ರಾಮನಗರ:- ಸೌದಿ ಅರೇಬಿಯಾದಲ್ಲಿ ಒಳ್ಳೆಯ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೋರ್ವನಿಂದ ಹಣ ಪಡೆದು ಕೆಲಸ ಕೊಡಿಸದೆ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.
ರಾಮನಗರದ ನಿವಾಸಿ ಮೊಹಮದ್ ನೂರ್ ಉದ್ದಿನ್ ಅವರಿಗೆ ವಂಚಿಸಲಾಗಿದ್ದು, ಸೌದಿಯಲ್ಲಿ ವ್ಯಕ್ತಿ ಪಡಬಾರದ ಕಷ್ಟ ಪಟ್ಟಿದ್ದಾನೆ. ಅಲ್ಲದೇ ಭಾರತಕ್ಕೆ ಮರಳಲು ಹಣದ ಕೊರತೆ ಎದುರಾದಾಗ ಕನ್ನಡಪರ ಸಂಘದವರು ಸಹಾಯ ಹಸ್ತ ಚಾಚಿದ್ದು, ವ್ಯಕ್ತಿ ಇಂಡಿಯಾಗೆ ಬರಲು ನೆರವಾಗಿದ್ದಾರೆ.
ಹೌದು, ರಾಮನಗರದ ನಿವಾಸಿಯಾಗಿರುವ ಮೊಹಮ್ಮದ್ ಅಶ್ಲಾಕ್ ಎಂಬುವವರಿಗೆ ಸುಮಾರು ಹನ್ನೊಂದು ತಿಂಗಳ ಹಿಂದೆ ಬೆಂಗಳೂರಿನ ಶಿವಾಜಿನಗರ ದಲ್ಲಿ ನೆಲೆಸಿದ್ದ ಮಹಮ್ಮದ್ ಪೀರ್ ಎಂಬ ಏಜೆಂಟ್ ಓರ್ವ ಪರಿಚಯ ಆಗಿದ್ದ. ಅಲ್ಲದೇ ಮೊಹಮದ್ ನೂರ್ ಉದ್ದಿನ್ ಗೆ ಸೌದಿ ಅರೇಬಿಯಾದಲ್ಲಿರುವ ಅಮೇಜಾನ್ ಕಂಪೆನಿಯಲ್ಲಿ ಸಹಾಯಕ ಹುದ್ದೆಯ ಕೆಲಸ ಕೊಡಿಸುವುದಾಗಿ ನಂಬಿಸಿ ಸುಮಾರು ರೂ. 1 ಲಕ್ಷ ಪಡೆದು ಮೊಹಮ್ಮದ್ ಅಶ್ಲಾಕ್ ರವರನ್ನು ಸೌದಿ ಅರೇಭಿಯಾಕ್ಕೆ ಕಳಿಸಿದ್ದ.
ಆದರೆ ಸೌದಿಗೆ ತೆರಳಿದ ವ್ಯಕ್ತಿಗೆ ಎರಡು ತಿಂಗಳು ಕೆಲಸ ಮತ್ತು ಸಂಬಳ ನೀಡದೆ ಕಾಯಿಸಿದ್ದಾರೆ. ಅಲ್ಲದೇ ಸರಿಯಾದ ಊಟ ಇಲ್ಲದೇ, ವ್ಯವಸ್ಥೆ ಇಲ್ಲದೇ ಗೃಹ ಬಂದನದ ರೀತಿ ಇರಿಸಿದ್ದಾರೆ. ಬಳಿಕ ಅಲ್ಲಿಂದ ಹೊರ ಬಂದ ಅಶ್ಲಾಕ್ ಕೆಲಸ ಇಲ್ಲದೇ ಭಾರತಕ್ಕೆ ಮರಳಿ ಬರಲು ಹಣ ಇಲ್ಲದೇ ಪರದಾಟ ನಡೆಸಿದರು. ಅಲ್ಲದೇ ಮಸೀದಿಯಲ್ಲಿ ವಾಸ ಮಾಡುತ್ತಿದ್ದರು.
ಇದನ್ನೆಲ್ಲಾ ಅರಿತ ಅಶ್ವಾಕ್ ರವರ ತಾಯಿ ಹಾಗು ಕುಟುಂಬದವರು ಅನಿವಾಸಿ ಭಾರತೀಯ ಸಮಿತಿ ಕಛೇರಿಗೆ ಭೇಟಿ ನೀಡಿ ತಮ್ಮ ಮಗನನ್ನು ಭಾರತಕ್ಕೆ ಕರೆಸುವಂತೆ ಕೋರಿದ್ದಾರೆ. ಕೂಡಲೇ ಮನವಿಗೆ ಸ್ಪಂದಿಸಿದ ಸೌದಿ ಅರೇಬಿಯಾ ಭಾರತೀಯ ರಾಯಭಾರಿ ಕಚೇರಿಗೆ ದೂರವಾಣಿ ಮುಖಾಂತರ ತಿಳಿಸಿ ತಕ್ಷಣ ಸ್ಪಂದಿಸಿ ಅನಿವಾಸಿ ಭಾರತೀಯ ಸಮಿತಿಯು ಜೆದ್ದಾ ಕಾನ್ಸುಲ್ ಜನರಲ್ ರನ್ನು ಸಂಪರ್ಕಿಸಿ ತ್ವರಿತವಾಗಿ ‘ಎಕ್ಸಿಟ್ ಪಾಸ್’ ದೊರೆಯುವಂತೆ ವ್ಯವಸ್ಥೆ ಮಾಡಲಾಯಿತು.
ಕನ್ನಡ ಸಂಘದವರ ಸಹಾಯ ಹಸ್ತ:
ಮೊಹಮ್ಮದ್ ಅಶ್ವಾಕ್ ರವರಿಗೆ ‘ಎಕ್ಸಿಟ್ ಪಾಸ್’ ದೊರೆಯುತ್ತಿದ್ದಂತೆ ಭಾರತಕ್ಕೆ ಹಿಂದಿರುಗಲು ಹಣವಿಲ್ಲದಿದ್ದಾಗ ಕೆ.ಎನ್.ಆರ್.ಐ ಜೆದ್ದಾ ಕನ್ನಡ ಸಂಘವು ವಿಮಾನ ಟಿಕೆಟ್ ಮತ್ತು ಭಾರತಕ್ಕೆ ವಾಪಸ್ಸಾಗುವ ವರೆಗೂ ವೆಚ್ಚಗಳನ್ನು ಭರಿಸಿ ನೆರವಾಗಿರುತ್ತಾರೆ. ತ್ವರಿತ ಗತಿಯಲ್ಲಿ ಸಹಾಯ ಮಾಡಿದ ಸಮಿತಿ ಅಧ್ಯಕ್ಷರಾಗಿರುವ ಶ್ರೀ ಸಿದ್ದರಾಮಯ್ಯ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷರಾದ ಡಾ. ಆರತಿ ಕೃಷ್ಣರವರಿಗೆ ಧನ್ಯವಾದಗಳನ್ನು ಮೊಹಮ್ಮದ್ ಅಶ್ವಾಕ್ ಹಾಗೂ ಅವರ ಕುಟುಂಬದವರು ಸಲ್ಲಿಸಿದ್ದಾರೆ.
ಹಾಗೂ ಹೊರದೇಶಗಳಲ್ಲಿ ಕೆಲಸವನ್ನರಸಿ ಹೊರಡಲು ನಿರ್ಧರಿಸುವ ಮುನ್ನ ಏಜೆಂಟ್ಗಳ ನೈಜತೆಯ ಬಗ್ಗೆ ಪರಿಶೀಲನೆ ಮಾಡದೇ ಅವರ ಮಾತಿಗೆ ಮರುಳಾಗಿ ಮೋಸ ಹೋಗದಿರಲು ಹಾಗೂ ಅಧಿಕೃತ ಎಜೆಂಟ್ಗಳ ಅಥವಾ ಸಂಬಂಧಿಸಿದ ಸರ್ಕಾರದ ಇಲಾಖೆಗಳ ಸಹಾಯವನ್ನು ಪಡೆಯಲು ಉಪಾಧ್ಯಕ್ಷರು ಈ ಮೂಲಕ ಕೋರಿದ್ದಾರೆ.