ಬೆಳಗಾವಿ : ಬಾಣಂತಿ ಮಹಿಳೆಯರೇ ಎಚ್ಚರ.. ಎಚ್ಚರ.. ಎಚ್ಚರ.. ಸ್ವಲ್ಪ ಯಾಮಾರಿದ್ರೂ ನಿಮ್ಮ ಅಕೌಂಟ್ನಲ್ಲಿರೋ ಹಣ ಸೈಬರ್ ವಂಚಕರ ಪಾಲಾಗುತ್ತೆ ಹುಷಾರ್..
ಹೌದು, ಕೇಂದ್ರ ಸರ್ಕಾದ ಮಾತೃವಂದನಾ ಯೋಜನೆಯ ಹೆಸರಲ್ಲಿ ಸೈಬರ್ ವಂಚಕರು ಬಾಣಂತಿಯರ ಅಕೌಂಟ್ಗಳಿಗೆ ಕನ್ನ ಹಾಕುತ್ತಿದ್ದಾರೆ. ಮಾತೃವಂದನಾ ಹೆಸರಿನಲ್ಲಿ ಹಣ ಹಾಕ್ತಿವಿ ಅಂತ ಕರೆ ಮಾಡುತ್ತಾರೆ. ಅವರ ಜೊತೆಗೆ ಅಕೌಂಟ್ ಡಿಟೇಲ್ಸ್ ಕೊಟ್ಟರೆ ನಿಮ್ಮ ಅಕೌಂಟ್ನಲ್ಲಿರೋ ಹಣ ನಿಮಿಷದಲ್ಲೇ ಮಾಯಾ ಆಗುತ್ತೆ..
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಫೋನ್ ಮಾಡೋದಾಗಿ ಹೇಳೋ ಖದೀಮರು, ನಿಮ್ಮ ಸಂಪೂರ್ಣ ಮಾಹಿತಿಯನ್ನು ಕೇಳುತ್ತಾರೆ. ಅವರ ಆ ಮಾತುಗಳನು ನಂಬಿ ನೀವೇನಾದ್ರೂ ನಿಮ್ಮ ಮಾಹಿತಿ ಬಿಟ್ಟು ಕೊಟ್ರೆ ಬ್ಯಾಂಕನಲ್ಲಿರುವ ಹಣ ಗುಳುಂ ಅನ್ನಿಸುತ್ತಾರೆ. ನಿಮ್ಮ ಮೊಬೈಲಗೆ ಓಟಿಪಿ ಕಳಿಸ್ತಾರೆ. ಓಟಿಪಿ ಹೇಳಿದ್ರೆ ಅಕೌಂಟಿನಲ್ಲಿರುವ ಹಣ ಕ್ಷಣಮಾತ್ರದಲ್ಲೇ ಡೆಬಿಟ್ ಆಗುತ್ತೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬೇಡರಹಟ್ಟಿ ಗ್ರಾಮದ ಬಾಣಂತಿಯೊಬ್ಬರಿಗೆ ಇದೇ ರೀತಿ ವಂಚನೆ ಮಾಡಲಾಗಿದೆ. ಬೇಡರಹಟ್ಟಿ ಗ್ರಾಮದ ನಿವಾಸಿ ಜ್ಯೋತಿ ಮೊಕಾಶಿ ಅವರಿಗೆ ಹೀಗೆ ಕಾಲ್ ಮಾಡಿದ್ದ ವಂಚಕರು, ಅವರಿಂದ ಬ್ಯಾಂಕ್ ಡಿಟೇಲ್ಸ್ ಪಡೆದು, ಅವರ ಅಕೌಂಟ ಖಾತೆಗೆ ಕನ್ನ ಹಾಕಿದ್ದಾರೆ.