ಬಾಳೆಹಣ್ಣು ಪೋಷಕಾಂಶಗಳಿಂದ ಸಮೃದ್ಧವಾಗಿರುವಂತಹ ಹಣ್ಣು. ಇದನ್ನು ಯಾವ ಸಮಯದಲ್ಲಿ ಬೇಕಾದರೂ ತಿನ್ನಬಹುದು ಎಂದು ಭಾವಿಸಲಾಗಿದೆ. ಬಾಳೆಹಣ್ಣು ಹಣ್ಣಾಗುತ್ತಿದ್ದಂತೆ ಅದರ ರುಚಿ ಮತ್ತು ಪೌಷ್ಟಿಕಾಂಶದ ಮೌಲ್ಯವು ಬದಲಾಗುತ್ತದೆ. ಚೆನ್ನಾಗಿ ಮಾಗಿದ ಬಾಳೆಹಣ್ಣು, ಹೊಸದಾಗಿ ಮಾಗಿದ ಬಾಳೆಹಣ್ಣಿಗಿಂತ ಹೆಚ್ಚಿನ ಸಿಹಿಯನ್ನು ಹೊಂದಿರುತ್ತದೆ. ಹೊಸದಾಗಿ ಮಾಗಿದ ಬಾಳೆಹಣ್ಣನ್ನು ತಿನ್ನುವುದರಿಂದ ನಿಮ್ಮ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಆದ್ರೆ ರಾತ್ರಿ ಹೊತ್ತು ಅಥವಾ ಚಳಿಗಾಲದಲ್ಲಿ ಬಾಳೆಹಣ್ಣು ತಿನ್ನಲು ಸುರಕ್ಷಿತವಲ್ಲ ಎಂದು ಆಯುರ್ವೇದ ತಜ್ಞ ಡಾ ಆಶುತೋಷ್ ಗೌತಮ್ ಗ್ಯಾರಂಟಿಯಾಗಿ ಹೇಳಲಾಗುವುದಿಲ್ಲ. ಬಾಳೆಹಣ್ಣು ಒಂದು ತೂಕವಿರುವ ಹಣ್ಣಾಗಿದ್ದು, ಜೀರ್ಣಿಸಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ,
ಆದ್ದರಿಂದ ರಾತ್ರಿ ಹೊತ್ತು ಇದನ್ನು ತಿನ್ನಬಾರದು. ಹಾರ್ವರ್ಡ್ ವಿಶ್ವವಿದ್ಯಾನಿಲಯವು ನಡೆಸಿದ ಅಧ್ಯಯನದಲ್ಲಿ, ಬಾಳೆಹಣ್ಣಿನ ಪಿಷ್ಟದ ಅಂಶವು ಫೈಬರ್ ನಂತಹ ಮಧುಮೇಹ ವಿರೋಧಿಯಾಗಿದೆ, ಇದನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ತ್ವರಿತವಾಗಿ ಹೆಚ್ಚಾಗುವುದಿಲ್ಲ ಎನ್ನಲಾಗಿದೆ.
ಬಾಳೆಹಣ್ಣಿನಲ್ಲಿರುವ ಪೊಟ್ಯಾಸಿಯಮ್ ಪ್ರಮುಖ ಎಲೆಕ್ಟ್ರೋಲೈಟ್ ಪೋಷಕಾಂಶವಾಗಿದೆ. ನಮ್ಮ ಸ್ನಾಯುಗಳ ಚಲನೆ ಮತ್ತು ಹೃದಯರಕ್ತನಾಳದ ಆರೋಗ್ಯಕ್ಕೆ ಇದು ಮುಖ್ಯವಾಗಿದೆ. ಬಾಳೆಹಣ್ಣು ಉತ್ತಮವಾಗಿದ್ದರೂ, ಪ್ರತಿದಿನ ಒಂದೇ ಹಣ್ಣನ್ನು ತಿನ್ನುವ ಬದಲು ವಿವಿಧ ರೀತಿಯ ತರಕಾರಿಗಳು ಮತ್ತು ಹಣ್ಣುಗಳನ್ನು ತಿನ್ನುವುದು ಉತ್ತಮ ಎಂದು ವೈದ್ಯಕೀಯ ತಜ್ಞರು ಸಲಹೆ ನೀಡುತ್ತಾರೆ.
ಸಾಮಾನ್ಯ ಪ್ರಯೋಜನಗಳು: ಬಾಳೆಹಣ್ಣು ತಿನ್ನುವುದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಪೊಟ್ಯಾಸಿಯಮ್ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ತೆಳ್ಳಗಿನ ಸ್ನಾಯುಗಳನ್ನು ಹೊಂದಿರುವವರು ಬಾಳೆಹಣ್ಣುಗಳನ್ನು ತಿನ್ನಬಹುದು. ಅಲ್ಲದೇ ಮೂಳೆಗಳು ಬಲಿಷ್ಠವಾಗುತ್ತವೆ.