ಇತ್ತೀಚಿನ ಸಂಶೋಧನೆಯು ಮಾಧ್ಯಮದಲ್ಲಿ ಪ್ರಕಟಿಸಿದ ವರದಿಯ ಪ್ರಕಾರ 2030 ರಲ್ಲಿ ಭಾರತದಲ್ಲಿ 9.8 ಕೋಟಿ ಜನರು ಮಧುಮೇಹಿಗಳಾಗಿರುತ್ತಾರೆ. ಈ ಬಗ್ಗೆ ನಡೆಸಿದ ಅಧ್ಯಯನದಲ್ಲಿ ಈಗ ಏರುಗತಿಯಲ್ಲಿ ಸಾಗುತ್ತಿರುವ ಈ ಸಂಖ್ಯೆಯ ಟೈಪ್ – 2 ಮಧುಮೇಹಿಗಳಿಗೆ ಒದಗಿಸಲು ಅಗತ್ಯವಿರುವ ಇನ್ಸುಲಿನ್ ಉತ್ಪಾದಿಸಲು ಮುಂದಿನ ಹನ್ನೆರಡು ವರ್ಷಗಳಲ್ಲಿ ಶೇಖಡಾ ಇಪ್ಪತ್ತಕ್ಕೂ ಹೆಚ್ಚು ಹೆಚ್ಚಳ ಕಾಣಲಿದೆ.
ಮಧುಮೇಹಿಗಳು ಶುಗರ್ ಲೆಸ್ ಟೀ ಕುಡಿಯಬಹುದು!
ಮಧುಮೇಹದ ಟೈಪ್ – 2 ಅತಿ ಹೆಚ್ಚು ಸಾಮಾನ್ಯವಾಗಿ ಕಾಣಬರುವ ವಿಧವಾಗಿದ್ದು ಒಟ್ಟಾರೆ ಪ್ರಕರಣಗಳ 90-95 ಶೇಖಡಾದಷ್ಟಿದೆ. ಈ ಬಗೆಯ ಮಧುಮೇಹಿಗಳ ದೇಹದಲ್ಲಿ ಇನ್ಸುಲಿನ್ ಉತ್ಪತ್ತಿಯದರೂ ಇದನ್ನು ಬಳಸಿಕೊಳ್ಳುವ ಸಾಮರ್ಥ್ಯ ಕುಂದಿರುವ ಕಾರಣ ಗ್ಲುಕೋಸ್ ಬಳಕೆಯಾಗದೇ ಮೂತ್ರದ ಮೂಲಕ ಹೊರಹೋಗುತ್ತದೆ. ಮಧುಮೇಹವನ್ನು ಗುಣಪಡಿಸಲು ಸಾಧ್ಯವಿಲ್ಲ,
ಆದರೆ ಇದನ್ನು ನಿಯಂತ್ರಣದಲ್ಲಿರಿಸಬಹುದು. ಇದಕ್ಕಾಗಿ ಜೀವನಕ್ರಮದಲ್ಲಿ ಬದಲಾವಣೆ, ಆಹಾರದಲ್ಲಿ ನಿಯಂತ್ರಣ, ಸಾಕಷ್ಟು ವ್ಯಾಯಾಮ ಮೊದಲಾದವು ಅಗತ್ಯವಾಗುತ್ತವೆ. ನಿತ್ಯವೂ ವ್ಯಾಯಾಮ ಮಾಡಿ ಹೆಚ್ಚುವರಿ ತೂಕವನ್ನು ಇಳಿಸುವುದೂ ಅಗತ್ಯ. ಇದರ ಜೊತೆಗೇ ಟೀ ಕುಡಿಯುವುದರಿಂದಲೂ ರಕ್ತದಲ್ಲಿ ಅಧಿಕ ಪ್ರಮಾಣದ ಸಕ್ಕರೆಯ ಮಟ್ಟ ಏರದಂತೆ ತಡೆಯಬಹುದು. ಆದರೆ, ದಿನಕ್ಕೆಷ್ಟು ಟೀ ಕುಡಿಯಬೇಕು? ಯಾವ ಟೀ ಕುಡಿದರೆ ಒಳ್ಳೆಯದು?
ಮಧುಮೇಹಿಗಳಿಗೆ ಯಾವ ಬಗೆಯ ಟೀ ಒಳ್ಳೆಯದು?
ಮಧುಮೇಹಿಗಳಿಗೆ ಟೀ ವಿಷಯದಲ್ಲಿ ಗೊಂದಲ ಮೂಡೂವುದು ಸಹಜ. ಆದರೆ ಆರೋಗ್ಯ ತಜಷರ ಪ್ರಕಾರ ಹಸಿರು ಟೀ ಅಥವಾ ಗ್ರೀನ್ ಟೀ ಮಧುಮೇಹಿಗಳಿಗೆ ಉತ್ತಮವಾದ ಪೇಯವಾಗಿದ್ದು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಒದಗಿಸುತ್ತದೆ, ಎಂದು ಅಭಿಪ್ರಾಯ ಪಡುತ್ತಾರೆ. ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮ ಗೊಳಿಸುವ ಮೂಲಕ ಆರೋಗ್ಯವನ್ನು ವೃದ್ದಿಸುತ್ತದೆ. ಇದರಲಿರುವ ಉತ್ತಮ ಪ್ರಮಾಣದ ಪಾಲಿಫೆನಾಲುಗಳು ಆಂಟಿ ಆಕ್ಸಿಡೆಂಟುಗಳಂತೆ ಕಾರ್ಯ ನಿರ್ವಹಿಸಿ ಜೀವಕೋಶಗಳಿಗೆ ಎದುರಾಗುವ ಘಾಸಿಯಿಂದ ರಕ್ಷಿಸುತ್ತದೆ. ಈ ಬಗ್ಗೆ ನಡೆದ ಸಂಶೋಧನೆಯ ಪ್ರಕಾರ ಈ ಫಾಲಿಫೆನಾಲುಗಳು ದೇಹದಲ್ಲಿ ರಕ್ತದ ಪ್ರಮಾಣವನ್ನು ನಿಯಂತ್ರಿಸುತ್ತವೆ ಹಾಗೂ ತನ್ಮೂಲಕ ಎದುರಾಗಬಹುದಾದ ಇತರ ತೊಂದರೆಗಳ ಸಾಧ್ಯತೆಯನ್ನು ತಗ್ಗಿಸುತ್ತದೆ.
ಟೈಟ್-2 ಮಧುಮೇಹಿಗಳು ದಿನಕ್ಕೆ ಎಷ್ಟು ಕಪ್ ಟೀ ಕುಡಿಯಬಹುದು?
ಆರೋಗ್ಯ ತಜ್ಞರ ಪ್ರಕಾರ, ದಿನಕ್ಕೆ ಎರಡಕ್ಕಿಂತ ಹೆಚ್ಚು ಕಪ್ ಟೀ ಕುಡಿಯುವ ಮೂಲಕ (ಅಂದರೆ ಸಕ್ಕರೆ ಆದಷ್ಟು ಕಡಿಮೆ ಇರಬೇಕು) ಟೈಟ್-2 ಮಧುಮೇಯವನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಡುತ್ತಾರೆ. ಅದರಲ್ಲೂ ವಿಶೇಷವಾಗಿ ಗ್ರೀನ್ ಟೀ ಸೇವನೆಯು ಸಂಕೀರ್ಣ ಜೀವರಾಸಾಯನಿಕ ಕ್ರಿಯೆಯ ಮೂಲಕ ಕೋಶಗಳನ್ನು ಸೂಕ್ಷ್ಮಗೊಳಿಸುತ್ತದೆ. ಈ ಮೂಲಕ ಇವು ಸಕ್ಕರೆಯನ್ನು ಪರಿಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ.
ಟೈಪ್-2 ಮಧುಮೇಹ ಇದ್ದವರಿಗೆ ಗ್ರೀನ್ ಟೀ ಒಳ್ಳೆಯದು
” ಮಧುಮೇಹಿಗಳಿಗೆ ಹಸಿರು ಟೀ ಉತ್ತಮ ಆಯ್ಕೆಯಾಗಿದೆ ಏಕೆಂದರೆ ಈ ಮೂಲಕ ಜೀವ ರಾಸಾಯನಿಕ ಕ್ರಿಯೆ ಚುರುಕು ಗೊಳ್ಳುತ್ತದೆ” ಎಂದು ಆಕೆ ಎವರಿಡೇ ಹೆಲ್ತ್ ಎಂಬ ತಾಣಕ್ಕೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ. ಒಂದು ವೇಳೆ ನೀವು ಅಥವಾ ನಿಮ್ಮ ಆಪ್ತರಲ್ಲಿ ಯಾರಿಗಾದರೂ ಟೈಪ್-2 ಮಧುಮೇಹವಿದ್ದರೆ ಅಥವಾ ಕುಟುಂಬದಲ್ಲಿ ಮಧುಮೇಹದ ಆರೋಗ್ಯ ಇತಿಹಾಸವಿದ್ದರೆ ನಿತ್ಯವೂ ಹಸಿರು ಟೀ ಕುಡಿಯುವುದು ನಿಮಗೆ ಉತ್ತಮವಾಗಿದೆ ಹಾಗೂ ಈ ಸ್ಥಿತಿ ಎದುರಾಗುವ ಸಾಧ್ಯತೆಯನ್ನು ತಗ್ಗಿಸಬಹುದು. ಆದರೆ ನಿಮಗೆ ಟೈಪ್-2 ಮಧುಮೇಹದ ಯಾವುದೇ ಸೂಚನೆ ಕಂಡುಬಂದರೂ ನಿಮ್ಮ ಕುಟುಂಬ ವೈದ್ಯರ ಸಲಹೆಯನ್ನು ಪಡೆದೇ ಮುಂದುವರೆಯಿರಿ.