ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಕೆಪಿಎಸ್ಸಿ’ಯು ದಿನಾಂಕ 20-09-2024 ರಂದು ಹೊರಡಿಸಲಾದ ಕೃಷಿ ಇಲಾಖೆಯ ಒಟ್ಟು 945 ಹುದ್ದೆಗಳ ನೇಮಕಾತಿಗೆ ಸಂಬಂಧ, ಇದೀಗ ಆನ್ಲೈನ್ ಅರ್ಜಿ ಪ್ರಕ್ರಿಯೆಯನ್ನು ಆರಂಭಿಸಿದೆ.
ಇಲಾಖೆಯ ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಈ ಹಿಂದೆ ಅಕ್ಟೋಬರ್ 07 ರಿಂದ ನವೆಂಬರ್ 07 ರವರೆಗೆ ಅರ್ಜಿಗೆ ದಿನಾಂಕ ನಿಗದಿಪಡಿಸಿತ್ತು. ಆದರೆ ಸರ್ಕಾರವು ಸೆಪ್ಟೆಂಬರ್ 18 ರಂದು ಜಾರಿ ಮಾಡಿದ್ದ ಕ್ರೀಡಾ ಸಾಧಕ ಅಭ್ಯರ್ಥಿಗಳ ಮೀಸಲಾತಿಯನ್ನು ಸದರಿ ಹುದ್ದೆಗಳಿಗೂ ಅಳವಡಿಸಿಕೊಳ್ಳಬೇಕಾದ್ದರಿಂದ ಅರ್ಜಿ ಸ್ವೀಕಾರ ಪ್ರಕ್ರಿಯೆಯನ್ನು ಮುಂದೂಡಿತ್ತು.
ಪ್ರಸ್ತುತ ಕ್ರೀಡಾ ಸಾಧಕರಿಗೆ ಶೇಕಡ.2 ರಷ್ಟು ಹುದ್ದೆಗಳನ್ನು ಮೀಸಲಿರಿಸಿ, ಹುದ್ದೆಗಳನ್ನು ವರ್ಗೀಕರಿಸಿ ಸಿದ್ಧತೆ ಮಾಡಿಕೊಂಡ ಹಿನ್ನೆಲೆಯಲ್ಲಿ ಅರ್ಜಿ ಪ್ರಕ್ರಿಯೆಯನ್ನು ಮುಂದುವರೆಸಿದೆ. ಅರ್ಜಿ ಸಲ್ಲಿಸಲು ಕೆಳಗಿನ ದಿನಾಂಕಗಳನ್ನು ನಿಗದಿಪಡಿಸಿದೆ. ಉಳಿದಂತೆ ಎಲ್ಲ ನಿಯಮ, ಅರ್ಹತೆಗಳನ್ನು 2024 ರ ಸೆಪ್ಟೆಂಬರ್ 20 ರ ಅಧಿಸೂಚನೆಯಂತೆ ಕಾಯ್ದಿರಿಸಿದೆ. ಈ ಹುದ್ದೆಗಳಲ್ಲಿ ಅರ್ಹತೆ ಇರುವವರು, ಸರ್ಕಾರಿ ಹುದ್ದೆಗಳಲ್ಲಿ ಆಸಕ್ತರು ಅರ್ಜಿ ಸಲ್ಲಿಸಿ.
Nail Cutting: ಸಂಜೆ ವೇಳೆ ಉಗುರು ಕತ್ತರಿಸುತ್ತೀರಾ? ಮನೆಗೆ ಬರುವ ಲಕ್ಷ್ಮೀ ವಾಪಸ್ ಹೋಗಬಹುದು, ಎಚ್ಚರಾ!
ಕರ್ನಾಟಕ ಕೃಷಿ ಮಾರಾಟ ಇಲಾಖೆಯಲ್ಲಿ ಸಹಾಯಕ, ಕಿರಿಯ ಅಭಿಯಂತರ, ಪ್ರಥಮ ದರ್ಜೆ ಸಹಾಯಕರು, ಮಾರುಕಟ್ಟೆ ಮೇಲ್ವಿಚಾರಕರು, ದ್ವಿತೀಯ ದರ್ಜೆ ಸಹಾಯಕರು ಹಾಗೂ ಮಾರಾಟ ಸಹಾಯಕರು ಹುದ್ದೆಗಳು ಖಾಲಿ ಇವೆ. ಖಾಲಿ ಇರುವ ಕೆಲಸಗಳಿಗೆ ಕೆಇಎ ಶೀಘ್ರದಲ್ಲೇ ಅಧಿಸೂಚನೆ ರಿಲೀಸ್ ಮಾಡಲಿದೆ.
ದ್ವಿತೀಯ ಪಿಯುಸಿ, ಡಿಪ್ಲೋಮಾ ಹಾಗೂ ಇಂಜಿನಿಯರಿಂಗ್ನಲ್ಲಿ ಸಿವಿಲ್, ತಾಂತ್ರಿಕ ಅಥವಾ ಯಾವುದೇ ಪದವಿ, ಬಿಎಸ್ಸಿ, ಬಿಎಸ್ಸಿ ಆನರ್ಸ್ ಈ ಕೋರ್ಸ್ ಮಾಡಿದವರು ಈ ಕೆಲಸಗಳಿಗೆ ಅಪ್ಲೇ ಮಾಡಬಹುದಾಗಿದೆ.
ಸಹಾಯಕ, ಕಿರಿಯ ಅಭಿಯಂತರರು, ಪ್ರಥಮ ದರ್ಜೆ ಸಹಾಯಕ, ಮಾರುಕಟ್ಟೆ ಮೇಲ್ವಿಚಾರಕ ಈ ಹುದ್ದೆಗಳಿಗೆ ಎರಡು ಪರೀಕ್ಷೆಗಳು ಇರುತ್ತವೆ. ಇದರಲ್ಲಿ ಒಂದು ಪತ್ರಿಕೆ- 1 ಸಾಮಾನ್ಯ ಜ್ಞಾನ ಒಳಗೊಂಡಿದ್ದರೆ, ಪತ್ರಿಕೆ- 2 ನಿರ್ದಿಷ್ಟ ಪತ್ರಿಕೆ ಇರುತ್ತದೆ. ಇನ್ನು ದ್ವಿತೀಯ ದರ್ಜೆ, ಮಾರಾಟ ಸಹಾಯಕ ಕೆಲಸಗಳಿಗೆ ಅರ್ಜಿ ಸಲ್ಲಿಸುವವರಿಗೂ ಎರಡು ಪರೀಕ್ಷೆಗಳು ಇರುತ್ತವೆ. ಪತ್ರಿಕೆ-1 ಸಾಮಾನ್ಯ ಜ್ಞಾನದ ಬಗ್ಗೆ ಪತ್ರಿಕೆ- 2 ಕನ್ನಡ, ಇಂಗ್ಲಿಷ್, ಕಂಪ್ಯೂಟರ್ ಬಗೆಗಿನ ಪ್ರಶ್ನೆಗಳನ್ನು ಒಳಗೊಂಡಿರುತ್ತವೆ. ಇನ್ನು ವಯೋಮಿತಿಯನ್ನು ವರ್ಗವಾರು 18 ರಿಂದ 43 ವರ್ಷದ ಒಳಗೆ ನಿಗಧಿ ಮಾಡಬಹುದು.