ಗದಗ: ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ್ದ ಕರ್ನಾಟಕದ ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ. ಇದಕ್ಕೆ ಸಂಬಂಧ ಪಟ್ಟಂತೆ ಸಚಿವ ಹೆಚ್ ಕೆ ಪಾಟೀಲ್ ಗದಗದಲ್ಲಿ ಪ್ರತಿಕ್ರಿಯೇ ನೀಡಿದ್ದಾರೆ. ಬಿಜೆಪಿಗೆ ರಾಜ್ಯದ ಜನ ಮಂಗಳಾರತಿ ಮಾಡಿದ್ದಾರೆ. ರಾಜ್ಯದ ಉಪಚುನಾವಣೆ ಬಹಳ ಮಹತ್ವದ್ದಾಗಿತ್ತು. ರಾಜ್ಯದ ಹಲವಾರು ಬೆಳೆವಣಿಗೆಗಳಿಗೆ ಸಮರ್ಪಕ ಉತ್ತರ ನೀಡಿ ಮಂಗಳಾರತಿ ಮಾಡಿದ್ದಾರೆ ಎಂದಿದ್ದಾರೆ.
ವಕ್ಫ್ ಹೆಸರಲ್ಲಿ ಸಮಾಜ ಒಡೆಯುವ ಕೆಲಸ ಮಾಡಿದ್ದರು. ಸಮಾಜ ಒಡೆಯುವ ದೊಡ್ಡ ಹುನ್ನಾರ ಮಾಡಿದ್ದರು. ಗ್ಯಾರಂಟಿ ನಿಲ್ಲಿಸುತ್ತೇವೆ ಅಂತ ಪ್ರಧಾನಿವರಿಗೂ ಸುಳ್ಳು ಹೇಳಿ ಗೊಂದಲ ಸೃಷ್ಟಿಸಿದ್ದರು. ಮುಖ್ಯಮಂತ್ರಿ ತೇಜೋವಧೆ ಮಾಡಿ ಸರ್ಕಾರ ಉಳಿಯೋದಿಲ್ಲ ಅಂತ ಹೇಳಿದ್ರು. ಆದರೆ ಜಾಗೃತ ಮತದಾರ ಬಿಜೆಪಿಗೆ ಕಪಾಳಮೋಕ್ಷ ಮಾಡಿದ್ದಾನೆ ಎಂದು ವ್ಯಂಗವಾಡಿದ್ದಾರೆ.
Food on Bed: ಹಾಸಿಗೆಯ ಮೇಲೆ ಕೂತು ಊಟ ಮಾಡ್ತಾ ಇದ್ದೀರಾ.? ಹುಷಾರ್ ಹೀಗೆ ಮಾಡ್ಲೇ ಬೇಡಿ – ನಿಮಗೆ ಕಾಡುತ್ತೆ ಬಡತನ
ಚುನಾವಣೆ ಸೋಲಿನಿಂದ ಬಿಜೆಪಿ ಸುಳ್ಳು ನಡೆಯಲ್ಲ ಅಂತ ಅರಿತುಕೊಳ್ಳಬೇಕು. ಸಮಾಜ ಒಡೆಯುವ ಕೆಟ್ಟ ಮನಸ್ಥಿತಿಗಳಿಗೆ ತಕ್ಕ ಶಾಸ್ತಿ ಆಗಿದೆ. ವೈ ನಾಡಿನಲ್ಲಿ ದೊಡ್ಡ ಮಟ್ಟದಲ್ಲಿ ಪ್ರಿಯಾಂಕಾ ಗಾಂಧಿ ಆಯ್ಕೆ ಆಗಿದ್ದಾರೆ. ಈ ಚುನಾವಣೆ ಪರಿಣಾಮಗಳು ಬಿಜೆಪಿಯನ್ನ ಅಷ್ಟೇ ಸೋಲಿಸಿಲ್ಲ, ಸುಳ್ಳು ಹೇಳುವ ಪ್ರವೃತ್ತಿಯ ಪ್ರಧಾನಿ ನರೇಂದ್ರ ಮೋದಿ ಹಾಗೂ ಶಾ ಅವರನ್ನ ಸೋಲಿಸಿದೆ ಎಂದು ಹೇಳಿದರು.
ಇನ್ನೂ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಹೀನಾಯ ಸೋಲು ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದಲ್ಲಿ ಆಗಿರೋ ಪರಿಣಾಮ ಎಲ್ಲರಿಗೂ ಆಶ್ಚರ್ಯ ತಂದಿದೆ ಎಂದು ಸಚಿವ ಹೆಚ್ ಕೆ ಪಾಟೀಲ್ ಹೇಳಿದ್ದಾರೆ. ಚುನಾವಣೆ ಪ್ರಕ್ರಿಯೆಯಲ್ಲಿ ಜೊತೆಗೆ ಎಣಿಕೆ ಕಾರ್ಯದಲ್ಲಿ ಅನುಮಾನ ಬಂದಿದೆ. ಈ ಬಗ್ಗೆ ರಾಜಕೀಯ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ. ನನಗೆ ಸಂಪೂರ್ಣ ಮಾಹಿತಿ ಇಲ್ಲ ಈ ಬಗ್ಗೆ ಆದ್ದರಿಂದ ಈ ಬಗ್ಗೆ ಕಾಯ್ದು ನೋಡಿ ಅವಲೋಕನ ಮಾಡ್ತೇವೆ ಎಂದು ಹೇಳಿದರು.