ಬೆಂಗಳೂರು:- ಸೆಲ್ಪ್ ಆಕ್ಸಿಡೆಂಟ್ ಗೆ ಬೈಕ್ ನಲ್ಲಿ ಬರ್ತಿದ್ದ ಸಹೋದರರು ಬಲಿಯಾಗಿರುವ ಘಟನೆ ಆನೇಪಾಳ್ಯ ಬಸ್ ನಿಲ್ದಾಣದ ಎದುರು ಬೆಳಗ್ಗೆ 5 ಗಂಟೆಗೆ ಜರುಗಿದೆ.
ಡಿಆರ್ ಐ ಅಧಿಕಾರಿಗಳ ಭರ್ಜರಿ ಭೇಟೆ- 38.4 ಕೋಟಿ ಮೌಲ್ಯದ ಡ್ರಗ್ಸ್ ಸೀಜ್!
ನೀಲಸಂದ್ರ ನಿವಾಸಿಗಳಾಗಿರೋ ಶೇಖ್ ಅಸ್ಲಾಂ ಬಷೀರ್(24), ಶೇಖ್ ಸಕೀಲ್ ಬಷೀರ್(23) ಮೃತ ಸಹೋದರರು. ರಸ್ತೆ ಬದಿ ಇದ್ದ ಪೋಲ್ ಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಫ್ರೆಂಡ್ ಬೈಕ್ ನಲ್ಲಿ ಬರ್ತಿದ್ದಾಗ ಈ ಘಟನೆ ಜರುಗಿದೆ.
ಹೆಲ್ಮೆಟ್ ಹಾಕದೇ ಬೈಕ್ ಚಲಾಯಿಸುತ್ತಿದ್ದೇ ಅಪಘಾತಕ್ಕೆ ಕಾರಣ. ಸದ್ಯ ಮೃತದೇಹಗಳು ಬೌರಿಂಗ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸ್ಥಳಕ್ಕೆ ಅಶೋಕ್ ನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು.