ಬೆಂಗಳೂರು:- ನೈಸ್ ರಸ್ತೆಯಲ್ಲಿ ಸಂಚಾರ ಆರಂಭಿಸಿರುವ BMTC ಭರ್ಜರಿಯಾಗಿ ಆದಾಯಗಳಿಸುತ್ತಿದೆ. ಬಿಎಂಟಿಸಿಗೆ ಆ ಒಂದು ಮಾರ್ಗದಿಂದಲೇ ಒಂದು ತಿಂಗಳಿಗೆ ಬರೋಬ್ಬರಿ ಒಂದು ಕೋಟಿ ರೂಪಾಯಿ ಆದಾಯ ಬರತ್ತಿದ್ದು, ಹೊಸ ದಾಖಲೆ ನಿರ್ಮಿಸಿದೆ.
ಬಾಕ್ಸ್ ಆಫೀಸ್ ನಲ್ಲಿ ಗೆದ್ದ ‘ಮ್ಯಾಕ್ಸ್’: ಭರ್ಜರಿ ಪಾರ್ಟಿ ಮಾಡಿದ ಸುದೀಪ್ ಟೀಂ
ಬೆಂಗಳೂರಿನ ಪ್ರಮುಖ ಸಂಚಾರ ಜೀವನಾಡಿ ಬಿಎಂಟಿಸಿ. ಪ್ರತಿನಿತ್ಯ ಲಕ್ಷಾಂತರ ಜನ ಬಿಎಂಟಿಸಿ ಬಸ್ಗಳಲ್ಲಿ ಸಂಚರಿಸುತ್ತಾರೆ. ಇದೀಗ ಐಟಿಬಿಟಿ ಉದ್ಯೋಗಿಗಳು ಕೂಡ ಬಿಎಂಟಿಸಿ ಬಸ್ಗಳಿಗೆ ಫಿದಾ ಆಗಿದ್ದಾರೆ. ನೈಸ್ ರಸ್ತೆಯಲ್ಲಿ ಸಂಚರಿಸುವ ಬಿಎಂಟಿಸಿ ಬಸ್ನಲ್ಲಿ ಸಂಚರಿಸುತ್ತಿದ್ದಾರೆ.
ಪ್ರಯಾಣಿಕರ ಅನುಕೂಲಕ್ಕಾಗಿ ಒಂದು ವರ್ಷದ ಹಿಂದೆ, ಅಂದರೆ 2023 ಡಿಸೆಂಬರ್ 23 ರಂದು ಪ್ರಯಾಣಿಕರ ಬೇಡಿಕೆ ಮೇರೆಗೆ ನೈಸ್ ರಸ್ತೆಯಲ್ಲಿ ಬಿಎಂಟಿಸಿ ಬಸ್ ಸಂಚಾರ ಆರಂಭಿಸಿತ್ತು. ನೈಸ್ ರಸ್ತೆ ಮಾರ್ಗವಾಗಿ ಎಲೆಕ್ಟ್ರಾನಿಕ್ ಸಿಟಿ ವಿಪ್ರೋ ಗೇಟ್ಗೆ, ಮಾದವಾರದಿಂದ ನೈಸ್ ರಸ್ತೆ ಮಾರ್ಗವಾಗಿ ಎಲೆಕ್ಟ್ರಾನಿಕ್ ಸಿಟಿಗೆ ಬೆಳಗ್ಗೆ ಆರು ಗಂಟೆಯಿಂದ ರಾತ್ರಿ 6 ಗಂಟೆವರೆಗೆ ಹತ್ತು ನಿಮಿಷಕ್ಕೊಮ್ಮೆ ನಗರದ ಹತ್ತು ವಿವಿಧ ಮಾರ್ಗಗಳಿಂದ 21 ಶೆಡ್ಯೂಲ್ ಗಳಲ್ಲಿ ಬಿಎಂಟಿಸಿ ಬಸ್ಗಳು ಸಂಚರಿಸುತ್ತಿವೆ.
ಬಸ್ಗಳಿಗೆ ಜನರಿಂದ, ಐಟಿ ಬಿಟಿ ಕಂಪನಿಗಳಿಂದ ಭಾರೀ ಬೇಡಿಕೆ ಬಂದಿದ್ದು, ಕಳೆದ ನಾಲ್ಕು ತಿಂಗಳಿಂದ ಪ್ರತಿ ತಿಂಗಳು ಮೂರು ಲಕ್ಷ ಜನ ಈ ಮಾರ್ಗದ ಬಿಎಂಟಿಸಿ ಬಸ್ಗಳಲ್ಲಿ ಸಂಚರಿಸುತ್ತಿದ್ದಾರೆ. ಹೀಗಾಗಿ ಬಿಎಂಟಿಸಿಗೆ ಕೋಟ್ಯಂತರ ರೂಪಾಯಿ ಆದಾಯ ಬರುತ್ತಿದೆ. ನವೆಂಬರ್ ತಿಂಗಳು ಒಂದರಲ್ಲೇ 1,09,73,615 ರೂ. ಆದಾಯ ಬಂದಿದೆ. ಅಂದರೆ, ಪ್ರತಿನಿತ್ಯ 10 ಸಾವಿರ ಜನ ಪ್ರಯಾಣಿಸಿದ್ದಾರೆ.