ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಹೈಕಮಾಂಡ್ ನಿರ್ಧಾರ ಮಾಡಲಿದೆ. ನಾನು ಅಧ್ಯಕ್ಷ ಸ್ಥಾನಕ್ಕೆ ಲಾಬಿ ಮಾಡುವುದಿಲ್ಲ ಎಂದು ಸಚಿವ ಎಂಬಿ ಪಾಟೀಲ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನೇನು ಲಾಬಿ ಮಾಡಿಲ್ಲ. ಲಾಬಿ ಮಾಡುವ ಸಂದರ್ಭ ಕೂಡ ಇದಲ್ಲ.
ಲೋಕಸಭಾ ಚುನಾವಣೆ ನಂತರ ಎಲ್ಲಾ ಚರ್ಚೆಗೆ ಬರುತ್ತದೆ. ಪಕ್ಷದಲ್ಲಿ ಸಾಕಷ್ಟು ಮಂದಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಇದ್ದಾರೆ. ಸಚಿವ ರಾಜಣ್ಣ ಕೂಡ ಹೇಳಿದ್ದಾರೆ. ಹೈಕಮಾಂಡ್ ಬಯಸಿದರೆ ಸಂಪುಟ ಪುನಾರಚನೆ ಕೂಡ ಆಗುತ್ತದೆ. ಸಿಎಂ ಬದಲಾವಣೆ ವಿಚಾರ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದರು.
Anna Bhagya Scheme: ಮೇ ತಿಂಗಳ ಅನ್ನಭಾಗ್ಯ ಯೋಜನೆಯ ಹಣವು ಇನ್ನೂ ಬಂದಿಲ್ವಾ..? ಈ ಕೆಲಸ ಮಾಡಿ ಸಾಕು
ವಿಧಾನ ಪರಿಷತ್ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಹಿರಿಯರನ್ನ ಕಡೆಗಣಿಸಿದ್ದಾರೆ ಎಂಬ ಪರಮೇಶ್ವರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲವೂ 4 ಗೋಡೆಗಳ ನಡುವೆ ಚರ್ಚೆ ಆಗುತ್ತದೆ. ಹಿಂದೆ 9 ಜನರ ಸಮಿತು ಇತ್ತು. ಸಮ್ಮಿಶ್ರ ಸರ್ಕಾರದಲ್ಲೂ ಸಮನ್ವಯ ಸಮಿತಿ ಇತ್ತು. ಈ ವಿಚಾರದಲ್ಲಿ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ದೇಶಪಾಂಡೆ ಎಲ್ಲಾ ಕುಳಿತು 4 ಗೋಡೆಗಳ ನಡುವೆ ಮಾತನಾಡಿ ಬಗೆಹರಿಸುತ್ತೇವೆ ಎಂದರು.