ಬೀದರ್ : ಲಂಚ ಪಡೆಯುತ್ತಿರುವಾಗಲೇ ಬುಡಾ ಆಯುಕ್ತರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಬುಡಾ ಕಚೇರಿಯಲ್ಲಿನ ಲಂಚಾವತಾರದ ಬಗ್ಗೆ ಹಲವು ದೂರುಗಳು ಬಂದ ಹಿನ್ನಲೆ ಲೋಕಾಯುಕ್ತ ಎಸ್ಪಿ ಉಮೇಶ್ ಮಾರ್ಗದರ್ಶನ ದಲ್ಲಿ ಬೀದರ್ ಲೋಕಾಯುಕ್ತ ಡಿವೈಎಸ್ಪಿ ಹಣಮಂತರಾಯ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ. ಬೀದರ್ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶ್ರೀಕಾಂತ್ ಚಿಮ್ಮಕೋಡೆ ಹಾಗೂ ಸದಸ್ಯ ಚಂದ್ರಕಾಂತ ರೆಡ್ಡಿ ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತರ ಬಲೆಗೆ ಬಿದಿದ್ದಾರೆ.
ವಕ್ಫ್ ಸಚಿವೆಯಾಗಿದ್ದ ನನ್ನ ಆಸ್ತಿಯೇ ವಕ್ಫ್ ಹೆಸರಿಗೆ : ಉಗ್ರಹೋರಾಟವೆಂದ ಶಶಿಕಲಾ ಜೊಲ್ಲೆ
ಬುಡಾ ಕಮೀಷನರ್ ಶ್ರೀಕಾಂತ ಚಿಮ್ಮಕೋಡೆ ಮತ್ತು ಸತೀಶ್ ನೌಬಾದೆ ಅವರ ಲೇಔಟ್ ನಿರ್ಮಾಣಕ್ಕೆ ಅನೂಮೋದನೆ ನೀಡಲು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಬುಡಾದಿಂದ ಲೇಔಟ್ ವಿನ್ಯಾಸ ಪೂರ್ಣ ರಿಲೀಸ್ ಮಾಡಲು 50 ಲಕ್ಷ ಲಂಚಕ್ಕೆ ಬೇಡಿಕೆಯನ್ನು ಇಟ್ಟಿದ್ದರು. ಈ ಸಂಬಂಧ ಸತೀಶ್ ನೌಬಾದೆ ಎಂಬುವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. 50 ಲಕ್ಷಕ್ಕೆ ಬೇಡಕೆ ಇಟ್ಟು, 10 ಲಕ್ಷ ಹಣ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬುಡಾ ಆಯುಕ್ತರ ಆದೇಶದ ಮೇರೆಗೆ ಲಂಚದ ಹಣ ತೆಗೆದುಕೊಳ್ಳುತ್ತಿದ್ದ ಆಪ್ತ ಸಿದ್ದು ಹೂಗಾರ ರೆಡ್ ಹ್ಯಾಂಡಾಗಿ ಸಿಕ್ಕಿಬಿದಿದ್ದಾರೆ. ಬಳಿಕ ಮೂವರನ್ನು ಬಂಧಿಸಿ, ಲೋಕಾಯುಕ್ತ ಕಚೇರಿಗೆ ಕರೆದೊಯ್ಯಲಾಗಿದೆ.