ಧಾರವಾಡ : ಕರ್ತವ್ಯದಲ್ಲಿದ್ದ ಬಸ್ ಚಾಲಕ ಪಿನಾಯಿಲ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ದಾಂಡೇಲಿ ಡಿಪೋದಲ್ಲಿ ಕರ್ತವ್ಯ ಮಾಡುತ್ತಿದ್ದ ಚಾಲಕ ರವಿಕುಮಾರ ಗಡಿಜಾಡರ್ (43) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ನೀಡಲಾಗುತ್ತಿದೆ.
ನಿನ್ನೆ ಬೆಳಿಗ್ಗೆ ಕರ್ತವ್ಯಕ್ಕೆ ಹಾಜರಾಗುವ ಸಮಯದಲ್ಲಿ ಮದ್ಯ ಸೇವನೆ ಮಾಡಿದ್ದ ಬಸ್ ಚಾಲಕ ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳು ಆರೋಪಿಸಿದ್ದಾರೆ. ನಾನು ಒಂದು ವಾರದಿಂದ ಮದ್ಯ ಸೇವನೆ ಮಾಡಿಲ್ಲ ಎಂದು ಚಾಲಕನ ವಾದಿಸಿದ್ದಾನೆ. ಆದರೆ ಅಧಿಕಾರಿಗಳು ಮದ್ಯ ಸೇವನೆ ಮಾಡಿದ್ದಾನೆ ಎಂದು ಆತನಿಗೆ ಡ್ಯೂಟಿ ನೀಡದೇ ಹಾಗೇ ಕಳಿಸಿದ್ದಾರೆ. ಇದರಿಂದ ಮನನೊಂದಿರುವ ಚಾಲಕ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಲ್ಲದೇ ಚಾಲಕನ ಬ್ಲಡನ್ನ ಎಪ್ ಎಸ್ ಎಲ್ ರಿಪೋರ್ಟ್ಗೆ ಕಳಿಸಿದ್ದು, ಕೆಲಸದಿಂದ ಅಮಾನತು ಮಾಡುತ್ತಾರೆ ಎಂದ ಭಯದಲ್ಲಿ ಪಿನಾಯಿಲ್ ಸೇವಿಸಿದ್ದಾರೆ. ಸದ್ಯ ಆತನಿಗೆ ಧಾರವಾಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಶಿನ್ ಪ್ರಾಬ್ಲಮ್ನಿಂದ ಕೇವಲ ನನಗಲ್ಲ ಸಾಕಷ್ಟು ಚಾಲಕರಿಗೆ ಈ ರೀತಿಯಾಗಿದೆ ಎಂದು ಚಾಲಕ ಆರೋಪಿಸಿದ್ದಾನೆ.