ಬೀದರ್ : ವಾಹನಗಳ ಸವಾರರ ಸುರಕ್ಷಿತ ಪ್ರಯಾಣಕ್ಕಾಗಿ ರಸ್ತೆ ಸಂಚಾರ ನಿಯಮ ಕಡ್ಡಾಯವಾಗಿ ಪಾಲಿಸಬೇಕು ಎಂದು ಬೀದರ್ ಪೊಲೀಸರು ಜಾಗ್ರತಿ ಅಭಿಯಾನ ನಡೆಸಿದ್ದಾರೆ. ಬೀದರ ಸಂಚಾರ ಪೋಲಿಸರು ರಸ್ತೆ ಸುರಕ್ಷತಾ ಅಭಿಯಾನ ನಡೆಸಿದರು. ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಸವಾರರಿಗೆ ಕಡ್ಡಾಯ ವಾಗಿ ಹೆಲ್ಮೆಟ್ ಧರಿಸಿ ಎಂದು ದಂಡ ಬದಲಾಗಿ ಹೆಲ್ಮೆಟ್ ನೀಡಿ ಸಂಚಾರಿ ನಿಯಮದ ಅರಿವು ನೀಡಿದರು. ಈ ವೇಳೆ ರ್ಭದಲ್ಲಿ ಹಲವು ವಾಹನ ಸವಾರರು ಪೋಲಿಸರ ಜೊತೆಗೆ ವಾಗ್ವಾದ ನಡೆಸಿದ ಘಟನೆಯೂ ನಡೆಯಿತು.
ಈ ವೇಳೆ ಬೀದರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ವಾಹನ ಸವಾರರು ಸಂಚಾರಿ ನಿಯಮ ಪಾಲಿಸುವಂತೆ ಸವಾರರಿಗೆ ಸೂಚಿಸಿದರು. ವಾಹನ ಚಾಲನೆ ವೇಳೆ ಮಾಡುವಾಗ ಕಡ್ಡಾಯವಾಗಿ ಸಿಟ್ಟ ಹೆಲ್ಮೆಟ್ ಧರಿಸಬೇಕು. ನಮ್ಮ ಜೀವಕ್ಕೆ ಎಷ್ಟು ಪ್ರಾಮುಖ್ಯ ನೀಡುತ್ತೇವೆಯೋ ಅಷ್ಟೇ ಇನ್ನೊಬ್ಬರ ಜೀವಕ್ಕೂ ಬೆಲೆ ಇದೆ ಎಂಬ ವಾಸ್ತವವನ್ನು ಅರಿಯಬೇಕು. ಸಂಚಾರದ ವೇಳೆ ರಸ್ತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕಾರ್ ಪಾರ್ಕ ಮಾಡುವವರು ಸಂಚಾರಿ ಪೋಲಿಸರು ಮಾರ್ಗಸೂಚಿ ಅನುಸರಿಸಬೇಕು ಇಲ್ಲವಾದರೆ ದಂಡ ಹಾಕಲಾಗುತ್ತದೆ ನಿಯಮ ಪಾಲಿಸದಿದ್ದರೆ ಲೈಸೆನ್ಸ್ ರದ್ದತಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.