ಬೆಂಗಳೂರು: ಕೇಂದ್ರ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಕೇಂದ್ರ ಬಜೆಟ್ ದಾಖಲೆ ಅಷ್ಟೇ ಅಲ್ಲ, ಭಾರತದ ಅರ್ಥ ವ್ಯವಸ್ಥೆಯನ್ನು ಹೊಸ ದಿಕ್ಕಿಗೆ ಕೊಂಡೊಯ್ಯುವ ಹೊಸ ಅಲೆಯ ಬಜೆಟ್ ಆಗಿದೆ ಎಂದು ವಿಧಾನ ಪರಿಷತ್ ಹಿರಿಯ ಸದಸ್ಯ, ಜೆಡಿಎಸ್ ಹಿರಿಯ ನಾಯಕ ಟಿ.ಎ.ಶರವಣ ಹೇಳಿದ್ದಾರೆ.
ಯುವಕರಿಗೆ ಅಭೂತಪೂರ್ವ ಆದ್ಯತೆ ನೀಡುವ, ಆಧುನಿಕ ತಂತ್ರಜ್ಞಾನವನ್ನು ಭಾರತದಲ್ಲೂ ಬೇರೂರುವಂತೆ ಮಾಡುವ, ಕೋಟ್ಯಂತರ ಸಂಖ್ಯೆಯಲ್ಲಿ ಉದ್ಯೋಗ ಅವಕಾಶ ಸೃಷ್ಟಿಸುವ, ಮಧ್ಯಮವರ್ಗಕ್ಕೆ ಬಂಪರ್ ಕೊಡುಗೆ ನೀಡುವ, ಆಧುನಿಕ ಶಿಕ್ಷಣಕ್ಕೆ ಹೊಸ ಭರವಸೆ ನೀಡುವ ಅದ್ಭುತ ಬಜೆಟ್ ಇದಾಗಿದೆ ಎಂದು ಶರವಣ ಬಣ್ಣಿಸಿದ್ದಾರೆ.
ಹೊಸ ಮತ್ತು ಯುವ ಭಾರತ ಕಟ್ಟುವ ನಿಟ್ಟಿನಲ್ಲಿ , ಹೊಸ ತೆರಿಗೆ ಪದ್ಧತಿಯನ್ನು ಜಾರಿಗೊಳಿಸುವ ದೃಷ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾರಥ್ಯದಲ್ಲಿ ಇದೊಂದು ದಾಖಲೆ ಬಜೆಟ್ ಎಂದು ಶರವಣ ವಿಶ್ಲೇಷಣೆ ಮಾಡಿದ್ದಾರೆ.
ಶನಿವಾರದಂದು ಅಪ್ಪಿ ತಪ್ಪಿಯೂ ಈ ಕೆಲಸಗಳನ್ನ ಮಾಡಬೇಡಿ…! ಶನಿ ಹೆಗಲೇರುತ್ತೆ
ಆಧುನಿಕತೆಯತ್ತ ಭಾರತ ದಾಪುಗಾಲು ಹಾಕುತ್ತಿರುವ ಈ ಹೊತ್ತಲ್ಲಿ ಆನ್ ಲೈನ್ ವ್ಯವಹಾರದ ವ್ಯಾಪ್ತಿಗೆ ಬರುವ ಗಿಗ್ ಒಂದು ಕೋಟಿ ಕೆಲಸಗಾರರಿಗೆ ಸಾಮಾಜಿಕ ಭದ್ರತೆ ನೀಡಿರುವುದು ಹೊಸ ರೀತಿಯ ಸುಧಾರಣೆಗಳಾಗಿವೆ ಎಂದು ಅವರು ಹೇಳಿದ್ದಾರೆ.
ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸಾಲ ಸೌಲಭ್ಯದ ಪ್ರಮಾಣ ಹೆಚ್ಚಿಸಿರುವುದು, ಮದ್ಯಮ ವರ್ಗಗಳ ದುಡಿಮೆ ಗೆ ಪೂರಕವಾಗಿ 12ಲಕ್ಷದ ವರೆಗೆ ಶೂನ್ಯ ತೆರಿಗೆ ವ್ಯವಸ್ಥೆ ಜಾರಿಗೆ ತಂದಿರುವುದು ಭಾರತ ಆರ್ಥಿಕ ರಂಗದ ದೊಡ್ಡ ಪ್ರಯೋಗವಾಗಿದೆ ಎಂದು ಶರವಣ ಹೇಳಿದ್ದಾರೆ.
ಏ ಐ ತಂತ್ರಜ್ಞಾನ ಅಭಿವೃದ್ಧಿಗೆ 500ಕೋಟಿ, ಸುಮಾರು 6ಸಾವಿರ ಐಐಟಿ ಸೀಟುಗಳ ಹೆಚ್ಚಳ, 10ಸಾವಿರ ಮೆಡಿಕಲ್ ಸೀಟುಗಳ ಹೆಚ್ಚಳ ಇವು ಜಾಗತಿಕ ಮಟ್ಟದಲ್ಲಿ ನಮ್ಮ ಆಧುನಿಕ ಉನ್ನತ ಶಿಕ್ಷಣವನ್ನು ಸಣ್ಣದ್ಧಗೊಳಿಸುತ್ತಿರುವ ಮೋದಿ ಅವರ ದೂರದೃಷ್ಟಿ ಎನ್ನುವುದು ಹಿರಿಮೆಯ ಸಂಗತಿ ಆಗಿದೆ. ನಗರ ಪ್ರದೇಶದ ಬಡವರಿಗೆ, ಆಧುನಿಕ ಹೊಸ ನಗರಗಳಿಗೆ, ಎಲ್ಲ ಸರಕಾರಿ ಶಾಲೆಗಳಲ್ಲಿ ಬ್ರಾಡ್ ಬ್ಯಾಂಡ್ ಸೌಕರ್ಯ ಸೇರಿ..ರೈತರಿಗೆ ಅಭೂತಪೂರ್ವ ಕೊಡುಗೆ ನೀಡಲಾಗಿದೆ ಎಂದಿದ್ದಾರೆ.
ಜನರ ಜೇಬುಗಳಲ್ಲಿ ಹಣ ಇರುವಂತೆ ಮಾಡುವ ಮೂಲಕ ವ್ಯವಸ್ಥೆಯ ವಹಿವಾಟಿನಲ್ಲಿ ಹಣ ಚಲಾವಣೆ ಆಗುವಂತೆ ಮಾಡಿ ದೇಶದ ಆರ್ಥಿಕ ಸ್ಥಿತಿ ಅಭಿವೃದ್ಧಿಯಂತೆ ಮಾಡುವ ಈ ಪ್ರಯೋಗ ಭಾರತವನ್ನು ಸಧೃಡ ದೇಶವನ್ನಾಗಿ ಮಾಡುವುದು ನಿಶ್ಚಿತ ಎಂದು ಶರವಣ ಅವರು ಅಭಿಪ್ರಾಯ ಪಟ್ಟಿದ್ದಾರೆ.