ಬೆಂಗಳೂರು: ಕೇಂದ್ರ ಸರ್ಕಾರದ ಭಾರತ್ ಬ್ರ್ಯಾಂಡ್ ಅಕ್ಕಿ (Bharat Brand Rice)ಯೋಜನೆಗೆ ಇಂದು ಚಾಲನೆ ಸಿಕ್ಕಿದೆ. ಕೇಂದ್ರದಲ್ಲಿ ಅಮಿತ್ ಶಾ ಭಾರತ್ ಅಕ್ಕಿ ಗೆ ಚಾಲನೆ ಕೊಟ್ಟ ಹಿನ್ನೆಲೆ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಅವರು ಈ ಭಾರತ್ ಬ್ರಾಂಡ್ ಅಕ್ಕಿ ಯೋಜನೆಗೆ ಚಾಲನೆ ನೀಡಿದರು.
ಇಂದಿನಿಂದ 29 ರೂಪಾಯಿಗೆ ಸಿಲಿದೆ ಒಂದು ಕೆಜಿ ಅಕ್ಕಿ ದೊರೆಯಲಿದ್ದು ನಾಫೆಡ್ಸ್ ನಿಂದ 29 ರೂಪಾಯಿ ಅಕ್ಕಿ ವಿತರಣೆಗೆ ಸಿದ್ಧತೆ ನಡೆದಿದೆ. ಜನರಿಗೆ ಕಡಿಮೆ ದರದಲ್ಲಿ ಅಕ್ಕಿ ನೀಡುವ ಹಿನ್ನೆಲೆ ರೈತರಿಂದ ನೇರವಾಗಿ ಅಕ್ಕಿ ಖರೀದಿಸಿ ಕಡಿಮೆ ಬೆಲೆಗೆ ವಿತರಣೆ
ಒಟ್ಟು 25 ಮೊಬೈಲ್ ವ್ಯಾನ್ ಗಳ ಮೂಲಕ ಅಕ್ಕಿ ವಿತರಣೆ ಬೆಂಗಳೂರಿನಲ್ಲಿ 5 ಕಡೆಗಳಲ್ಲಿ ಮೊಬೈಲ್ ವ್ಯಾನ್ಸ್ ಸೇವೆ ಇದನ್ನ ಹೊರತುಪಡಿಸಿ ರಾಜ್ಯಾದ್ಯಂತ ಸಂಚರಿಸಲಿರೋ 20 ಮೊಬೈಲ್ ವಾನ್ ಗಳು
ಈಗಾಗಲೇ ಕಡ್ಲೇಬೇಳೆ, ಹಾಗೂ ಗೋಧಿ ಹಿಟ್ಟನ್ನ ಕಡಿಮೆ ಬೆಲೆಗೆ ನೀಡಲಾಗ್ತಿದೆ ಎಲ್ಲಾ ರಿಲಾಯನ್ಸ್ ಮಾರ್ಟ್ ನಲ್ಲೂ ಮುಂದಿನ ನಾಲ್ಕು ದಿನಗಳಲ್ಲಿ ಅಕ್ಕಿ ಸಿಗಲಿದೆ ಆನ್ ಲೈನ್ ಹೋಂ ಡಿಲವರಿ ಆ್ಯಪ್ ಗಳಲ್ಲೂ ಅಕ್ಕಿ ದೊರೆಯಲಿದೆ
ಕಾರ್ಯಕ್ರಮದಲ್ಲಿ ಶಾಸಕ ಎಸ್.ಆರ್ ವಿಶ್ವನಾಥ್ ಸೇರಿ ಹಲವು ಮುಖಂಡರು ಭಾಗಿಯಾಗಿದ್ದರು.