ಶಿವಮೊಗ್ಗ:- ಯಡಿಯೂರಪ್ಪ ಹಾಗೂ ಅವರ ಪುತ್ರರು ನನ್ನ ಕ್ಷಮೆ ಕೇಳಬೇಕು ಎಂದು ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದ್ದಾರೆ.
IPL 2024: ರಾಜಸ್ಥಾನ್ ರಾಯಲ್ಸ್ ಗೆ ಸೋಲಿನ ರುಚಿ ತೋರಿಸಿದ ಹೈದರಾಬಾದ್..!
ಈ ಸಂಬಂಧ ಮಾತನಾಡಿದ ಅವರು, ನರೇಂದ್ರ ಮೋದಿ ಫೋಟೋ ಬಳಸಬಾರದು ಎಂದು ಬಿಜೆಪಿ ನಾಯಕರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ನರೇಂದ್ರ ಮೋದಿ ಫೋಟೋ ಬಳಸಬೇಡಿ ಎಂದು ದೂರು ನೀಡಿದವರಿಗೆ ಮುಖಭಂಗವಾಗಿದೆ. ನರೇಂದ್ರ ಮೋದಿಯವರ ಫೋಟೋ ಬಳಕೆಗೆ ನನಗೆ ಅಧಿಕಾರ ಸಿಕ್ಕಿದೆ. ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡುತ್ತೇನೆ. ಈ ಚುನಾವಣೆಯಲ್ಲಿ ಜೀವನ ಪೂರ್ತಿ ಅವರ ಫೋಟೋ ಬಳಸುತ್ತೇನೆ. ನರೇಂದ್ರ ಮೋದಿಯವರ ವಿಚಾರಧಾರೆಯನ್ನು ನಾನು ಎಲ್ಲರಿಗೂ ತಿಳಿಸುತ್ತೇನೆ ಎಂದು ಹೇಳಿದ್ದಾರೆ.
ತುಂಬಾ ಸಂತೋಷದ ವಿಷಯ ಏನಂದ್ರೆ, ವಿಶ್ವ ನಾಯಕ ನನ್ನ ಜೊತೆ ಉಳಿದ್ದಿದ್ದಾರೆ. ನರೇಂದ್ರ ಮೋದಿ ನನ್ನ ಜೊತೆ ಉಳಿದರೆ ಅದೇ ನನಗೆ ಆನಂದ. ಈಶ್ವರಪ್ಪ ಮೋದಿ ಪೋಟೋ ಬಳಸ್ತಿದ್ದಾರೆ ಅಂತಾ ಬಿಜೆಪಿಯವರು ಕೋರ್ಟ್ಗೆ ಹೋಗಿದ್ದರು. ಚುನಾವಣಾ ಆಯೋಗ, ಕೋರ್ಟ್ ಅವರಿಗೆ ಸೊಪ್ಪು ಹಾಕಲಿಲ್ಲ. ಮೋದಿ ಅವರನ್ನು ನನ್ನ ಹೃದಯದಲ್ಲಿ ಇಟ್ಟುಕೊಂಡಿದ್ದೇನೆ. ಮೋದಿಯವರಿಗೆ ಅಪಮಾನ ಮಾಡಬಾರದು. ಗಣಪತಿ, ಈಶ್ವರನನ್ನು ಎಲ್ಲರೂ ಪೂಜೆ ಮಾಡ್ತಾರೆ. ನಿಮ್ಮ ಮನೆಯಲ್ಲಿ ಪೋಟೋ ಇಟ್ಟುಕೊಳ್ಳಬೇಡಿ ಅಂದರೆ ಹೇಗೆ? ಮೋದಿ ಅವರು ನನಗೆ ಮಾದರಿ ವ್ಯಕ್ತಿ, ಆದರ್ಶ ವ್ಯಕ್ತಿ. ನನ್ನ ಜೀವನಪೂರ್ತಿ ಮೋದಿ ಪೋಟೋ ಇಟ್ಟುಕೊಳ್ಳುತ್ತೇನೆ. ಯಾವುದೇ ಪಕ್ಷ ಅಥವಾ ವ್ಯಕ್ತಿ ನನ್ನನ್ನು ಮೋದಿಯವರಿಂದ ಬೇರ್ಪಡಿಸಲು ಸಾಧ್ಯವಿಲ್ಲ. ನರೇಂದ್ರ ಮೋದಿ ಪೋಟೋ ಬಳಸಲು ಹಿಂದೂ ಸಮಾಜಕ್ಕೆ ಅವಕಾಶ ಇದೆ. ನಾನು ಚುನಾವಣೆಗೆ ಪೂರ್ಣ ಪ್ರಮಾಣದಲ್ಲಿ ಮೋದಿ ಪೋಟೋ ಬಳಸುತ್ತೇನೆ ಎಂದು ಶಿವಮೊಗ್ಗದಲ್ಲಿ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ
![](https://ainlivenews.com/wp-content/uploads/2024/01/Ad-Banner-copy-scaled.jpg)