ಬೇಲೂರು:- ವಿದ್ಯಾರ್ಥಿಗಳಲ್ಲಿ ವ್ಯವಹಾರಿಕ ಜ್ಞಾನವನ್ನು ತಿಳಿಸಪಡಿಸುವ ಉದ್ದೇಶದಿಂದ ಕ್ಯಾಂಟೀನ್ ಡೇ ಆಯೋಜಿಸಲಾಗಿದೆ ಎಂದು ಮುಖ್ಯಶಿಕ್ಷಕಿ ರುಭಾನಾ ತಿಳಿಸಿದರು.
ಐಡಿಯಲ್ ಪಬ್ಲಿಕ್ ಶಾಲೆಯ ಆವರಣದಲ್ಲಿ ಯುಕೆಜಿ ಇಂದ ಮೊದಲನೇ ತರಗತಿಯ ವಿದ್ಯಾರ್ಥಿಗಳಿಗೆ ಕ್ಯಾಂಟೀನ್ ಡೇ ನಡೆಸಲಾಯಿತು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ವಿವಿಧ ಚಟುವಟಿಕೆಗಳನ್ನು ನಡೆಸಿದರೆ ಕೌಶಲ್ಯ ಅಭಿವೃದ್ದಿ ಹಾಗೂ ಗಣಿತದ ಅಂಕಗಳಿಕೆಗೆ ಸಹ ಉಪಯುಕ್ತವಾಗುತ್ತದೆ.ಕ್ಯಾಂಟೀನ್ ಡೇ ನಡೆಸುವುದರಿಂದ ಅವರಲ್ಲಿರುವ ನೈಜ್ಯ ಕಲೆ ಹಾಗೂ ವ್ಯಾಪಾರದ ಬಗ್ಗೆ ಸಂಪೂರ್ಣವಾಗಿ ಅವರಿಗೆ ಮಾಹಿತಿ ಸಿಗುವಂತಾಗುತ್ತದೆ.
ಇದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಇತುವ ಆತ್ಮವಿಶ್ವಾಸ ಹೆಚ್ಚಾಗುವುದಲ್ಲದೆ ತಾವು ದುಡಿದು ಕೂಡಿಟ್ಟ ಹಣವನ್ನು ಯಾವರೀತಿ ಖರ್ಚುಮಾಡಬೇಕೆಂಬ ಮನಸ್ಥಿತಿ ಬಲವಾಗಿ ಬೀರುವುದರಿಂದ ಇಂತಹ ಚಟುವಟಿಕೆ ಉತ್ತಮ .ಇಲ್ಲಿ ಅತಿಹೆಚ್ಚು ವ್ಯಾಪಾರ ವಹಿವಾಟು ಮಾಡುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಸಲುವಾಗಿ ಪ್ರಥಮ ದ್ವಿತೀಯ ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರೋತ್ಸಾಹಿಸಲು ಬಹುಮಾನ ವಿತರಿಸಲಾಗುತ್ತದೆ ಎಂದರು.
ಇದೇ ವೇಳೆ ವಿದ್ಯಾರ್ಥಿಗಳು ಹಲವು ಬಗೆಯ ವೆಜ್ ರೋಲ್,ಚಿಕನ್ ರೋಲ್, ಸಮೋಸ,ಕೇಕ್ ಸೇರಿದಂತೆ ಇನ್ನಿತರ ವ್ಯಾಪಾರಗಳನ್ನು ತಮ್ಮ ಕೌಶಲ್ಯದಿಂದ ವ್ಯಾಪಾರ ವಹಿವಾಟು ನಡೆಸುತ್ತಿದ್ದರು.
ಈ ಸಂದರ್ಭದಲ್ಲಿ ಸಹ ಶಿಕ್ಷಕರಾದ ಅಬೀಬಾ, ಅಂಬಿಕಾ, ಲಾವಣ್ಯ, ಸೇರಿದಂತೆ ಇತರರು ಹಾಜರಿದ್ದರು.