ಬೆಂಗಳೂರು:- ಕರ್ನಾಟಕ ಉಪಚುನಾವಣೆ ಪೈಕಿ ಶಿಗ್ಗಾವಿ, ಸಂಡೂರು ಮತ್ತು ಚನ್ನಪಟ್ಟಣ ಕ್ಷೇತ್ರಗಳ ಮತದಾನ ಪ್ರಕ್ರಿಯೆ ಮುಕ್ತಾಯ ಆಗಿದೆ.
BBK 11: ಚೈತ್ರಾ ವಿರುದ್ಧ ಗುಡುಗಿದ ಶಿಶಿರ್: ರಣರಂಗವಾದ ಬಿಗ್ ಬಾಸ್ ಮನೆ!
ಎಲ್ಲೆಲ್ಲಿ ಎಷ್ಟೆಷ್ಟು ವೋಟಿಂಗ್?
ಚನ್ನಪಟ್ಟಣ, ಸಂಡೂರು, ಶಿಗ್ಗ್ಗಾಂವಿ ಕ್ಷೇತ್ರಗಳಲ್ಲಿ ಬೈಎಲೆಕ್ಷನ್ ನಡೆದಿದ್ದು ಇಂದು ಮತದಾನನೊಂದಿಗೆ ಮಿನಿಯುದ್ಧ ಅಂತ್ಯವಾಗಿದೆ. ಯುದ್ಧ ಅಂತ್ಯವಾದ್ರೂ ಯುದ್ಧದಲ್ಲಿ ಗೆಲ್ಲುವರು ಯಾರು? ಸೋಲುವರು ಯಾರು? ಎನ್ನುವುದು ಗೊತ್ತಾಗಬೇಕು ಅಂದ್ರೆ ಇನ್ನೂ 10 ದಿನ ಅಂದ್ರೆ ನವೆಂಬರ್ 23ರ ವರೆಗೆ ಕಾಯಲೇ ಬೇಕು. ಅಷ್ಟಕ್ಕೂ ಮೂರು ಕ್ಷೇತ್ರಗಳಲ್ಲಿ ಬಹುತೇಕ ಶಾಂತಿಯುತ ಮತದಾನ ಆಗಿದ್ದು, ಮತಪ್ರಮಾಣ ಕೂಡಾ ಹೆಚ್ಚಾಗಿದೆ. ತೀವ್ರ ಜಿದ್ದಾಜಿದ್ದಿನ ಅಖಾಡವಾಗಿ ಮಾರ್ಪಟ್ಟಿದ್ದ ಚನ್ನಪಟ್ಟಣದಲ್ಲಿ ಬರೋಬ್ಬರಿ 88.80ರಷ್ಟು ಮತದಾನ ಆಗಿದೆ. ಇನ್ನು ಕುತೂಹಲಕ್ಕೆ ಕಾರಣವಾಗಿರೋ ಶಿಗ್ಗಾಂವಿಯಲ್ಲೂ 8048.07ರಷ್ಟು ವೋಟಿಂಗ್ ಆಗಿದೆ. ಇತ್ತ ಸಂಡೂರಿನಲ್ಲಿ 76.24 %ರಷ್ಟು ಮತದಾನ ಆಗಿದೆ ಎಂದು ಕರ್ನಾಟಕ ಚುನಾವಣಾ ಆಯೋಗ ಅಧಿಕೃತವಾಗಿ ತಿಳಿಸಿದೆ.
ಎಸ್ಟಿ ಮೀಸಲಾತಿ ಇರುವ ಸಂಡೂರು ಕ್ಷೇತ್ರದಲ್ಲಿ 90922 ಪುರುಷರು, 89252 ಮಹಿಳೆಯರು ಹಾಗೂ ಇತರೆ 12 ಸೇರಿದಂತೆ ಒಟ್ಟು 180189 ಮತದಾರರ ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಮೂಲಕ ಈ ಉಪಚುನಾವಣೆಯಲ್ಲಿ ಶೇಕಡ 76.24% ಮತದಾನವಾಗಿದೆ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಮಿಶ್ರಾ ಮಾಹಿತಿ ನೀಡಿದ್ದಾರೆ.
ಒಟ್ಟಿನಲ್ಲಿ ರಾಜ್ಯದ ಮೂರು ಕ್ಷೇತ್ರಗಳಲ್ಲಿ ಸಣ್ಣ ಜಗಳ ಬಿಟ್ರೆ ಶಾಂತಿಯುತವಾಗಿ ವೋಟಿಂಗ್ ಆಗಿದೆ.