ಮೆಲ್ಬರ್ನ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ಭರ್ಜರಿ ಚಾಲನೆ ಸಿಕ್ಕಿದ್ದು, ಬ್ರಿಸ್ಬೇನ್ನಲ್ಲಿ ಡ್ರಾನಲ್ಲಿ ಕೊನೆಗೊಂಡ ಮೂರನೇ ಟೆಸ್ಟ್ನಲ್ಲಿ 94ಕ್ಕೆ 9 ವಿಕೆಟ್ ಪಡೆದ ಬುಮ್ರಾ, ತ್ವರಿತವಾಗಿ 14 ರೇಟಿಂಗ್ ಪಾಯಿಂಟ್ಸ್ ಗಿಟ್ಟಿಸಿದ್ದಾರೆ. ಈ ಮೂಲಕ ಐಸಿಸಿ ರ್ಯಾಂಕಿಂಗ್ ನಲ್ಲಿ ಗರಿಷ್ಠ 904 ರೇಟಿಂಗ್ ಅಂಕಗಳನ್ನು ಹೊಂದಿದ್ದ ಅಶ್ವಿನ್ ಅವರ ದಾಖಲೆಯನ್ನು ಸಮಗೊಳಿಸಿದ್ದಾರೆ.
ಇದು ಮಾತ್ರವಲ್ಲದೆ, ಬೌಲರ್ಗಳ ರ್ಯಾಂಕಿಂಗ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಗುರುವಾರ ಆರಂಭವಾಗಲಿರುವ ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಕಣಕ್ಕಿಳಿಯುತ್ತಿರುವ ಬುಮ್ರಾ, 2016ರಲ್ಲಿ ಅತ್ಯಧಿಕ ರೇಟಿಂಗ್ ಪಡೆದ ಭಾರತೀಯ ಎಂಬ ಸಾಧನೆ ಮಾಡಿರುವ ಅಶ್ವಿನ್ ಅವರ ದಾಖಲೆ ಮುರಿಯಲು ಈಗ ಅತ್ಯುತ್ತಮ ಅವಕಾಶವಿದೆ.
Toe Ring: ವಿವಾಹಿತ ಮಹಿಳೆಯರೇ ಗಮನಿಸಿ.. ಯಾವುದೇ ಕಾರಣಕ್ಕೂ ಈ ರೀತಿಯ ಕಾಲುಂಗುರ ಹಾಕಬಾರದು!
ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ (856) ಮತ್ತು ಆಸ್ಪ್ರೇಲಿಯಾದ ಜೋಶ್ ಹೇಜಲ್ವುಡ್ (852) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ. ಆಲ್ರೌಂಡರ್ಗಳ ವಿಭಾಗದಲ್ಲಿ 424 ಅಂಕಗಳನ್ನು ಹೊಂದಿರುವ ಭಾರತದ ರವೀಂದ್ರ ಜಡೇಜಾ, ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಇನ್ನು ಟೆಸ್ಟ್ ಕ್ರಿಕೆಟ್ ನಲ್ಲಿ 200 ವಿಕೆಟ್ ಸಾಧನೆ ಮಾಡಲು ಜಸ್ಪ್ರಿತ್ ಬುಮ್ರಾ ಅವರಿಗೆ 6 ವಿಕೆಟ್ ಗಳ ಅಗತ್ಯವಿದೆ. ಇದು ಸಾಧ್ಯವಾದರೆ, ಈ ಸಾಧನೆ ಮಾಡಿದ 12ನೇ ಭಾರತೀಯ ಬೌಲರ್ ಎನಿಸಲಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶಿಸಿರುವ ಜಸ್ಪ್ರೀತ್ ಬುಮ್ರಾ ಇದೀಗ ಐಸಿಸಿ ಟೆಸ್ಟ್ ಬೌಲರ್ ರ್ಯಾಂಕಿಂಗ್ನಲ್ಲಿ 904 ರೇಟಿಂಗ್ ಪಡೆದಿದ್ದು, ಈ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅಲ್ಲದೆ ಇನ್ನೊಂದು ಅಂಕ ಪಡೆದರೆ ಟೆಸ್ಟ್ನಲ್ಲಿ ಅತ್ಯಧಿಕ ರೇಟಿಂಗ್ ಪಡೆದ ಭಾರತೀಯ ಬೌಲರ್ ಎನಿಸಿಕೊಳ್ಳಲಿದ್ದಾರೆ.