ಇಂದು ಪ್ರತಿಯೊಂದು ಮಗುವಿನ ಕೈಯಲ್ಲೂ ಮೊಬೈಲ್ ಇರುತ್ತದೆ. ಬೆಳಗ್ಗೆ ಹಾಸಿಗೆಯಿಂದ ಏಳಬೇಕು ಅಂದರು ಮೊಬೈಲ್ ಬೇಕು, ರಾತ್ರಿ ಮಲಗಬೇಕು ಎಂದರು ಮೊಬೈಲ್ ಬೇಕು. ಮೊಬೈಲ್ ಇಲ್ಲದೆ ಒಂದು ತುತ್ತು ಊಟ ಕೂಡ ಮಾಡೋದಿಲ್ಲ ಎಂದು ಮಕ್ಕಳು ಹಠ ಹಿಡಿದು ಕೂತು ಬಿಡ್ತಾರೆ. ಕೊನೆಗೂ ಫೋಷಕರು ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಸುಮ್ಮನಾಗ್ತಾರೆ. ಆದರೆ ಅತಿಯಾದ ಮೊಬೈಲ್ ಚಟ ಮಕ್ಕಳ ದೃಷ್ಠಿ ಸಮಸ್ಯೆಗೆ ಕಾರಣವಾಗಿರುವ ಆತಂಕಕಾರಿ ಅಂಶವನ್ನ ಆರೋಗ್ಯ ಇಲಾಖೆ ತಿಳಿಸಿದೆ.
ಕೊವಿಡ್ ಹಿನ್ನೆಲೆಯಲ್ಲಿ ಪ್ರತಿಯೊಂದು ಶಾಲಾ ಕಾಲೇಜುಗಳು ಆನ್ಲೈನ್ ಕ್ಲಾಸ್ ಆರಂಭಿಸಿದ್ದವು. ಈ ವೇಳೆ ಮಕ್ಕಳು 10 ಗಂಟೆಗೂ ಹೆಚ್ಚು ಕಾಲ ಮೊಬೈಲ್ ಬಳಸುತ್ತಿದ್ದರು. ನಿತ್ಯ ಮೊಬೈಲ್ ಇಂಟರ್ನನೆಟ್ ಲೋಕದಲ್ಲಿ ಇರುವ ವಿದ್ಯಾರ್ಥಿಗಳಿಗೆ ಈಗ ಮೊಬೈಲ್ ಚಟವಾಗಿ ಹೋಗಿದೆ. ಮೊಬೈಲ್ ಇಲ್ಲದೆ ಯಾವುದೇ ಕೆಲಸ ಆಗೋದಿಲ್ಲ ಎಂದುಕೊಳ್ತಿದ್ದಾರೆ. ಇದೇ ಕಾರಣಕ್ಕೆ ಹೀಗಾಗಿ ಶಾಲಾ ಮಕ್ಕಳಲ್ಲಿ ಕಣ್ಣಿನ ಸಮಸ್ಯೆಗಳು ಕಂಡು ಬರುತ್ತಿವೆ. ಶಾಲಾ ಮಕ್ಕಳಲ್ಲಿ ರಿಪ್ರೆಕ್ಟಿವ್ ಎರರ್ ನಿಂದ ರಾಜ್ಯದಲ್ಲಿ 77342ಕ್ಕು ಹೆಚ್ಚು ಮಕ್ಕಳಲ್ಲಿ ದೃಷ್ಠಿ ದೋಷ ಕಂಡು ಬಂದಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
2023-24 ನೇ ಸಾಲಿನಲ್ಲಿ ಇಲ್ಲಿಯವರೆಗೆ ಆರೋಗ್ಯ ಇಲಾಖೆ 12004 ಮಕ್ಕಳಿಗೆ ದೃಷ್ಠಿ ದೋಷ ಪರೀಕ್ಷೆ ಮಾಡಿದ್ದು, ಈ ಪರೀಕ್ಷೆಯಲ್ಲಿ ಆತಂಕಕಾರಿಯಾದ ಅಂಶವನ್ನ ಆರೋಗ್ಯ ಇಲಾಖೆ ಹೊರ ಹಾಕಿದೆ. 120004 ಮಕ್ಕಳಲ್ಲಿ ಬರೊಬ್ಬರಿ 77342 ಲಕ್ಷ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ ಇದ್ದು 6223 ಶಾಲಾ ಮಕ್ಕಳಿಗೆ ಆರೋಗ್ಯ ಇಲಾಖೆ ಸ್ಪೆಕ್ಟಿಕಲ್ಸ್ ನೀಡಿದೆ. ಇನ್ನು ಮೊಬೈಲ್ ಹಾಗೂ ಅಪೌಷ್ಠಿಕ ಆಹಾರ ಕೊರತೆ ಸೇರಿದ್ದಂತೆ ನಾನಾ ಕಾರಣಗಳಿಂದ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ ಶುರುವಾಗಿದ್ದು, ದೂರ ದೃಷ್ಠಿ ಸಮಸ್ಯೆ ಹಾಗೂ ಸಮೀಪ ದೃಷ್ಠಿ ಸಮಸ್ಯೆ ಮಕ್ಕಳಿಗೆ ಕಾಡುತ್ತಿದೆ.
ಇನ್ನೂ ಶಾಲಾ ಮಕ್ಕಳಲ್ಲಿ ಹಚ್ಚಾದ ಮೊಬೈಲ್ ಬಳಕೆಯಿಂದ ಕಣ್ಣಿನ ಸಮಸ್ಯೆ ಹಿನ್ನಲೆ ಪೋಷಕರಿಗೆ ಎಚ್ಚರಿಕೆ ನೀಡಲಾಗಿದೆ. ಮಕ್ಕಳು ಊಟಕ್ಕೆ ಹಠ ಮಾಡುತ್ತಾರೆ, ಓದಲು ಕಿರಿಕ್ ಮಾಡುತ್ತಾರೆ, ಹಠ ಮಾಡುತ್ತಿದ್ದಾರೆ ಎಂದು ಮಕ್ಕಳ ಕೈಗೆ ಮೊಬೈಲ್ ಕೊಡುವ ಮುನ್ನ ಮಕ್ಕಳ ಆರೋಗ್ಯದ ಬಗ್ಗೆ ಹಲವು ಭಾರಿ ಯೋಚಿಸಿ ಎಂದು ವೈದ್ಯರು ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ.