‘ಉಸಿರಿಗಿಂತ ನೀನೇ ಹತ್ತಿರ’, ನಾವಿಕ, ಅತಿರಥ, ನುಗ್ಗೇಕಾಯಿ, ಲಂಕೇ, ಡಿಎನ್ಎ, ಲೋಕಲ್ ಟ್ರೇನ್ ಇನಾಮ್ದಾರ್ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಘಳಿಸಿರುವ ನಟಿ ಎಸ್ತಾರ್ ನರೋನ್ಹಾ ಹೇಳಿಕೆಯೊಂದು ಚರ್ಚೆಗೆ ಕಾರಣವಾಗಿದೆ. ಕನ್ನಡದೊಂದಿಗೆ ತೆಲುಗಿನಲ್ಲಿ ದೊಡ್ಡ ಪ್ರಮಾಣದ ಅಭಿಮಾನಿಗಳನ್ನು ಹೊಂದಿರುವ ನಟಿಯ ಹೇಳಿಕೆ ವೈರಲ್ ಆಗಿದೆ.
ಮದುವೆಯಾದ ಕೆಲವೇ ದಿನಗಳಲ್ಲಿ ಗಂಡನಿಂದ ದೂರವಾದ ಎಸ್ತಾರ್ ಹೇಳಿಕೆ ವೈರಲ್ ಆಗಿದೆ. 2019ರಲ್ಲಿ ಗಾಯಕ ಹಾಗೂ ರಾಪರ್ ನೋಯೆಲ್ ಸೀನ್ರನ್ನು ವಿವಾಹವಾದ ಎಸ್ತರ್ 16 ದಿನದಲ್ಲೇ ಪತಿಯಿಂದ ದೂರವಾದರು. ಒಂದು ವರ್ಷದ ಬಳಿಕ ಆತನಿಂದ ವಿಚ್ಛೇದನ ಪಡೆದುಕೊಂಡಿದ್ದರು.
![Demo](https://ainlivenews.com/wp-content/uploads/2023/12/spoorthi-1.jpg)
ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಎಸ್ತರ್ ನೊರೊನ್ಹಾ ಶಾಕಿಂಗ್ ಕಾಮೆಎಂಟ್ ಮಾಡಿದ್ದು, ಇದು ವೈರಲ್ ಆಗಿದೆ. ತಾವು ಎರಡನೇ ಮದುವೆಯಾಗಲು ಸಿದ್ಧ ಎಂದು ಅವರು ಹೇಳಿರುವುದು ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ನನಗೆ ಜೀವನದಲ್ಲಿ ಒಬ್ಳೇ ಇರೋಕೆ ಬರೋದಿಲ್ಲ. ಏಕಾಂಗಿಯಾಗಿ ಬದುಕೋಕೆ ನನಗೆ ಸಾಧ್ಯವಿಲ್ಲ. ನಾನು ಮತ್ತೊಮ್ಮೆ ಮದುವೆಯಾಗುತ್ತೇನೆ. ನನಗೊಂದು ಸುಂದರ ಬದುಕು ಬೇಕು. ಅದಕ್ಕಾಗಿ ಸರಿಯಾದ ಸಂಗಾತಿಯ ಹುಡುಕಾಟದಲ್ಲಿದ್ದೇನೆ. ಆದರೆ, ಯಾವ ರೀತಿಯ ಹುಡುಗನನ್ನು ಮದುವೆಯಾಗಬೇಕು ಅನ್ನೋದರ ಬಗ್ಗೆ ನನಗೆ ಯಾವುದೇ ಸ್ಪಷ್ಟತೆ ಇಲ್ಲ. ಈಗಾಗಲೇ ಒಮ್ಮೆ ಮದುವೆಯಾಗಿ ಸಾಕಷ್ಟು ಸಮಸ್ಯೆ ಎದುರಿಸಿದ್ದೇನೆ.ಈಗ ನನಗೆ ನನನ್ನು ಅರಿತುಕೊಳ್ಳುವಂಥ ಹುಡುಗ ಬೇಕು ಅಂತಾ ಅನಿಸಿದೆ. ಇದು ಯಾವುದೇ ಶೋ ಆಫ್ನ ಹೇಳಿಕೆಯಲ್ಲ ಎಂದೂ ಸ್ಪಷ್ಟ ಪಡಿಸಿದ್ದಾರೆ.
ಇನ್ನು ಮೊದಲ ಪತಿಯ ಬಗ್ಗೆ ಮಾತನಾಡಿರುವ ಎಸ್ತರ್, ಆತನೊಂದಿಗೆ ನಾನು 16 ದಿನ ಮಾತ್ರವೇ ಸಂಸಾರ ಮಾಡಿದೆ. ಅಷ್ಟರಲ್ಲೇ ಆತನ ನಿಜರೂಪ ನನಗೆ ಗೊತ್ತಾಗುತ್ತಾ ಹೋಯಿತು ಎಂದು ಎಸ್ತರ್ ಹೇಳಿದ್ದಾರೆ. ನೋಯೆಲ್ ಜೊತೆ ಒಂದು ವರ್ಷದ ರಿಲೇಷನ್ಷಿಪ್ ಬಳಿಕ ಎಸ್ತರ್ ವಿವಾಹವಾಗಿದ್ದು ಎನ್ನುವುದು ವಿಶೇಷ. 2019ರಲ್ಲಿ ಹಿರಿಯರ ಮನವೊಲಿಸಿ ಎಸ್ತರ್ ಹಾಗೂ ನೋಯೆಲ್ ವಿವಾಹ ನಡೆದಿತ್ತು. ಅವರ ಮದುವೆ ಒಂದು ವರ್ಷವೂ ಉಳಿಯಲಿಲ್ಲ. ಮದುವೆಯಾದ ಕೆಲವೇ ದಿನಗಳಲ್ಲಿ ಅವರು ಬೇರ್ಪಟ್ಟರು. ವಿಚ್ಛೇದನವನ್ನು 2020 ರಲ್ಲಿ ಅಧಿಕೃತವಾಗಿ ಘೋಷಿಸಲಾಯಿತು. ಆ ಸಮಯದಲ್ಲಿ ನೋಯೆಲ್ ಮತ್ತು ಎಸ್ತರ್ ವಿಚ್ಛೇದನದ ಘೋಷಣೆಯು ಚರ್ಚೆಗೆ ಕಾರಣವಾಯಿತು. ಪ್ರಸ್ತುತ ಕನ್ನಡದಲ್ಲಾಗಲಿ, ತೆಲುಗು ಸಿನಿಮಾದಲ್ಲಾಗಲಿ ಎಸ್ತರ್ಗೆ ಅಷ್ಟಾಗಿ ಅವಕಾಶವಿಲ್ಲ. ಆಕೆಯ ಬೋಲ್ಡ್ ರೋಲ್ಗಳು ಕೂಡ ನೋಡುವವರೇ ಇಲ್ಲದಂತಾಗಿದೆ. ಇತ್ತೀಚೆಗಷ್ಟೇ ಟೀನಂಟ್ ಚಿತ್ರದಲ್ಲಿ ತನಿಖಾ ಅಧಿಕಾರಿಯಾಗಿ ನಟಿಸಿದ್ದರು. ಅದು ಹೊರತು ಪಡಿಸಿ ಆಕೆಗೆ ಹೇಳಿಕೊಳ್ಳುವ ಅವಕಾಶಗಳು ಸಿಗುತ್ತಿಲ್ಲ.
![](https://ainlivenews.com/wp-content/uploads/2024/01/Ad-Banner-copy-scaled.jpg)