ನ್ಯೂಯಾರ್ಕ್: ಈ ಬಾರಿ ಟಿ20 ವಿಶ್ವಕಪ್ನ ಗುಂಪು ಹಂತದ ಮೊದಲ 2 ಪಂದ್ಯಗಳಲ್ಲಿ ಪರಾಭವಗೊಂಡಿ ರುವ ಪಾಕಿಸ್ತಾನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಮಂಗಳವಾರ ಕೆನಡಾ ವಿರುದ್ಧ ಸೆಣಸಾಡಲಿದೆ. ಸೋತರೆ ತಂಡ ಗುಂಪು ಹಂತದಲ್ಲೇ ಹೊರಬೀಳಲಿದೆ. ‘ಎ’ ಗುಂಪಿನ ಆರಂಭಿಕ ಪಂದ್ಯದಲ್ಲಿ ಯುಎಸ್ಎ ವಿರುದ್ಧ ಸೂಪರ್ ಓವರ್ ನಲ್ಲಿ ಆಘಾತಕಾರಿ ಸೋಲು ಕಂಡಿದ್ದ ಬಾಬರ್ ಆಜಂ ಪಡೆ, ಭಾನುವಾರ ಬದ್ಧವೈರಿ ಭಾರತಕ್ಕೆ ಶರಣಾಗಿದೆ.
ತಂಡ ಇನ್ನಷ್ಟೇ ಅಂಕ ಖಾತೆ ತೆರೆಯಬೇಕಿದ್ದು, ಈ ಪಂದ್ಯದಲ್ಲಿ ಗೆದ್ದರಷ್ಟೇ ಸೂಪರ್ -8 ಹಂತದ ಕನಸು ಜೀವಂತ ವಾಗಿರಲಿದೆ. ಗುಂಪಿನಲ್ಲಿರುವ ಭಾರತ ಹಾಗೂ ಅಮೆರಿಕ ಈಗಾಗಲೇ ತಲಾ 2 ಪಂದ್ಯ ಗಳನ್ನು ಗೆದ್ದಿವೆ. ಈ 2 ತಂಡಗಳ ಪೈಕಿ 1 ತಂಡ ಸೂಪರ್-8 ಪ್ರವೇಶಿಸುವುದು ಖಚಿತವಾಗಿದ್ದು,
![Demo](https://ainlivenews.com/wp-content/uploads/2023/12/spoorthi-1.jpg)
Robbery Case: ಸಿಲಿಕಾನ್ ಸಿಟಿಯಲ್ಲಿ ಬಿಡು ಬಿಟ್ಟ ತುಪ್ಪ ಕದಿಯೋ ಗ್ಯಾಂಗ್..! ಸೂಪರ್ ಮಾರ್ಕೆಟ್ʼಗಳೆ ಇವರ ಟಾರ್ಗೆಟ್
ಮತ್ತೊಂದು ಸ್ಥಾನದ ಮೇಲೆ ಪಾಕ್ ಕಣ್ಣಿಟ್ಟಿದೆ. ಆದರೆ ತಂಡ ಕೆನಡಾ, ಐರ್ಲೆಂಡ್ ವಿರುದ್ಧದ ಪಂದ್ಯ ದೊಡ್ಡ ಅಂತರದಲ್ಲಿ ಗೆದ್ದು, ಭಾರತ ಅಥವಾ ಅಮೆರಿಕ ಪೈಕಿ 1 ತಂಡ ಉಳಿದ 2 ಪಂದ್ಯಗಳಲ್ಲೂ ಸೋತರಷ್ಟೇ ಪಾಕ್ಗೆ ಸೂಪರ್ -8 ಪ್ರವೇಶಿ ಸುವ ಅವಕಾಶ ಸಿಗಲಿದೆ. ಅತ್ತ ಕೆನಡಾ ಆಡಿರುವ 2 ಪಂದ್ಯಗಳಲ್ಲಿ 1ರಲ್ಲಿ ಗೆದ್ದಿದ್ದು, ಮತ್ತೊಂದು ಪಂದ್ಯ ಗೆದ್ದರೆ ಸೂಪರ್ -8 ರೇಸ್ ಮತ್ತಷ್ಟು ರೋಚಕತೆ ಸೃಷ್ಟಿಸಲಿದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)