ಬೆಂಗಳೂರು: ಐಟಿ ಹಬ್ ಆಗಿ ಮಾರ್ಪಟ್ಟಿದೆ. ಇದರಿಂದ ಎಲ್ಲೆಲ್ಲೂ ಇಂಗ್ಲೀಷ್ ನಾಮಫಕಗಳೇ ರಾರಾಜಿಸುತ್ತಿವೆ.ರಾಜಧಾನಿಯಲ್ಲಿ ಕನ್ನಡ ನಾಮಫಲಕ ಕಡ್ಡಾಯ ರೂಲ್ಸ್ ಹೊರಡಿಸಿದ್ರೂ ಉದ್ದಿಮೆದಾರರ ಕ್ಯಾರೆ ಎನ್ನುತ್ತಿಲ್ಲ..ಇದು ಕನ್ನಡ ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿ ಉದ್ದಿಮೆದಾರರ ವಿರುದ್ದ ಕನ್ನಡ ಪರ ಸಂಘಟನೆಗಳು ಹೋರಾಟಕ್ಕೆ ಧುಮ್ಮಕ್ಕಿದ್ರೆ ಇತ್ತ ಪಾಲಿಕೆ ಕನ್ನಡ ನಾಮಫಲಕ ಕಡ್ಡಾಯ ಆಳವಡಿಕೆಗೆ ಫೆಬ್ರವರಿ 28 ವರಿಗೆ ಡೆಡ್ಲೈನ್ ನೀಡಿದೆ.
ಜಗತ್ತಿನ ಪ್ರಮುಖ ನಗರಗಳಲ್ಲಿ ಬೆಂಗಳೂರು ಸಹ ಒಂದು. ದೇಶದ ಪ್ರಮುಖ ನಗರಗಳಿಗೆ ಬೆಂಗಳೂರು ಪೈಪೋಟಿ ನೀಡ್ತಿದೆ. ನಗರ ಬೆಳೆದಂತೆ ಮಾತೃಭಾಷೆ ಕಡೆಗಣಿಸಲಾಗ್ತಿದೆ ಅನ್ನೋ ಆರೋಪ ಇದೆ. ನಗರದಾದ್ಯಂತ ಇಂಗ್ಲೀಷ್ ಬರಹಗಳಿರುವ ನಾಮಫಲಕಗಳೇ ರಾರಾಜಿಸುತ್ತಿರೋದು ಕನ್ನಡ ಪರ ಸಂಘನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಕನ್ನಡ ನಾಮಫಲಕ ಆಳವಡಿಸದ ಉದ್ದಿಮೆದಾರರ ವಿರುದ್ದ ಕ್ರಮ ಕೈಗೊಳ್ಳುವಂತೆ ಕನ್ನಡ ಪರ ಸಂಘಟನೆಗಳು ಬಿಬಿಎಂಪಿ ಒತ್ತಾಯಿಸಿವೆ. ಈ ಸಂಬಂಧ ಇವತ್ತು ಕನ್ನಡ ಪರ ಸಂಘನೆಗಳ ಜೊತೆ ಬಿಬಿಎಂಪಿ ಕಮೀಷನರ್ ಸಹ ಸಭೆ ನಡೆಸಿ ಕನ್ನಡ ನಾಮಫಲಕ ಆಳವಡಿಕೆ ಮಾಡದ ವಾಣಿಜ್ಯ ಮಳಿಗೆಗಳ ವಿರುದ್ದ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ರು.
ಬೆಂಗಳೂರಿನಲ್ಲಿ 50 ಸಾವಿರಕ್ಕೂ ಅಧಿಕ ಉದ್ದಿಮೆಗಳಿಗೆ ಪಾಲಿಕೆಯು ಪರವಾನಗಿ ನೀಡಿದೆ. ಇದರಲ್ಲಿ ಸುಮಾರು 8 ಸಾವಿರ ಉದ್ದಿಮೆಗಳಷ್ಟೇ ಕನ್ನಡ ಬಳಕೆ ನಿಯಮ ಪಾಲಿಸುತ್ತಿವೆ. ಉಳಿದ 40 ಸಾವಿರ ಉದ್ದಿಮೆಗಳು ನಿಯಮಾನುಸಾರ ನಾಮಫಲಕಗಳಲ್ಲಿ ಕನ್ನಡ ಬಳಸುತ್ತಿಲ್ಲ.ಅನುಮತಿ ಪಡೆದ ಎಲ್ಲಅಂಗಡಿ-ಮುಂಗಟ್ಟುಗಳು, ಹೋಟೆಲ್ಗಳು, ಮಾಲ್ಗಳು, ಕಂಪನಿಗಳು, ವಾಣಿಜ್ಯ ಸಂಸ್ಥೆಗಳು ಸಾರ್ವತ್ರಿಕವಾಗಿ ಪ್ರದರ್ಶಿಸುವ ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಅಗ್ರಸ್ಥಾನ ನೀಡುವುದು ಹಾಗೂ ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಬಳಸುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿ ವರ್ಷಗಳೇ ಉರುಳಿವೆ. ಆದರೆ, ಈ ಆದೇಶವು ಕಾಗದಕ್ಕಷ್ಟೇ ಸೀಮಿತವಾಗಿದೆ.ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಅಗ್ರಸ್ಥಾನ ಕಲ್ಪಿಸದ ಉದ್ದಿಮೆಗಳಿಗೆ ನೋಟಿಸ್ ಜಾರಿ ಮಾಡಿ ಕ್ರಮ ಕೈಗೊಳ್ಳಲಾಗಿತ್ತು. ಆದರೆ, ಈ ಕ್ರಮವು ಆರಂಭ ಶೂರತ್ವಕ್ಕಷ್ಟೇ ಸೀಮಿತವಾಯಿತು. ಬಹುತೇಕ ಮಳಿಗೆದಾರರು, ಮಾಲ್ಗಳು ಕನ್ನಡವನ್ನು ಸಂಪೂರ್ಣವಾಗಿ ಕಡೆಗಣಿಸಿವೆ. ಆಂಗ್ಲಭಾಷೆಗೆ ಪ್ರಾಧಾನ್ಯತೆ ನೀಡುತ್ತಿದ್ದಾರೆ. ಫಲಕಗಳಲ್ಲಿ ಕನ್ನಡವಿದ್ದರೂ, ಅದು ಕಣ್ಣಿಗೆ ಕಾಣದಷ್ಟು ಚಿಕ್ಕದಾಗಿರುತ್ತದೆ. ಬಹುತೇಕ ಅಂಗಡಿಗಳ ನಾಮಫಲಕಗಳಲ್ಲಿಅನ್ಯ ಭಾಷೆಗಳೇ ರಾರಾಜಿಸುತ್ತಿದ್ದು, ಕನ್ನಡವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಆದಾಗ್ಯೂ, ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಕೂಡಲೇ ಕ್ರಮ ಕೈಗೊಳ್ಳುವಂತೆ ಕನ್ನಡ ಪರ ಸಂಘಟನೆಗಳು ಬಿಬಿಎಂಪಿಗೆ ಒತ್ತಾಯಿಸಿವೆ.
ಇನ್ನೂ ಕನ್ನಡ ಭಾಷೆಗೆ ಆದ್ಯತೆ ನೀಡದ ಅಂಗಡಿ-ಮುಂಗಟ್ಟುಗಳು, ಶಾಪಿಂಗ್ ಮಾಲ್, ವಾಣಿಜ್ಯ ಕಟ್ಟಡಗಳ ವಿರುದ್ಧ ಬಿಬಿಎಂಪಿಯು ಸಮರ ಸಾರಲು ಮುಂದಾಗಿದೆ. ಕನ್ನಡ ಭಾಷೆಯಲ್ಲಿ ನಾಮಫಲಕ ಬರೆಸದವರ ವ್ಯಾಪಾರ ಪರವಾನಗಿಯನ್ನು ರದ್ದುಪಡಿಸಿ, ಬಿಸಿ ಮುಟ್ಟಿಸಲು ತೀರ್ಮಾನಿಸಿದೆ. ನಗರದಲ್ಲಿ ಕನ್ನಡ ನಾಮಫಲಕ ಆಳವಡಿಕೆಗೆ ಫೆ.28 ವರಿಗೂ ಡೆಡ್ಲೈನ್ ನೀಡಲಿದ್ದು, ಡೆಡ್ಲೈನ್ ಬಳಿಕವೂ ನಾಮಫಲಕ ಆಳವಡಿಸದಿದ್ರೆ ಸೂಕ್ತ ಕ್ರಮ ಕೈಗೊಳ್ಳಲಾಗ್ತದೆ ಅಂತ ಬಿಬಿಎಂಪಿ ಕಮೀಷನರ್ ಎಚ್ಚರಿಸಿದ್ದಾರೆ.
ಅಂಗಡಿ-ಮುಂಗಟ್ಟುಗಳು, ಕಂಪೆನಿಗಳು, ವಾಣಿಜ್ಯ ಸಂಕೀರ್ಣಗಳ ನಾಮಫಲಕಗಳಲ್ಲಿ ಶೇ 60ರಷ್ಟು ಭಾಗ ಕನ್ನಡದಲ್ಲಿರಬೇಕು. ಶೇ 40ರಷ್ಟು ಅನ್ಯ ಭಾಷೆ ಬಳಸಬಹುದು. ಆದರೆ, ಬಹುತೇಕ ಮಳಿಗೆದಾರರು, ಮಾಲ್ಗಳು ಕನ್ನಡವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಬಹುತೇಕರು ಆಂಗ್ಲ ಭಾಷೆಗೆ ಪ್ರಾಧಾನ್ಯತೆ ನೀಡುತ್ತಿದ್ದಾರೆ. ಫಲಕಗಳಲ್ಲಿ ಕನ್ನಡವಿದ್ದರೂ, ಅದು ಕಣ್ಣಿಗೆ ಕಾಣದಷ್ಟು ಚಿಕ್ಕದಾಗಿರುತ್ತದೆ.ಆದ್ರೆ ಹಲವು ಬಾರಿ ಗಡವು ನೀಡಿದ್ರೂ ಉದ್ದಿಮೆಗಳು ತಲೆಕೆಡಿಸಿಕೊಂಡಿಲ್ಲ. ಇದೀಗ ಹೊಸದಾಗಿ ನೀಡಿರೋ ಡೆಡ್ಲೈನ್ ತಲೆಬಾಗ್ತಾರಾ ಅನ್ನೋದನ್ನ ಕಾದುನೋಡಬೇಕಿದೆ