ಸುಮಾರು ವರ್ಷಗಳ ವಿರಾಮದ ನಂತರ ಭಾರತೀಯ ಐಟಿ ಕಂಪನಿಗಳು (Indian IT companies) ಕ್ಯಾಂಪಸ್ ನೇಮಕಾತಿ (Campus Hiring) ಆರಂಭಿಸಿವೆ.
IT ಕಂಪನಿಗಳು ಈಗ ಕ್ಲೌಡ್ ಕಂಪ್ಯೂಟಿಂಗ್, ಡೇಟಾ ಅನಾಲಿಟಿಕ್ಸ್ ಮತ್ತು ಕೃತಕ ಬುದ್ಧಿಮತ್ತೆ (AI) ನಂತಹ ಕ್ಷೇತ್ರಗಳಲ್ಲಿ ನುರಿತ ಪ್ರೋಗ್ರಾಮರ್ಗಳು ಮತ್ತು ಡಿಜಿಟಲ್ ತಜ್ಞರನ್ನು ಹುಡುಕುತ್ತಿವೆ. ಈ ಹುದ್ದೆಗಳಿಗೆ 6 ರಿಂದ 9 ಲಕ್ಷ ರೂ. ವರೆಗೆ ವೇತನದ (Salary) ಆಫರ್ ಅನ್ನು ಕಂಪನಿಗಳು ಪ್ರಕಟಿಸಿವೆ.
IBM, Infosys, TCS, ಮತ್ತು LTIMindtree ನಂತಹ ಐಟಿ ಸಂಸ್ಥೆಗಳು ಜುಲೈನಲ್ಲಿ ಕ್ಯಾಂಪಸ್ಗಳಿಗೆ ಭೇಟಿ ನೀಡಿ ನೇಮಕಾತಿ ಪ್ರಕ್ರಿಯೆ ಆರಂಭಿಸಿವೆ. ಟಿಸಿಎಸ್ 40,000 ಫ್ರೆಶರ್ಗಳನ್ನು ನೇಮಿಸಿಕೊಳ್ಳಲು ಯೋಜಿಸಿದೆ. ಇನ್ಫೋಸಿಸ್ ಕ್ಯಾಂಪಸ್ ಮತ್ತು ಆಫ್-ಕ್ಯಾಂಪಸ್ ಡ್ರೈವ್ಗಳ ಮೂಲಕ 15,000 ರಿಂದ 20,000 ಹೊಸ ಪದವೀಧರರನ್ನು ನೇಮಿಸಲು ಮುಂದಾಗಿದೆ ಎಂದು ವರದಿ ತಿಳಿಸಿದೆ.
ವಿಪ್ರೋ ಈ ಹಣಕಾಸು ವರ್ಷದಲ್ಲಿ 10,000 ರಿಂದ 12,000 ಫ್ರೆಶರ್ಗಳನ್ನು ನೇಮಿಸಿಕೊಳ್ಳುವ ಯೋಜನೆಯೊಂದಿಗೆ ಮರಳುತ್ತಿದೆ. ಒಂದು ವರ್ಷದ ವಿರಾಮದ ನಂತರ, ನಾವು ಪಾಲುದಾರಿಕೆ ಹೊಂದಿರುವ ಕ್ಯಾಂಪಸ್ಗಳಿಗೆ ಮರಳುತ್ತಿದ್ದೇವೆ ಎಂದು ವಿಪ್ರೋ ಎಚ್ಆರ್ ಮುಖ್ಯಸ್ಥ ಸೌರಭ್ ಗೋವಿಲ್ ಹೇಳಿದ್ದಾರೆ.
ಈ ಹಿಂದೆ ಕಟ್ ಆಫ್ ಸ್ಕೋರ್ 60% ಇತ್ತು ಈಗ ಇದು 70% ಏರಿಕೆಯಾಗಿದೆ. ಕೋಡಿಂಗ್ ಅಲ್ಲದೇ ಅವರ ವಿದ್ಯಾರ್ಥಿಗಳ ಸಾಮಾಜಿಕ ಜಾಲತಾಣ ಪ್ರೊಫೈಲ್, ಅವರು ಪಡೆದಿರುವ ಪ್ರಮಾಣಪತ್ರಗಳ ಮೌಲ್ಯಮಾಪನ ಮಾಡುವ ಮೂಲಕ ಆಯ್ಕೆ ಮಾಡಲು ಮುಂದಾಗಿವೆ.