ರಾಯಚೂರು:- ಕಾಲ ಕೆಟ್ಟೋಯ್ತು ಮರ್ರೆ. ಆಸ್ತಿ, ಹಣದ ಮುಂದೆ ಸಂಬಂಧಕ್ಕೆ ಬೆಲೆಯೇ ಇಲ್ಲದಂತೆ ಆಗಿದೆ. ಹಣದ ಮುಂದೆ, ಅಣ್ಣ, ತಮ್ಮ, ಬಂಧು ಬಳಗಕ್ಕೆ ಕಿಂಚಿತ್ತೂ ಬೆಲೆ ಇಲ್ಲ ಎನ್ನುವುದನ್ನು ಸಾಕಷ್ಟು ಉದಾಹರಣೆ ಮೂಲಕ ತಿಳಿದಿದ್ದೇವೆ.
ಅವಳಿ ಬಾಳೆಹಣ್ಣು ತಿಂದರೆ ಟ್ವಿನ್ಸ್ ಮಕ್ಕಳಾಗ್ತಾರಾ!? ನಿಮಗೂ ಈ ಗೊಂದಲ ಇದ್ಯಾ!? ಇಲ್ಲಿದೆ ಉತ್ತರ!
ಅದೇ ರೀತಿ ರಾಯಚೂರಿನಲ್ಲಿ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಆಸ್ತಿಗಾಗಿ ಇಲ್ಲೊಬ್ಬ ಅಣ್ಣನೋರ್ವ ತಮ್ಮ ತೀರೊಗಿದ್ದಾನೆ ಎಂದು ಸುಳ್ಳು ಮರಣಪತ್ರ ಸೃಷ್ಟಿಸಿ ಬದುಕಿದ್ದವನನ್ನೇ ಸಾಯಿಸಿದ್ದಾನೆ.
ಸಿರವಾರ ತಾಲ್ಲೂಕಿನ ಕಲಂಗೇರಾ ಗ್ರಾಮದಲ್ಲಿ ಸುಳ್ಳು ಮರಣ ಪತ್ರ ಸೃಷ್ಟಿಸಿ, ತಮ್ಮನ ಆಸ್ತಿಯನ್ನು ಅಣ್ಣ ಕಬಳಿಸಿರುವ ಘಟನೆ ನಡೆದಿದೆ.
ವಿಚಾರ ತಿಳಿಯುತ್ತಿದ್ದಂತೆ ತಹಶೀಲ್ದಾರ ಕಚೇರಿಗೆ ಓಡೋಡಿ ಬಂದ ತಮ್ಮ ಬಸಪ್ಪ “ನಾನು..ಬದುಕಿದ್ದಿನಿ ನೋಡ್ರಿ” ಅಂತ ಅಳಲು ತೋಡಿಕೊಂಡಿದ್ದಾರೆ.
1.15 ಗುಂಟೆ ಜಮೀನಿಗಾಗಿ ಸಹೋದರರಾದ ಮಾನಪ್ಪ, ಬಸಪ್ಪ ಮತ್ತು ಗಂಗಪ್ಪ ಅವರ ಹೆಸರಿನಲ್ಲಿ ಜಂಟಿ ಪಹಣಿಗಳು ಇವೆ. ಈ ಜಮೀನುಗಳನ್ನು ಕಬಳಿಸುವ ನಿಟ್ಟಿನಲ್ಲಿ ಮಾನಪ್ಪ ತಮ್ಮನಾದ ಬಸಪ್ಪ “ಮೃತಪಟ್ಟಿದ್ದಾನೆ ಎಂದು ಸುಳ್ಳು ಮರಣ ಪ್ರತ್ರ” ಸೃಷ್ಟಿಸಿದ್ದಾನೆ. ಬಳಿಕ, ಬಸಪ್ಪನ ಹೆಸರಿನಲ್ಲಿರುವ ಜಮೀನನ್ನು ಮಾನಪ್ಪ ತನ್ನ ಮಗನ ಹೆಸರಿಗೆ ಮಾಡಿಕೊಂಡಿದ್ದಾನೆ. ಈ ಕೃತ್ಯಕ್ಕೆ ಇನ್ನೊಬ್ಬ ಸಹೋದರನಾದ ಗಂಗಪ್ಪ ಕೂಡ ಸಹಾಯ ಮಾಡಿದ್ದಾನೆ ಎಂದು ದೂರಿನಲ್ಲಿ ದಾಖಲಾಗಿದೆ.
ಅಕ್ರಮದಲ್ಲಿ ಗ್ರಾಮ ಆಡಳಿತಾಧಿಕಾರಿ, ಕಲಂಗೇರಾ ಮತ್ತು ಕಂದಾಯ ನಿರೀಕ್ಷಕರು, ಮಲ್ಲಟ ಭಾಗಿಯಾಗಿದ್ದಾರೆ. ಹೀಗಾಗಿ, ಇವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಸಿರವಾರ ತಹಸೀಲ್ದಾರ್, ರಾಯಚೂರು ಎಸಿ ಮತ್ತು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.