ಹಕ್ಕಿಜ್ವರ ಸೋಂಕು ಬೆಂಗಳೂರಿನಲ್ಲಿ ಕಾಣಿಸಿಕೊಂಡಿದೆ. ರಾಜ್ಯಾದ್ಯಂತ ಹರಡುವ ಅಪಾಯವಿದೆ. ಹಕ್ಕಿಯ ತ್ಯಾಜ್ಯ ನಮ್ಮ ಸಂಪರ್ಕಕ್ಕೆ ಬಂದರೆ ಅದರಿಂದ ವೈರಾಣು ನಮ್ಮ ದೇಹಕ್ಕೆ ಬರುವ ಸಾಧ್ಯತೆ ಇದೆ. ಸೋಂಕು ಪೀಡಿತ ಹಕ್ಕಿಯ ಮೂಗಿನ ಸ್ರಾವ, ಬಾಯಿ ಅಥವಾ ಕಣ್ಣಿಂದ ಸ್ರವಿಸುವ ದ್ರವದ ಮೂಲಕ ಬರಬಹುದು. ಇವು ಹೆಚ್ಚಾಗಿ ಹಕ್ಕಿಯಿಂದ ಹಕ್ಕಿಗೆ ಹರಡುತ್ತವೆ. ಹಕ್ಕಿಯಿಂದ ಮನುಷ್ಯನಿಗೆ ಬರೋದು ಅಪರೂಪ. ಆದರೆ ಕೋಳಿ ಫಾರಂನಲ್ಲಿ ಕೆಲಸ ಮಾಡೋರಿಗೆ, ಕೊಳಚೆ ಪ್ರದೇಶದಲ್ಲಿ ವಾಸಿಸುವವರಿಗೆ, ಹಕ್ಕಿತ್ಯಾಜ್ಯ ಸೇರಿದ ಅಥವಾ ಹಕ್ಕಿಗಳು ಈಜಾಡುವ ಕೆರೆ, ನದಿ, ಸ್ವಿಮ್ಮಿಂಗ್ಪೂಲ್ನಲ್ಲಿ ಈಜಾಡೋದ್ರಿಂದ, ಬೇರೆ ಪ್ರದೇಶಗಳಿಗೆ ಹೋಗಿ ಬಂದಾಗ, ಪ್ರಯಾಣಿಸುವಾಗ ಹಕ್ಕಿಜ್ವರದ ರೋಗಿ ಸಂಪರ್ಕಕ್ಕೆ ಬಂದರೆ ಹಕ್ಕಿಜ್ವರ ಬರುವ ಸಾಧ್ಯತೆಗಳಿವೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಸಮಸ್ಯೆ ಹೆಚ್ಚು.
ಬಾಗಪ್ಪ ಹರಿಜನ ಹತ್ಯೆ ಕೇಸ್: ನಾಲ್ವರು ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ!
ಬರ್ಡ್ ಫ್ಲೂ ಬಂದಾಗಲೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಕೋಳಿ ತಿನ್ನಬಾರದು ಅಂತ ಪೋಸ್ಟ್ಗಳು ಬರ್ತಿರ್ತಾವೆ. ಆದ್ರೆ… ಸರ್ಕಾರ ಹೇಳಿದ್ರೂ… ವ್ಯಾಪಾರಿಗಳು ಮಾರ್ತಾರೆ… ಜನ ಖರೀದಿ ಮಾಡಿ ತಿಂತಾರೆ. ಬರ್ಡ್ ಫ್ಲೂ ಇದ್ದಾಗ ನಿಜವಾಗ್ಲೂ ಕೋಳಿ ತಿನ್ನಬಾರದಾ? ಮೊಟ್ಟೆ ತಿನ್ನೋದೂ ಬೇಡ್ವಾ? ತಿಂದ್ರೆ ಏನಾಗುತ್ತೆ? ತಜ್ಞರು ಏನ್ ಹೇಳ್ತಾರೆ ನೋಡೋಣ…
ಏವಿಯನ್ ಇನ್ಫ್ಲುಯೆನ್ಜ ಅಂತ ಕರೆಯೋ ಬರ್ಡ್ ಫ್ಲೂ, ಪಕ್ಷಿಗಳಿಗೆ ಬರೋ ಸಾಂಕ್ರಾಮಿಕ ವೈರಲ್ ಸೋಂಕು. ಕೆಲವು ಬಗೆಯ ಬರ್ಡ್ ಫ್ಲೂ ವೈರಸ್ ಮನುಷ್ಯರಿಗೂ ಮತ್ತು ಇತರ ಪ್ರಾಣಿಗಳಿಗೂ ಹರಡಬಹುದು. ಕೆಲವೊಮ್ಮೆ ತೀವ್ರ ಅನಾರೋಗ್ಯ ಮತ್ತು ಸಾವಿಗೂ ಕಾರಣವಾಗಬಹುದು. ಮನುಷ್ಯರಿಗೆ ಬರ್ಡ್ ಫ್ಲೂ ಬಂದಾಗ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ.
ಜ್ವರ, ಕೆಮ್ಮು, ಗಂಟಲು ನೋವು, ಮೈಕೈ ನೋವು, ಆಯಾಸ, ಉಸಿರಾಟದ ತೊಂದರೆ. ತೀವ್ರ ಸಂದರ್ಭಗಳಲ್ಲಿ, ನ್ಯುಮೋನಿಯಾ, ಉಸಿರಾಟದ ತೊಂದರೆ, ಅಂಗಾಂಗ ವೈಫಲ್ಯ ಮತ್ತು ಸಾವಿಗೂ ಕಾರಣವಾಗಬಹುದು.
ಬರ್ಡ್ ಫ್ಲೂ ಸೀಸನ್ನಲ್ಲಿ ಕೋಳಿ ಮಾಂಸದಿಂದ ದೂರ ಇರೋದೇ ಒಳ್ಳೆಯದು. ತಿನ್ನಬೇಕು ಅಂತ ಅಂದ್ರೆ… ಚೆನ್ನಾಗಿ ಬೇಯಿಸಿ ತಿನ್ನಿ. ಮೊಟ್ಟೆಯನ್ನೂ ಬೇಯಿಸಿ ತಿನ್ನಿ. ಕೋಳಿ ಮತ್ತು ಮೊಟ್ಟೆ ಬೇಯಿಸುವಾಗ ಒಳಗಿನ ಉಷ್ಣತೆ ೧೬೫ ಡಿಗ್ರಿ ಫ್ಯಾರನ್ಹೀಟ್ ಇರೋ ಹಾಗೆ ನೋಡ್ಕೊಳಿ,
ಸಿಡಿಸಿ ಪ್ರಕಾರ, ಇದು ಬರ್ಡ್ ಫ್ಲೂ ವೈರಸ್ ಸೇರಿದಂತೆ ಬ್ಯಾಕ್ಟೀರಿಯಾ ಮತ್ತು ವೈರಸ್ಗಳನ್ನು ನಾಶ ಮಾಡುತ್ತದೆ. ಕಚ್ಚಾ ಕೋಳಿಯನ್ನ ಬೇಯಿಸಿದ ಆಹಾರದಿಂದ ದೂರ ಇಡಬೇಕು. ಕಚ್ಚಾ ಕೋಳಿಯನ್ನ ಬೇರೆ ಪಾತ್ರೆಯಲ್ಲಿ ಅಥವಾ ಚೀಲದಲ್ಲಿ ಇಡಬೇಕು. ಹಾಗಿದ್ರೆ ರಸ ಇತರ ಆಹಾರದ ಮೇಲೆ ಬೀಳುವುದಿಲ್ಲ. ಕಚ್ಚಾ ಕೋಳಿ ಮುಟ್ಟಿದ ನಂತರ ಸೋಪಿನಿಂದ ಕೈ ತೊಳೆಯಿರಿ.
ಬರ್ಡ್ ಫ್ಲೂ ಸೀಸನ್ನಲ್ಲಿ ಮೊಟ್ಟೆ ತಿನ್ನುವಾಗಲೂ ಎಚ್ಚರವಿರಲಿ. ಕಚ್ಚಾ ತಿನ್ನಬಾರದು, ಆಮ್ಲೆಟ್ ರೀತಿ ಬೇಯಿಸಿ ತಿನ್ನಿ. ಮೊಟ್ಟೆಯ ಹಳದಿ ಮತ್ತು ಬಿಳಿ ಭಾಗ ಎರಡೂ ಚೆನ್ನಾಗಿ ಬೆಂದ ಮೇಲೆ ತಿನ್ನಿ..