2023ರ ಏಕದಿನ ವಿಶ್ವಕಪ್ ಟೂರ್ನಿಯ ಶ್ರೀಲಂಕಾದ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ಶಮಿ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿ 5 ವಿಕೆಟ್ ಪಡೆದಿದ್ದರು. ಈ ಸಂದರ್ಭದಲ್ಲಿ ಅನುಭವಿ ವೇಗಿ ಮಂಡಿಯೂರಿ ಪ್ರಾರ್ಥನೆ ಮಾಡಲು ಬಯಸಿದ್ದರು ಎಂದು ಎದ್ದಿದ್ದ ಗಾಳಿ ಸುದ್ದಿಯ ಬಗ್ಗೆ ಶಮಿ ಪ್ರಸ್ತಾಪಿಸಿದ್ದು, ಇಂತಹ ವಿವಾದಗಳನ್ನು ಹರಡುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏಕದಿನ ವಿಶ್ವಕಪ್ ಟೂರ್ನಿಯ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಎದ್ದಿರುವ ಗಾಳಿ ಸುದ್ದಿಗೆ ಬುಧವಾರ (ಡಿಸೆಂಬರ್ 13) ಅಜೆಂಡಾ ಅಜ್ ತಕ್ ಜೊತೆ ಸಂವಾದ ನಡೆಸಿರುವ ಮೊಹಮ್ಮದ್ ಶಮಿ, ನಾನು ಅಪ್ಪಟ ಭಾರತೀಯ ಹಾಗೂ ಅಪ್ಪಟ ಮುಸಲ್ಮಾನ ಆಗಿರುವುದಕ್ಕೆ ಹೆಮ್ಮೆ ಪಡುತ್ತೇನೆ. ನಾನು ಪ್ರಾರ್ಥನೆ ಮಾಡಲು ಬಯಸಿದರೆ ನನ್ನನ್ನು ತಡೆಯಲು ಆಗುವುದಿಲ್ಲ ಎಂದು ಶಮಿ ಹೇಳಿದ್ದಾರೆ.
“ನಾನು ಒಂದು ವೇಳೆ ಪ್ರಾರ್ಥನೆ ಮಾಡಲು ಬಯಸಿದರೆ ನನ್ನನ್ನು ತಡೆಯುವವರು ಯಾರು? ನನ್ನನ್ನು ಪ್ರಾರ್ಥನೆ ಮಾಡದಂತೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನಾನು ಪ್ರಾರ್ಥನೆ ಮಾಡಿದರೆ ಅದರಿಂದಾಗುವ ತೊಂದರೆ ತಿಳಿಸಿ? ನಾನು ಮುಸಲ್ಮಾನ ಎಂಬುದನ್ನು ಹೆಮ್ಮೆಯಿಂದ ಹೇಳುತ್ತೇನೆ. ಅದೇ ರೀತಿ ನಾನು ಅಪ್ಪಟ ಭಾರತೀಯ ಎಂದೂ ಹೇಳುತ್ತೇನೆ. ಇದರಿಂದ ಆಗುವ ತೊಂದರೆ ಏನು?,” ಎಂದು ಟೀಮ್ ಇಂಡಿಯಾದ ವೇಗಿ ಪ್ರಶ್ನಿಸಿದ್ದಾರೆ.
“ಜನರು ಯಾವಾಗಲೂ ಒಬ್ಬ ವ್ಯಕ್ತಿಯ ವಿರುದ್ಧ ಇಂತಹ ಹೇಳಿಕೆ ನೀಡುವ ಮೂಲಕ ಸಮಾಜದಲ್ಲಿ ಗಲಭೆ ಎಬ್ಬಿಸಲು ಬಯಸುತ್ತಾರೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ನಾನು 200 ರಷ್ಟು ಸಾಮರ್ಥ್ಯ ಹಾಕಿ ಬೌಲಿಂಗ್ ದಾಳಿ ಸಂಘಟಿಸಿದ್ದೆ. ಆ ಪಂದ್ಯದಲ್ಲಿ ವಿಕೆಟ್ಗಳು ಬಹುಬೇಗ ಬಿದ್ದಿದ್ದವು. ನಾನು 3 ವಿಕೆಟ್ ಪಡೆದಿದ್ದಾಗ ಆ