ದೈತ್ಯ ಟೆಲಿಕಾಂ ಸಂಸ್ಥೆಯಾದ ರಿಲಯನ್ಸ್ ಜಿಯೋ ತನ್ನ ಜಿಯೋ ಫೈಬರ್ ಹಾಗೂ ಜಿಯೋ ಏರ್ ಫೈಬರ್ ಗ್ರಾಹಕರಿಗಾಗಿ ಹೊಸ ಪ್ಲಾನ್ ಬಿಡುಗಡೆ ಮಾಡಿದೆ. ಈ ಹೊಸ ಯೋಜನೆಯು ಒಟಿಟಿ ಪ್ಲಾಟ್ ಫಾರ್ಮ್ಗಳನ್ನು ಅತಿಹೆಚ್ಚು ಬಳಕೆ ಮಾಡುವವರಿಗೆ ಹೇಳಿಮಾಡಿಸಿದಂತಿದೆ.
ಜಿಯೋ ತನ್ನ ಗ್ರಾಹಕರಿಗಾಗಿ ಕೇವಲ 888 ರೂ.ಗಳ ‘ಅಲ್ಟಿಮೇಟ್ ಸ್ಟ್ರೀಮಿಂಗ್ ಪ್ಲಾನ್’ ಎಂಬ ನೂತನ ಪೋಸ್ಟ್ ಪೇಯ್ಡ್ ಪ್ಲ್ಯಾನ್ ಬಿಡುಗಡೆ ಮಾಡಿದೆ. ಈ ಪ್ಲ್ಯಾನಿನಲ್ಲಿ ಬಳಕೆದಾರರಿಗೆ ವೇಗದ ಇಂಟರ್ನೆಟ್ ಸಂಪರ್ಕ, ಡಿಜಿಟಲ್ ಟಿವಿ ಪ್ರಸಾರ ಮತ್ತು 15 ಪ್ರೀಮಿಯಂ ಒಟಿಟಿ ಆ್ಯಪ್ಗಳು ಲಭ್ಯವಾಗಲಿವೆ. ಹೊಸ ಬಳಕೆದಾರರಲ್ಲದೇ, ಈಗಾಗಲೇ ಅಸ್ತಿತ್ವದಲ್ಲಿರುವ ಜಿಯೋ ಫೈಬರ್ ಮತ್ತು ಜಿಯೋ ಏರ್ ಫೈಬರ್ ಬಳಕೆದಾರರು ಸಹ ಈ ಯೋಜನೆಗೆ ಬದಲಾಯಿಸಬಹುದು ಎಂದು ಜಿಯೋ ಮಾಹಿತಿ ನೀಡಿದೆ.
ಅನಿಯಮಿತ (ಅನ್ಲಿಮಿಟೆಡ್) ಡೇಟಾ ಪ್ರಯೋಜನ ಸಹ ಲಭ್ಯವಾಗಲಿದ್ದು, ಬಳಕೆದಾರರು ತಮ್ಮ ಅಚ್ಚುಮೆಚ್ಚಿನ ಅಪ್ಲಿಕೇಷನ್ಗಳಲ್ಲಿ ಯಾವಾಗ ಮತ್ತು ಎಲ್ಲಿ ಬೇಕಾದರೂ ಕಾರ್ಯಕ್ರಮಗಳ ವೀಕ್ಷಣೆ ಮಾಡಲು ಅವಕಾಶ ಇದೆ. ಜಿಯೋ ತಂದಿರುವ ಈ ಹೊಸ ಯೋಜನೆಯೊಂದಿಗೆ ಬಳಕೆದಾರು 30 Mbps ವೇಗದಲ್ಲಿ ಅನಿಯಮಿತ ಇಂಟರ್ನೆಟ್ ಡೇಟಾ ಪಡೆಯಲಿದ್ದಾರೆ. ಇದರ ಜತೆಗೆ ನೆಟ್ಫ್ಲಿಕ್ಸ್ನ ಬೇಸಿಕ್ ಪ್ಲಾನ್, ಅಮೆಜಾನ್ ಪ್ರೈಮ್, ಜಿಯೋ ಸಿನಿಮಾ ಪ್ರೀಮಿಯಂ, ಡಿಸ್ನಿ+ಹಾಟ್ ಸ್ಟಾರ್, ಸೋನಿ ಲಿವ್, ಈಟ್ಲಿ ವಿನ್ ನಂತಹ 15ಕ್ಕೂ ಅಧಿಕ ಜನಪ್ರಿಯ ಒಟಿಟಿ ಆ್ಯಪ್ಗಳು ದೊರೆಯುತ್ತವೆ. ಈ ಆ್ಯಪ್ನ ಸಬ್ಸ್ಕ್ರಿಪ್ಷನ್ ಲಭ್ಯವಾಗುವುದು ಯೋಜನೆಯ ಜತೆಗೆ ಮಾತ್ರ.
ಇದರ ಜೊತೆಗೆ ಜಿಯೋ ಇತ್ತೀಚೆಗೆ ಘೋಷಿಸಿದ ಐಪಿಎಲ್ ಧನ್ ಧನ್ ಧನ್ ಆಫರ್ ಕೂಡ ಈ ಯೋಜನೆಗೆ ಅನ್ವಯಿಸುತ್ತದೆ. ಜಿಯೋ ಫೈಬರ್ ಅಥವಾ ಜಿಯೋ ಏರ್ ಫೈಬರ್ನ ಅರ್ಹ ಗ್ರಾಹಕರು ತಮ್ಮ ಜಿಯೋ ಹೋಮ್ ಬ್ರಾಡ್ಬ್ಯಾಂಡ್ ಕನೆಕ್ಷನ್ನಲ್ಲಿ 50 ದಿನ ರಿಯಾಯಿತಿ ಕ್ರೆಡಿಟ್ ವೋಚರ್ ಸಹ ಪಡೆದುಕೊಳ್ಳಬಹುದಾಗಿದೆ. ಜೊತೆಗೆ 10 ಅಥವಾ 30 ಎಂಬಿಪಿಎಸ್ ಪ್ಲ್ಯಾನ್ಗಳನ್ನು ಈಗಾಗಲೇ ಬಳಕೆ ಮಾಡುತ್ತಿರುವ ಜಿಯೋದ ಬಳಕೆದಾರರು ಸಹ ಪಡೆಯಬಹುದು ಎಂದು ಕಂಪನಿ ಹೇಳಿಕೊಂಡಿದೆ.