕ್ರೀಸ್ಗೆ ಆಗಮಿಸಿದ ರೋಹಿತ್ ಶರ್ಮಾ ಮತ್ತೆ ಜವಾಬ್ದಾರಿ ಮರೆತಿದ್ದು ಕೇವಲ 3 ರನ್ಗೆ ಔಟ್ ಆಗಿದ್ದಾರೆ.
ಟಾಸ್ ಗೆದ್ದುಕೊಂಡ ಆಸ್ಟ್ರೇಲಿಯಾ ಮೊದಲ ದಿನ ಭರ್ಜರಿ ಬ್ಯಾಟಿಂಗ್ ಮಾಡಿತ್ತು. 6 ವಿಕೆಟ್ಗೆ 311 ರನ್ಗಳನ್ನು ಗಳಿಸಿ ಇಂದು ಬ್ಯಾಟಿಂಗ್ ಮುಂದುವರೆಸಿತ್ತು. ಇಂದು ಉತ್ತಮ ಬ್ಯಾಟಿಂಗ್ ಮಾಡಿದ ಆಸಿಸ್ ಪ್ಲೇಯರ್ಸ್ 474 ರನ್ಗೆ ಆಲೌಟ್ ಆಗಿದೆ. ಇದಾದ ಮೇಲೆ ಮೊದಲ ಇನ್ನಿಂಗ್ಸ್ನ ಬ್ಯಾಟಿಂಗ್ ಮಾಡಲು ಟೀಮ್ ಇಂಡಿಯಾ ಓಪನರ್ಸ್ ಯಶಸ್ವಿ ಜೈಸ್ವಾಲ್ ಹಾಗೂ ಕ್ಯಾಪ್ಟನ್ ರೋಹಿತ್ ಶರ್ಮಾ ಕ್ರೀಸ್ಗೆ ಬಂದಿದ್ದರು.
ರೋಹಿತ್ ಶರ್ಮಾ ಮತ್ತೆ ಭಾರತ ತಂಡಕ್ಕೆ ಕೈಕೊಟ್ಟಿದ್ದಾರೆ. ಕೇವಲ 3 ರನ್ಗೆ ಔಟ್ ಆಗಿ ಅಭಿಮಾನಿಗಳಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ. ರೋಹಿತ್ ಶರ್ಮಾ ಔಟ್ ಆಗಿರುವುದು ಭಾರತಕ್ಕೆ ದೊಡ್ಡ ಪೆಟ್ಟು ಕೊಡಲಿದೆ. ಇದು ತಂಡವನ್ನು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಹಾದಿಗೆ ಕಂಟಕವಾಗಿ ಕಾಡಲಿದೆ. ಆಸ್ಟ್ರೇಲಿಯಾ ಸರಣಿ ಆರಂಭದಿಂದ ರೋಹಿತ್ ವಿಫಲ ಬ್ಯಾಟಿಂಗ್ ಮಾಡುತ್ತಿರುವುದರಿಂದ ಹಲವರು ಟೀಕೆಗಳನ್ನು ಮಾಡುತ್ತಿದ್ದಾರೆ.