ಹೈದರಾಬಾದ್:– ಸಿಬಿಐ ತನಿಖೆ ರದ್ದು ತೀರ್ಮಾನ ರಾಜ್ಯ ಸರ್ಕಾರದ್ದು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಹೈದರಾಬಾದ್ ನಲ್ಲಿ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಲೋಪದೋಷಗಳಿವೆ. ನನಗೆ ನಾನೇ ವಕೀಲನಾಗಲು ಬಯಸುವುದಿಲ್ಲ. ಅಂದು ನಾನು ಸಚಿವ ಸಂಪುಟ ಸಭೆಗೆ ಹಾಜರಾಗಿಲ್ಲ. ಅದು ಸರ್ಕಾರ ತೆಗೆದುಕೊಂಡ ನಿರ್ಧಾರ. ನನ್ನ ವಿರುದ್ಧದ ತನಿಖೆಗೆ ಯಾವುದೇ ಅನುಮತಿ ನೀಡಿದರೂ ಅದು ಅಸಿಂಧು ಎಂದು ನಾನು ಅರ್ಜಿ ಸಲ್ಲಿಸಿದ್ದೆ. ನನ್ನ ವಿರುದ್ಧ ತನಿಖೆಗೆ ಅಂದಿನ ಅಡ್ವೋಕೇಟ್ ಜನರಲ್ ಅನುಮತಿ ನೀಡಿದ್ದು ಸರಿಯಲ್ಲ. ಈಗಿನ ನಿರ್ಧಾರದ ಬಗ್ಗೆ ನಾನೇನೂ ಹೆಚ್ಚು ಪ್ರತಿಕ್ರಿಯೆ ನೀಡುವುದಿಲ್ಲ’ ಎಂದರು.
ಇದು ಕಾಂಗ್ರೆಸ್ ಸರ್ಕಾರದ ಪಕ್ಷಪಾತಿ ನಿರ್ಧಾರ’ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ನಾನು ಏನೂ ತಪ್ಪು ಮಾಡಿಲ್ಲ. ಅಂದಿನ ಸರ್ಕಾರ ಕೈಗೊಂಡಿದ್ದು ರಾಜಕೀಯ ನಿರ್ಧಾರ. ಇಂದಿನ ಸರ್ಕಾರ ಕೈಗೊಂಡಿದ್ದು ಕಾನೂನಾತ್ಮಕ ನಿರ್ಧಾರ’ ಎಂದು ಸ್ಪಷ್ಟಪಡಿಸಿದರು.