ರಾತ್ರಿ ನೆಮ್ಮದಿಯಿಂದ ಏಳೆಂಟು ಗಂಟೆ ಯಾರು ನಿದ್ದೆ ಮಾಡುತ್ತಾರೋ, ಅವರಂತಹ ಪುಣ್ಯವಂತರ ಭೂಮಿ ಮೇಲೆ ಮತ್ತೊಬ್ಬರಿಲ್ಲ ಎಂದು ಹೇಳ ಬಹುದು.
ಭಯೋತ್ಪಾದಕರಿಗಾಗಿ ಮಿಡಿದಿದ್ದು ಸೋನಿಯಾ ಗಾಂಧಿ: ಖರ್ಗೆಗೆ ತಿರುಗೇಟು ಕೊಟ್ಟ ಜೋಶಿ!
ಮೊಬೈಲ್ ಬಂದ ಬಳಿಕ ಜನರಿಗೆ ನಿದ್ರೆಯೇ ಇಲ್ಲದಂತಾಗಿದೆ. ರಾತ್ರಿ ಮಲಗಿಕೊಂಡು ಕೂಡ ಮೊಬೈಲ್ ಕೈಯಲ್ಲಿ ಹಿಡಿದುಕೊಂಡು ನೋಡುತ್ತಿರುವರು. ಇನ್ನು ಬೆಳಗ್ಗೆ ನಿದ್ರೆಯಿಂದ ಕಣ್ಣು ತೆರೆದು ನೇರವಾಗಿ ಮೊಬೈಲ್ ನ್ನು ಕೈಗೆತ್ತಿಕೊಳ್ಳುವರು.
ಎಸ್, ಇಂದಿನ ದಿನಗಳಲ್ಲಿ ಮನುಷ್ಯನ ಜೀವನ ಹೇಗೆ ಆಗಿಬಿಟ್ಟಿದೆ ಎಂದರೆ, ತಲೆಯಲ್ಲಿ ಹತ್ತಾರು ಚಿಂತೆಗಳು, ಅತಿಯಾದ ಮಾನಸಿಕ ಒತ್ತಡಗಳು, ಮನೆಯಲ್ಲಿ ಸಂಸಾರದ ತಾಪತ್ರಯಗಳು, ಹೀಗೆ ಹಲವಾರು ಸಮಸ್ಯೆಗಳು ತಲೆಯಲ್ಲಿ ತಲೆಯಲ್ಲಿ ತುಂಬಿಕೊಂಡಿದ್ದರೆ ಸುಖದ ಸುಪ್ಪತ್ತಿಗೆ ಇರುವ ಎಂತಹ ಶ್ರೀಮಂತರಿಗೂ ಕೂಡ ನಿದ್ದೆ ಬರುವುದಿಲ್ಲ.
ಆದರೆ ಚಿಂತಿಸಬೇಕಾಗಿಲ್ಲ, ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಂಡು,ಕೆಲವೊಂದು ಆಯುರ್ವೇದ ಸೂಚಿಸಲಾಗಿರುವ ಮನೆಮದ್ದುಗಳನ್ನು ಅನುಸರಿಸುತ್ತಾ ಹೋದರೆ, ಮಲಗಿದ ಕೂಡಲೇ ನಿದ್ದೆ ಆವರಿಸಿಕೊಳ್ಳುತ್ತದೆ ಜೊತೆಗೆ, ನಿದ್ರಾಹೀನತೆಯಿಂದಾಗಿ ಕಂಡು ಬರುವ ಹಲವಾರು ಆರೋಗ್ಯ ಸಮಸ್ಯೆಗಳು ಕೂಡ ದೂರವಾಗುತ್ತದೆ.
ಅಶ್ವಗಂಧ ಪುಡಿ ಬೆರೆಸಿದ ಹಾಲು:-
ಮಾನಸಿಕ ಒತ್ತಡವನ್ನು ಕಡಿಮೆ ಮಾಡುವ ಗುಣಲಕ್ಷಣ ಗಳು ಕಂಡು ಬರುವ ಅಶ್ವಗಂಧ, ನಿದ್ರಾ ಹೀನತೆ ಸಮಸ್ಯೆ ಯನ್ನು ದೂರ ಮಾಡಲು ಸಹಾಯ ಮಾಡುತ್ತದೆ.
ಹೀಗಾಗಿ ಒಂದು ವೇಳೆ ರಾತ್ರಿ ಮಲಗಿದ ಕೂಡಲೇ ನಿದ್ದೆ ಬಾರದೇ ಇರುವ, ಸಮಸ್ಯೆ ಎದುರಿಸುತ್ತಿದ್ದರೆ, ಪ್ರತಿದಿನ ರಾತ್ರಿ ಮಲಗುವ ಮುನ್ನ ಒಂದು ಲೋಟ ಬಿಸಿ ಹಾಲಿಗೆ ಒಂದು ಟೀ ಚಮಚದಷ್ಟು ಅಶ್ವಗಂಧದ ಪುಡಿಯನ್ನು ಬೆರೆಸಿ ಕುಡಿದು, ಸ್ವಲ್ಪ ಹೊತ್ತು ವಾಕಿಂಗ್ ಮಾಡಿ, ಆಮೇಲೆ ಮಲಗುವ ಅಭ್ಯಾಸ ಮಾಡಿದರೆ, ಕೂಡಲೇ ನಿದ್ದೆ ಆವರಿಸಿಕೊಂಡು ಬಿಡುತ್ತದೆ.
ಅರಿಶಿನ ಹಾಲು:-
ರಾತ್ರಿ ನಿದ್ದೆ ಬರುವುದಿಲ್ಲ, ಎಂದು ಕರಗುವವರು, ಪ್ರತಿ ದಿನ ರಾತ್ರಿ ಮಲಗುವ ಮುನ್ನ ಒಂದು ಲೋಟ ಬಿಸಿ ಹಾಲಿಗೆ ಸ್ವಲ್ಪ ಚಿಟಿಕೆಯಷ್ಟು ಅರಿಶಿನ ಪುಡಿ ಹಾಕಿ ಮಿಶ್ರಣ ಮಾಡಿ ಕುಡಿದು ಮಲಗುವುದರಿಂದ, ಹತ್ತು ನಿಮಿಷದಲ್ಲಿ ನಿದ್ದೆ ಬಂದುಬಿಡುತ್ತದೆ!
ಇದಕ್ಕೆ ಪ್ರಮುಖ ಕಾರಣ ಅರಿಶಿನ ದಲ್ಲಿ ಕಂಡು ಬರುವ ಕರ್ಕ್ಯೂಮಿನ್ ಅಂಶ ಹಾಗೂ ಹಾಲಿನಲ್ಲಿರುವ ಹಾಲಿ ನಲ್ಲಿ ಸೆರಟೋನಿನ್ ಮತ್ತು ಮೆಲಟೋನಿನ್ ಎಂಬ ಹಾರ್ಮೋ ನುಗಳು, ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ, ಕೂಡಲೇ ನಿದ್ದೆ ಆವರಿಸಿಬಿಡುವ ಹಾಗೆ ಮಾಡುತ್ತದೆ.
ಹರಳೆಣ್ಣೆಯಿಂದ ಪಾದಗಳನ್ನು ಮಸಾಜ್ ಮಾಡಿ…
ಸ್ವಲ್ಪ ಹರಳೆಣ್ಣೆ (ತೆಂಗಿನಎಣ್ಣೆಯಾದರೂ ಪರವಾಗಿಲ್ಲ) ತಗೊಂಡು ಎರಡೂ ಪಾದಗಳ ಅಡಿ ಭಾಗಕ್ಕೆ ಎಣ್ಣೆ ಯನ್ನು ಹಚ್ಚಿ, ಸರಿಯಾಗಿ ಮಸಾಜ್ ಮಾಡಿಕೊಳ್ಳಿ.
ಆ ಬಳಿಕ ಸುಮಾರು ಅರ್ಧಗಂಟೆ ಕಳೆದ ಬಳಿಕ, ಎರಡೂ ಪಾದಗಳನ್ನ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದು ಕೊಂಡು, ಒಂದು ಕಾಟನ್ ಟವೆಲ್ನ ಸಹಾಯದಿಂದ, ಪಾದಗಳನ್ನು ಚೆನ್ನಾಗಿ ಒರೆಸಿಕೊಳ್ಳಿ.
ಈ ರೀತಿ ಪ್ರತಿದಿನ ಎಣ್ಣೆಯ ಮಸಾಜ್ ಮಾಡುವುದರಿಂದ, ಪಾದಗಳ ಭಾಗದಲ್ಲಿ ರಕ್ತಸಂಚಾರ ನರನಾಡಿಗಳಿಗೆ ಸರಿಯಾಗಿ ಸಂಚರಿಸಿ, ಆಕ್ಯುಪ್ರೆಸರ್ ಪಾಯಿಂಟ್ಸ್ ಸರಿ ಯಾಗಿ ಕಾರ್ಯ ನಿರ್ವಹಿಸುತ್ತದೆ. ಇದರಿಂದ ಬಹಳ ಬೇಗನೇ ನಿದ್ರೆ ಆವರಿಸಿ ಕೊಂಡು ಬಿಡುತ್ತದೆ.
ಲ್ಯಾವೆಂಡರ್ ಎಣ್ಣೆಯ ಸ್ನಾನ:-
ರಾತ್ರಿ ಮಲಗುವ ಮುನ್ನ, ಉಗುರು ಬೆಚ್ಚಗಿನ ನೀರುಸುವ ಬಕೆಟ್ಗೆ ನಾಲ್ಕೈದು ಹನಿಗಳಷ್ಟು ಲ್ಯಾವೆಂಡರ್ ಎಣ್ಣೆಯನ್ನು ಹಾಕಿ, ಚೆನ್ನಾಗಿ ಮಿಶ್ರಣ ಮಾಡಿಕೊಂಡು, ಈ ಸುಗಂಧ ಭರಿತ ನೀರಿನಿಂದ ಸ್ನಾನ ಮಾಡುವುದರಿಂದ, ಮನಸ್ಸಿಗೆ ಉಲ್ಲಾಸ ಸಿಗುವುದರ ಜೊತೆಗೆ ರಾತ್ರಿಯ ಸಮಯದಲ್ಲಿ ಮಲಗಿದ ಕೂಡಲೇ ಗಡದ್ದಾಗಿ ನಿದ್ರೆ ಆವರಿಸಿಕೊಂಡು ಬಿಡುತ್ತದೆ.