ಹುಬ್ಬಳ್ಳಿ : ಸಿಎಂ ಸಿದ್ಧರಾಮಯ್ಯ ಸಚಿವ ಸಂಪುಟ ಪುನರಾಚನೆ ಖಚಿತ ಎನ್ನಲಾಗುತ್ತಿದೆ. ಕಾನೂನು ಸಚಿವ ಎಚ್ ಕೆ.ಪಾಟೀಲ್ ನೀಡಿರುವ ಹೇಳಿಕೆ ಇದನ್ನೇ ಪುಷ್ಟೀಕರಿಸುತ್ತಿದೆ. ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಮತ್ತು ಡಿಸಿಎಂ ದೆಹಲಿ ಪ್ರವಾಸ ಗುಟ್ಟು ಬಿಟ್ಟುಕೊಟ್ಟಿದ್ದಾರೆ. ಸಚಿವರ ಪರ್ಫಾಮೆನ್ಸ್ ವರದಿ ಹೊತ್ತು ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಹೈಕಮಾಂಡ್ ಈಗಾಗಲೇ ಸಚಿವರ ರಿಪೋರ್ಟ್ ಕಾರ್ಡ್ ಕೇಳಿದೆ. ಮಂತ್ರಿಗಳಿಗೆ ತಮ್ಮ ತಮ್ಮ ಇಲಾಖೆಯಲ್ಲಿ ಏನೇನು ಕೆಲಸ ಮಾಡಿದ್ದೀರಿ ಅಂತ ಮಾಹಿತಿ ಕೇಳಿದೆ. ಇದು ನಮ್ಮ ಕಾಂಗ್ರೆಸ್ ನಲ್ಲಿ ನಡೆದುಕೊಂಡ ಬಂದ ಪದ್ದತಿ ಆಗಿದೆ. ನಮ್ಮ ಪಕ್ಷ ಹೈಕಮಾಂಡ್ ಎಲ್ಲಾ ಮಂತ್ರಿಗಳ ರಿಪೋರ್ಟ್ ಪರಿಶೀಲನೆ ಮಾಡುತ್ತಿದೆ ಎಂದರು. ಮುಖ್ಯ ಮಂತ್ರಿ ಬದಲಾವಣೆ ಮಾಧ್ಯಮಗಳ ಸೃಷ್ಟಿ ಆಗಿದೆ. ಸಿಎಂ ಬಗ್ಗೆ ಈಗಾಗಲೇ ಎಲ್ಲಾ ಸ್ಪಷ್ಟತೆಯನ್ನು ಡಿ.ಕೆ ಶಿವಕುಮಾರ್ ನೀಡಿದ್ದಾರೆ. ಸ್ವತಃ ಸಿಎಂ ಸಹ ಸ್ಪಷ್ಟನೆ ನೀಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಭಾವನೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸಿಎಂ ಬದಲಾವಣೆ ಚರ್ಚೆ ವಸ್ತು ಅಲ್ಲಾ ಎಂದರು.
KPCC ಅಧ್ಯಕ್ಷರ ಬದಲಾವಣೆಯ ಬಗ್ಗೆಯೂ ಚರ್ಚೆ..? “ಕೈ” ನೂತನ ಸಾರಥಿಯಾಗಿ ಸತೀಶ್ ಜಾರಕಿಹೊಳಿ..!?
ಬಿಎಸ್ ವೈ ಮೇಲಿನ ತನಿಖೆಗೆ ಸಿದ್ಧ
ಇನ್ನೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮೇಲಿನ ಐದು ವರ್ಷಗಳ ಕಾಲದ ಭ್ರಷ್ಟಾಚಾರ ಕುರಿತು ತನಿಖೆಗೆ ಸರ್ಕಾರದ ನಿಲುವು ವಿಚಾರವಾಗಿ ಮಾತನಾಡಿದ ಅವರು ಈ ಹಿಂದೆ ಸಾಮಾಜಿಕ ಕಾರ್ಯಕರ್ತ ಅಬ್ರಾಹಂ ರಾಜ್ಯಪಾಲರಿಗೆ ಯಡಿಯೂರಪ್ಪ ವಿರುದ್ಧ ತನಿಖೆಗೆ ಒತ್ತಾಯ ಮಾಡಿದ್ದರು. ಅಂದು ರಾಜ್ಯಪಾಲರು ಅಬ್ರಹಾಂ ಮನವಿ ತಿರಸ್ಕಾರ ಮಾಡಿದ್ದರು. ಆದರೆ ಈಗ ಸರ್ಕಾರ ಮರು ತನಿಖೆಗೆ ನಿರ್ಧಾರ ಮಾಡಿದೆ . ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮೇಲಿನ ಭ್ರಷ್ಟಾಚಾರ ತನಿಖೆ ಆಗಬೇಕು ಎಂದು ರಾಜ್ಯಪಾಲರ ಅನುಮತಿ ಸಹ ಕೇಳಲಾಗಿದೆ ಎಂದರು.