ಬೆಂಗಳೂರು: ನಾಗಸಂದ್ರ – ಮಾದಾವರ ಮೆಟ್ರೋ ಮಾರ್ಗ ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿರುವ ಬಗ್ಗೆ ಬಿಎಂಆರ್ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್ ಚವ್ಹಾಣ್ ಸುಳಿವು ನೀಡಿದ್ದಾರೆ.
ಒಂದಿಲ್ಲೊಂದು ಕಾರಣದಿಂದ ವಿಳಂಬವಾಗುತ್ತಿದ್ದ ನಾಗಸಂದ್ರದಿಂದ ಮಾದವಾರ ಬಿಐಇಸಿ ಮೆಟ್ರೋ ನಿಲ್ದಾಣವರೆಗಿನ 3.2 ಕಿಮೀ ವಿಸ್ತರಿತ ಮಾರ್ಗ ಜನ ಬಳಕೆಗೆ ಮುಕ್ತ ಆಗುವ ಕಾಲ ಸನ್ನಿಹಿತದಲ್ಲಿದೆ. ಸದ್ಯದಲ್ಲೇ ಲೋಕಾರ್ಪಣೆ ಮಾಡಲು ತಯಾರಿ ನಡೆಯುತ್ತಿದೆ. ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾದರೆ ಸಿಲ್ಕ್ ಇನ್ಸ್ಟಿಟ್ಯೂಟ್ನಿಂದ ಮಾದಾವರ ನಡುವಣ ಸಂಚಾರ ಸುಗಮವಾಗಲಿದೆ.
ಜುಲೈ 15ರಿಂದ ಜು.26ರ ವರೆಗೆ ವಿಧಾನಸಭೆ ಅಧಿವೇಶನ: ಈ ಬಾರಿ ಪ್ರತಿಪಕ್ಷಗಳ ಗದ್ದಲ ಜೋರಾಗಿದ್ಯಾ?
ನಮ್ಮ ಮೆಟ್ರೋ ಹಸಿರು ಮಾರ್ಗದ ಶೀಘ್ರ ವಿಸ್ತರಣೆಯತ್ತ ಬಿಎಂಆರ್ಸಿಎಲ್ ಗಮನಹರಿಸಿದೆ. ಈ ಮಾರ್ಗ ವಿಸ್ತರಣೆ ಮಾಡುವುದರಿಂದ ನೆಲಮಂಗಲ ಪ್ರಯಾಣಿಕರಿಗೆ ನಮ್ಮ ಮೆಟ್ರೋ ಮತ್ತಷ್ಟು ಹತ್ತಿರ ಆಗಲಿದೆ
ಮಾದಾವರ ಮೆಟ್ರೋ ಸ್ಟೇಷನ್ನಿಂದ ನೆಲಮಂಗಲಕ್ಕೆ ಕೇವಲ ಆರು ಕಿಮೀ ಮಾತ್ರ ದೂರವಿದೆ. ಸಿಟಿಗೆ ಹೋಗಿ ಬರುವುದಕ್ಕೆ ಸುಲಭ ಆಗುತ್ತದೆ. ಮಂಜುನಾಥ ನಗರ, ಚಿಕ್ಕ ಬಿದರಕಲ್ಲು, ಮಾದಾವರವರೆಗೆ ಸಂಪರ್ಕ ಕಲ್ಪಿಸಲಿರುವ ಹಸಿರು ಮಾರ್ಗ ಇದಾಗಿದ್ದು, ಸದ್ಯ ಮಾರ್ಗದಲ್ಲಿ ಸಿಗ್ನಲಿಂಗ್ ಟೆಸ್ಟ್ ಕೆಲಸ ಪ್ರಗತಿಯಲ್ಲಿದೆ.
ನಾಗಸಂದ್ರ – ಮಾದವಾರ ಮೆಟ್ರೋ ಮಾರ್ಗ ಲೋಕಾರ್ಪಣೆ ಬಗ್ಗೆ ಸ್ಥಳೀಯ ನಿವಾಸಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.