ಗದಗ: 2A ಮೀಸಲಾತಿ ಜಾರಿಗಾಗಿ ಈ ಬಾರಿ ಕಠೋರ ಹೋರಾಟ ಮಾಡುತ್ತೇವೆ ಮಾಜಿ ಸಚಿವ ಸಿ ಸಿ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ. ಗದಗದಲ್ಲಿ ಮಾತನಾಡಿದ ಅವರು, ಬಸನಗೌಡ ಪಾಟೀಲ್ ಯತ್ನಾಳ್ ಅವರ ನೇತೃತ್ವದಲ್ಲಿ ಜಯ ಮೃತ್ಯುಂಜಯ ಶ್ರೀಗಳ ಸಾನಿಧ್ಯದಲ್ಲಿ ಕಠೋರ ಹೋರಾಟ ಮಾಡುತ್ತೇವೆ. ಸಾವಿರಾರು ಟ್ರಾಕ್ಟರ್ ತೆಗೆದುಕೊಂಡು ಸುವರ್ಣ ಸೌಧ ಮುತ್ತಿಗೆ ಹಾಕೋದು ಅಂತಾ ಬಸವ ಜಯ ಮೃತ್ಯುಂಜಯ ಶ್ರೀಗಳು ಹೇಳಿದ್ದಾರೆ. ದೆಹಲಿ ಮಾದರಿಯಲ್ಲಿ ನಾವು ಸಹ ಮಾಡು ಇಲ್ಲವೇ ಮಡಿ ಹೋರಾಟ ಮಾಡ್ತೇವೆ ಎಂದರು. ಇನ್ನೂ ಇದೇ ವೇಳೆ ಕೋವಿಡ್ ಹಗರಣದ ಬಗ್ಗೆ ನ್ಯಾಯಮೂರ್ತಿ ಖನ್ನಾ ವರದಿ ವಿಚಾರವಾಗಿ ಮಾತನಾಡಿ, ನ್ಯಾಯಮೂರ್ತಿ ಖನ್ನಾ ನೇಮಕ ಮಾಡಿದಾಗಲೇ ಅವರು ಏನು ವರದಿ ಕೊಡ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿತ್ತು. ಅವರು ಯಾವ ಕಮ್ಯೂನಿಟಿ ಪ್ರತಿನಿಧಿಸ್ತಾರೆ..? ವರದಿ ಪೂರ್ಣ ಪ್ರಮಾಣದ್ದಲ್ಲ, ಮಧ್ಯಂತರ ವರದಿಯಷ್ಟೇ.. ಮಧ್ಯಂತರ ವರದಿ ಮೇಲೆ ಯಡಿಯೂರಪ್ಪ ಮೇಲೆ ಎಸ್ಐಟಿ ಬೇಡ, ಸಿದ್ದರಾಮಯ್ಯನವರೇ ಸೇಡಿನ ರಾಜಕಾರಣ ಬೇಡ ಎಂದಿದ್ದಾರೆ. ಸೂರ್ಯ ಚಂದ್ರರು ಇರೋವರೆಗೂ ಅಂತಾ ಡಿ ಕೆ ಶಿವಕುಮಾರ ಹೇಳ್ತಾರೆ. ಅವರು ಮುಂದಿನ 5 ವರ್ಷದ ಚುನಾವಣೆ ಈಗಲೇ ಮಾಡಿದ್ದಾರೆ ಕಾಣುತ್ತೆ. ಈ ಮೂರು ವರ್ಷ ಮುಂದಿನ 5 ವರ್ಷ ಒಟ್ಟು 8 ವರ್ಷ ಇರ್ತೆನೆ ಅಂತಾರೆಏನು ವಿಚಿತ್ರ, ಒಟ್ಟಿನಲ್ಲಿ ಅಭಿವೃದ್ಧಿ ಹೀನ ಸರ್ಕಾರ ಎಂದು ಕಿಡಿಕಾರಿದರು.
Black Pepper Side Effects: ಕರಿಮೆಣಸು ಅತಿಯಾಗಿ ಸೇವಿಸುವುದರಿಂದ ಆಗುವ ಸೈಡ್ ಎಫೆಕ್ಟ್ʼಗಳೇನು ಗೊತ್ತಾ..?
ಶಾಸಕರಿಗೆ ಸಿಗಬೇಕಾದ ಅನುದಾನ ಸಿಕ್ಕಿದೆ ಅಂತಾ ದೆಹಲಿಯಲ್ಲಿ ಸಿಎಂ ಹೇಳಿದ್ದಾರೆ. ಆದರೆ ಸಿ ಸಿ ಪಾಟೀಲರಿಗೆ ಎಷ್ಟು ಕೊಟ್ಟೀರಿ, ಎಚ್ ಕೆ ಪಾಟೀಲರಿಗೆ ಎಷ್ಟು ಕೊಟ್ಟೀರಿ, ಚಂದ್ರುಗೆ, ಜಿ ಎಸ್ ಪಾಟೀಲರಿಗೆ ಎಷ್ಟು ಕೊಟ್ಟೀದ್ದೀರಿ..? ಜೊತೆಗೆ ನಮ್ಮ ಸರ್ಕಾರ ಇದ್ದಾಗ ನಿಮಗೆ ಎಷ್ಟೆಷ್ಟು ಕೊಟ್ಟಿದ್ದೇವೆ. ನಮ್ಮ ಸರ್ಕಾರ ಇದ್ದಾಗ ಕಾಂಗ್ರೆಸ್ ಶಾಸಕರಿಗೆ ಎಷ್ಟು ಕೊಟ್ಟೀವಿ ನಿಮ್ಮ ಸರ್ಕಾರ ಇದ್ದಾಗ ಬಿಜೆಪಿಯವರಿಗೆ ಎಷ್ಟು ಕೊಟ್ಟೀದ್ದೀರಿ ಎಂದು ಶ್ವೇತಪತ್ರ ಹೊರಡಿಸಿ, ಹಾಲಿಂದು ಹಾಲಿಗೆ ಆಗಲಿ ನೀರಿಂದು ನೀರಿಗೆ ಆಗಲಿ. ಅಧಿವೇಶನದಲ್ಲಿ 224 ಶಾಸಕರದ್ದೂ ಬಹಿರಂಗ ಮಾಡಿಬಿಡಿ ಎಂದರು..