ಲೈಂಗಿಕ ಕ್ರಿಯೆ ವೇಳೆ ಹಲವಾರು ಗುಪ್ತ ರೋಗಗಳು ಅಂಟಿಕೊಳ್ಳುವಂತಹ ಸಾಧ್ಯತೆಗಳು ಇವೆ. ಇದಕ್ಕಾಗಿ ಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಬೇಕು ಎಂದು ಹೇಳಲಾಗುತ್ತದೆ. ಅದರಲ್ಲೂ ಬಹುಸಂಗಾತಿ ಇರುವಂತಹ ಜನರು ಇಂತಹ ರೋಗಗಳಿಗೆ ಗುರಿಯಾಗುವುದೇ ಹೆಚ್ಚು. ಹೀಗಾಗಿ ಅವರು ಮತ್ತು ಸಂಗಾತಿಯಲ್ಲಿ ಲೈಂಗಿಕ ರೋಗಗಳು ಕಂಡುಬರಬಹುದು. ಆದರೆ ನಾವು ಈ ಲೇಖನದಲ್ಲಿ ನಿಮಗೆ ಹೇಳಲು ಹೊರಟಿರುವುದು ಲೈಂಗಿಕ ಕ್ರಿಯೆ ಬಳಿಕ ಮೂತ್ರ ವಿಸರ್ಜನೆ ಮಾಡುವುದು ಅನಿವಾರ್ಯವೇ?
ಲೈಂಗಿಕ ಕ್ರಿಯೆಯ (Sexual Intercourse) ನಂತರ ಮೂತ್ರ ವಿಸರ್ಜನೆ ಮಾಡೋದ್ರಲ್ಲಿ ಯಾವುದೇ ಸಮಸ್ಯೆಯಿಲ್ಲ. ನೀವು ಬಯಸಿದರೆ ಅದನ್ನು ಮಾಡಬಹುದು, ಮಾಡದಿದ್ದರೂ ಪರವಾಗಿಲ್ಲ ಎನ್ನುತ್ತಾರೆ ತಜ್ಞರು. ಪುರುಷರು ಈ ಕ್ರಿಯೆಯಿಂದ ಹೆಚ್ಚಿನ ಪ್ರಯೋಜನ ಪಡೆಯುವುದಿಲ್ಲ, ಆದರೆ ಇದು ಮಹಿಳೆಯರಿಗೆ ಸ್ವಲ್ಪ ಮಟ್ಟಿಗೆ ಪ್ರಯೋಜನಕಾರಿ.
ಲೈಂಗಿಕ ಚಟುವಟಿಕೆಯ ಸಮಯದಲ್ಲಿ, ಬ್ಯಾಕ್ಟೀರಿಯಾ ಮೂತ್ರನಾಳದ ಮೂಲಕ ಮೂತ್ರಕೋಶವನ್ನು ತಲುಪುತ್ತದೆ, ನಂತರ ಅವು ಯುಟಿಐಗೆ ಕಾರಣವಾಗುತ್ತವೆ. ಮೂತ್ರವಿಸರ್ಜನೆ ಮೂತ್ರನಾಳವನ್ನು ಶುದ್ಧೀಕರಿಸುತ್ತದೆ, ಇದು ಯುಟಿಐ ಅಪಾಯವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುತ್ತದೆ.
ತಜ್ಞರ ಪ್ರಕಾರ, ಲೈಂಗಿಕ ಕ್ರಿಯೆಯ ನಂತರ ಮೂತ್ರವಿಸರ್ಜನೆ ಮಾಡುವುದರಿಂದ ಗರ್ಭಧಾರಣೆ ತಡೆಯಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಪುರುಷರ ಶಿಶ್ನದಿಂದ 4-5 ಮಿಲಿ ವೀರ್ಯವು ಒಂದು ಸ್ಖಲನದಲ್ಲಿ ಹೊರಬರುತ್ತೆ. ಈ ವೀರ್ಯಗಳಲ್ಲಿ ಕೆಲವು ತನ್ನಷ್ಟಕ್ಕೆ ತಾನೇ ಹೊರಬರುತ್ತವೆ ಮತ್ತು ಕೆಲವು ಒಳಗೆ ಉಳಿಯುತ್ತವೆ. ಇಲ್ಲಿ ಸೆಮನ್ ಮತ್ತು ವೀರ್ಯಾಣುಗಳ ನಡುವಿನ ವ್ಯತ್ಯಾಸ ಅರ್ಥಮಾಡಿಕೊಳ್ಳಬೇಕು.
ವೀರ್ಯವು ಯೋನಿಯ ಗೋಡೆಗೆ ಅಂಟಿಕೊಳ್ಳುತ್ತದೆ, ಆದ್ದರಿಂದ ಮೂತ್ರವಿಸರ್ಜನೆ ಮಾಡುವಾಗ, ವೀರ್ಯದ ಕೆಲವು ಭಾಗವು ಹೊರಬರಬಹುದು, ಆದರೆ ಎಲ್ಲಾ ವೀರ್ಯಾಣುವನ್ನು ಹೊರತೆಗೆಯಲು ಸಾಧ್ಯವಿಲ್ಲ. ಆದ್ದರಿಂದ ಲೈಂಗಿಕ ಕ್ರಿಯೆಯ ನಂತರ ಮೂತ್ರವಿಸರ್ಜನೆ ಮಾಡುವುದು ಗರ್ಭಧಾರಣೆ ತಡೆಯೋ ವಿಧಾನ ಅಲ್ಲ.
ಲೈಂಗಿಕ ಕ್ರಿಯೆಯ ನಂತರ ಮೂತ್ರವಿಸರ್ಜನೆ ಎಸ್ಟಿಡಿ ತಡೆಯಲು ಸಾಧ್ಯವೇ?
ಸೆಕ್ಸ್ ಬಳಿಕ ಮೂತ್ರ ವಿಸರ್ಜನೆ ಸೆಕ್ಸ್ ನಿಂದ ಉಂಟಾಗುವ ರೋಗಗಳನ್ನು ತಡೆಯಲು ಸಾಧ್ಯವಿಲ್ಲ. STD ಮುಖ್ಯವಾಗಿ ವೈರಸ್ಗಳಿಂದ ಹರಡುತ್ತವೆ ಮತ್ತು ಮೂತ್ರವಿಸರ್ಜನೆ ವರ್ಗಾವಣೆಗೊಂಡ ವೈರಸ್ನಿಂದ ಹೊರಬರಲು ಸಾಧ್ಯವಿಲ್ಲ, ಆದ್ದರಿಂದ ಅಸುರಕ್ಷಿತ ಲೈಂಗಿಕತೆಯ ನಂತರ ಮೂತ್ರವಿಸರ್ಜನೆ ಮಾಡೋದ್ರಿಂದ ಎಸ್ ಟಿಡಿ ಉಂಟಾಗುವ ಅಪಾಯ ಕಡಿಮೆ ಮಾಡುತ್ತದೆ ಎಂದು ಭಾವಿಸೋದು ಸರಿಯಲ್ಲ. ಕಾಂಡೋಮ್ (Condom) ಎಸ್ ಟಿಡಿ ಸಮಸ್ಯೆ ತಡೆಗಟ್ಟಲು ಅತ್ಯುತ್ತಮ ಮಾರ್ಗವಾಗಿದೆ.