ಬೆಂಗಳೂರು: ರಾಜ್ಯ ಬಿಜೆಪಿಯ ನೂತನ ಸಾರಥಿಯಾಗಿ ಬಿವೈ ವಿಜಯೇಂದ್ರ ಅಧಿಕಾರವಹಿಸಿಕೊಂಡ ನಂತರ ಕಳೆದ ವಾರ ಪಧಾದಿಕಾರಿಗಳ ನೇಮಕವಾಗಿತ್ತು. ಇಂದು ಬಿಜೆಪಿ ಕೇಂದ್ರ ಕಛೇರಿಯಲ್ಲಿ ಪಧಾದಿಕಾರಿಗಳ ಮೊದಲ ಸಭೆ ನಡೆಸಿದ್ರು ಮರಿಹುಲಿ. ಹೊಸ ಟೀಮ್ ನ ಸದಸ್ಯರ ಮೊದಲ ಸಭೆಯಲ್ಲೇ ಕೆಲವೊಂದು ಟಾಸ್ಕ್ ನೀಡಲಾಗಿದೆ, ಜೊತೆಗೆ ಪಕ್ಷದ ವಿರುದ್ದ ಡ್ಯಾಮೇಜ್ ಹೇಳಿಕೆ ನೀಡುವವರ ಬಗ್ಗೆಯು ಚರ್ಚೆ ನಡೆಸಲಾಯ್ತು. ಈ ಮಧ್ಯೆ ಯತ್ನಾಳ್ ಜೊತೆ ಮಾಜಿ ಸಿಎಂ ಸದಾನಂದಗೌಡ ಪಕ್ಷದ ವಿರುದ್ಧ ತಿರುಗಿಬಿದ್ದಿದ್ದು ರಾಜ್ಯಾಧ್ಯಕ್ಷರನ್ನೇ ಪ್ರಶ್ನೆ ಮಾಡಿ ಆಂತರಿಕ ಒಳ ಬೇಗುದಿಗೆ ತುಪ್ಪ ಸುರಿದಿದ್ದಾರೆ.
ದಿಗಂತ್’ಗೆ ಕಿಚ್ಚ ಸಾಥ್..! ”ಎಡಗೈ ಅಪಘಾತಕ್ಕೆ ಕಾರಣ” ಸಿನಿಮಾದ ಟೀಸರ್ ರಿಲೀಸ್ ಮಾಡಲಿದ್ದಾರೆ ಸುದೀಪ್
ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರ ನೂತನ ಬಿಜೆಪಿ ರಾಕ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಹಿಂದೆ ಇದ್ದ ಟೀಮ್ ವಜಾಗೊಳಿಸಿ ಹೊಸ ಟೀಮ್ ಕಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ನೂತನ ಪದಾಧಿಕಾರಿಗಳ ಸಭೆಯನ್ನ ನಡೆಸಿದ್ರು ನೂತನ ಸದಸ್ಯರಿಗೆ ಕೆಲವು ಸೂಚನೆಗಳ ಜೊತೆ ಟಾಸ್ಕ್ ನ್ನ ನೀಡಲಾಯ್ತು. ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬ ಸದಸ್ಯರು ಜವಾಬ್ದಾರಿ ಹೊತ್ತು 28 ಕ್ಷೇತ್ರಗಳಲ್ಲಿ ಗೆಲ್ಲವುದು ಸೇರಿದಂತೆ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಕಾಂಗ್ರೆಸ್ ಗೆ ಯಾವ ರೀತಿ ತಿರುಗೇಟು ನೀಡಬೇಕು ಎಂಬುದರ ಬಗ್ಗೆ ಸಲಹೆ ಸೂಚನೆಗಳ ಬಗ್ಗೆ ಚರ್ಚೆ ನಡೆಸಿ ಪ್ರತಿಯೊಬ್ಬರಿಗೂ ಟಾಸ್ಕ್ ರೀಚ್ ಮಾಡಲೇಬೇಕಂತ ಸೂಚನೆ ರವಾನಿಸಲಾಯ್ತು..