ಬೆಂಗಳೂರು:- ನನ್ನ ಸಾವಿಗೆ ನಾನೆ ಕಾರಣ ಎಂದು ಬರೆದಿಟ್ಟು ಜಮ್ಮು ಕಾಶ್ಮೀರ ಮೂಲದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಪಂಚೆ ಎತ್ತಿ ಕಟ್ಟಿ ನಾಟಿ ಮಾಡಿದ ಗೌಡ್ರು: ಬಳಿಕ ಭಾವುಕರಾಗಿದ್ದೇಕೆ ಕುಮಾರಸ್ವಾಮಿ!?
ತನ್ವೀರ್ ಮೃತ ವಿದ್ಯಾರ್ಥಿ ಎನ್ನಲಾಗಿದೆ. ಪ್ರತಿಷ್ಠಿತ ರೇವಾ ಯೂನಿವರ್ಸಿಟಿಯಲ್ಲಿ ತನ್ವೀರ್ ಬಿಎಸ್ಸಿ ಮಾಡುತ್ತಿದ್ದ. ಬಿಎಸ್ಸಿ ಸೆಕೆಂಡ್ ಇಯರ್ ಓದುತ್ತಿದ್ದ. ಇಂದು ಇದ್ದಕ್ಕಿದ್ದಂತೆ ಪಿ.ಜಿ ಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪಿ.ಜಿಯಲ್ಲಿನ ಕೆಲ ವಿದ್ಯಾರ್ಥಿಗಳು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹವನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ಪೊಲೀಸರು ರವಾನೆ ಮಾಡಿದ್ದಾರೆ.
ತನ್ವೀರ್ ನ ಪೋಷಕರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಕಶ್ಮೀರದಿಂದ ತನ್ವೀರ್ ಪೋಷಕರು ಬರುತ್ತಿದ್ದಾರೆ. ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.