ಹಾಲು, ಮೊಟ್ಟೆಗಳು ದೇಹದ ಬೆಳವಣಿಗೆ ಮತ್ತು ಮೂಳೆಗಳಿಗೆ ಬೇಕಾದ ಶಕ್ತಿಯನ್ನು ನೀಡುತ್ತವೆ.
ಹಾಲಿನೊಂದಿಗೆ ಬೇರೆ ಆಹಾರ ತಯಾರಿಸಿ ಮೊಟ್ಟೆಯನ್ನು ಹಾಲಿನಲ್ಲಿ ಬೇಯಿಸಿ ತಿನ್ನಬಹುದೇ? ಆದರೆ ಹಸಿ ಮೊಟ್ಟೆಯನ್ನು ಹಾಲಿನ ಜೊತೆ ತಿನ್ನಬಾರದು, ಇದು ಹೊಟ್ಟೆ ಉಬ್ಬರ, ಅಸ್ವಸ್ಥತೆ ಮತ್ತು ಹೊಟ್ಟೆ ನೋವಿಗೆ ಕಾರಣವಾಗಬಹುದು.
ಹಸಿ ಮೊಟ್ಟೆಗಳು ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾವನ್ನು ಹೊಂದಿರುತ್ತವೆ. ಈ ಬ್ಯಾಕ್ಟೀರಿಯಾವು ಹಾಲಿನಲ್ಲಿ ಹರಡಬಹುದು, ಇದು ಹೊಟ್ಟೆ ಉಬ್ಬರ, ವಾಂತಿ, ವಾಕರಿಕೆಗೆ ಕಾರಣವಾಗಬಹುದು.
ಎರಡು ರೀತಿಯ ಪ್ರೋಟೀನ್ ಸೇವಿಸುವುದರಿಂದ ಜೀರ್ಣಕ್ರಿಯೆಗೆ ಅಸಾಧ್ಯವಾದ ಪರಿಣಾಮಗಳು ಉಂಟಾಗಬಹುದು. ಹೊಟ್ಟೆ ಉಬ್ಬರ, ಚಡಪಡಿಕೆ, ಹೊಟ್ಟೆ ನೋವು ಮತ್ತು ಅತಿಸಾರಕ್ಕೆ ಕಾರಣವಾಗಬಹುದು. ಆದರೆ ಹಸಿ ಮೊಟ್ಟೆ ಮತ್ತು ಹಾಲು ಬೇರೆ ಬೇರೆ ಆಹಾರಗಳನ್ನು ತಯಾರಿಸಿ ತಿನ್ನಬಹುದು.
ಮಸಲ್ ಬಿಲ್ಡ್ ಮಾಡಲು ಮತ್ತು ಪ್ರೋಟೀನ್ ಸೇವನೆಯನ್ನು ಹೆಚ್ಚಿಸಲು ಬಾಡಿಬಿಲ್ಡರ್ಗಳು ಹಾಲಿನಲ್ಲಿ ನಾಲ್ಕು-ಐದು ಕಚ್ಚಾ ಮೊಟ್ಟೆಗಳನ್ನು ಬೆರೆಸಿ ತಿನ್ನುತ್ತಾರೆ. ಆದರೆ ಈ ಮೊಟ್ಟೆಗಳಲ್ಲಿ ಕೊಲೆಸ್ಟ್ರಾಲ್ ಸಮೃದ್ಧವಾಗಿರುವುದು ಹೃದಯರಕ್ತನಾಳದ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಕಾಂಬಿನೇಶನ್ ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಎಂದು ಹೇಳಲಾಗಿದೆ.