ಬೆಂಗಳೂರು:– ವಿಮಾನ ನಿಲ್ದಾಣದಲ್ಲಿ ಸೀಜ್ ಆದ ಇ ಸಿಗರೇಟ್ ಗಳನ್ನು ಬೆಂಗಳೂರು ಸಿಟಿಯಲ್ಲಿ ಮಾರಾಟ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬಾಕಿ ಬಿಲ್ ಗಾಗಿ ಗುತ್ತಿಗೆದಾರರ ಪ್ರತಿಭಟನೆ: ಕಾಮಗಾರಿಗಳ ಮೇಲೆ ಪರಿಣಾಮವಾಗಲ್ಲ ಎಂದ ಕಮಿಷನರ್!
ಈ ಹಿನ್ನೆಲೆ ಜೆಜೆ ನಗರ ಠಾಣೆ ಪೊಲೀಸರು ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ವಿದೇಶದಿಂದ ಬರುವ ಪ್ರಯಾಣಿಕರ ಬಳಿ ಇರುವ ಇ ಸಿಗರೇಟ್ಗಳನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಸೀಜ್ ಮಾಡುತ್ತಾರೆ. ಸೀಜ್ ಮಾಡಿದ ಇ ಸಿಗರೇಟ್ ಸೇರಿದಂತೆ ಇನ್ನಿತರೆ ವಸ್ತುಗಳನ್ನು ಹರಾಜು ಹಾಕಲಾಗುತ್ತದೆ.
ಹರಾಜಿನಲ್ಲಿ ಇ ಸಿಗರೇಟ್ಗಳನ್ನು ಖರೀದಿಸುವ ಖತರ್ನಾಕ್ ಗ್ಯಾಂಗ್ ಜೆಜೆನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗೋಡೌನ್ನಲ್ಲಿ ಶೇಖರಿಸಿದ್ದರು. ಬಳಿಕ ಇ ಸಿಗರೇಟ್ಗಳನ್ನು ವಿಂಗಡಿಸುತ್ತಿದ್ದರು. ಬಳಸದ ಇ ಸಿಗರೇಟ್ಗಳನ್ನು 300-400 ರೂ. ಬೆಲೆಗೆ ಮಾರಾಟ ಮಾಡುತ್ತಿದ್ದರು. ಈ ಮಾಹಿತಿ ತಿಳಿದು ದಾಳಿ ನಡೆಸಿದ ಜೆಜೆನಗರ ಪೊಲೀಸರು ಇಬ್ಬರು ಆರೋಪಿಗಳಿಂದ ಸುಮಾರು 110 ಇ ಸಿಗರೇಟ್ ವಶಪಡಿಸಿಕೊಂಡಿದ್ದಾರೆ.